ವ್ಯವಸ್ಥೆ ಸರಿಯಿಲ್ಲ ಅನ್ನುವವರನ್ನು ನೋಡಿರುತ್ತೀರಿ.
ಅಥವಾ ನೀವೇ ವ್ಯವಸ್ಥೆ ಸರಿ ಇಲ್ಲ ಅಂತ ಗೊಣಗಿರುತ್ತೀರಿ.
ನೆನ್ನೆ ಒಬ್ಬರಿಗೆ ಒಂದು ಉದಾಹರಣೆ ನೀಡಿದೆ.
ಈಗ ನಮ್ಮ ನಗರದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಇಲ್ಲ ಅಂತ ಸರ್ಕಾರ ಒಂದು ಶೌಚಾಲಯ ಕಟ್ಟುತ್ತೆ. ಅದನ್ನು ಉಪಯೋಗಿಸಲು ಶುರುಮಾಡುವ ಸಾರ್ವಜನಿಕರಲ್ಲಿ ಯಾರಾದರೂ ಒಬ್ಬರು ನೀರು ಸರಿಯಾಗಿ ಹಾಕದೇ ಇದ್ದರೂ ಶೌಚಾಲಯ ಉಪಯೋಗಿಸಲು ಯೋಗ್ಯವಿಲ್ಲದಂತಾಗುತ್ತದೆ. ಹೌದಲ್ಲವ? ಎಂದೆ.
ಅದಕ್ಕವರು, ಮೆಂಟೆನೆನ್ಸ್ ಮಾಡುವವರನ್ನು ನಿಯೋಜಿಸಬೇಕು ಎಂದರು. ಅದು ಸರಿ. ಆದರೆ, ಉಪಯೋಗಿಸಿದ ಪ್ರತಿಯೊಬ್ಬರೂ ಸರಿಯಾಗಿ ನೀರು ಹಾಕಿದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಯಾರೋ ಒಬ್ಬರಿಂದ ಇಡೀ ವ್ಯವಸ್ಥೆಯೇ ಅವ್ಯವಸ್ಥೆಯಾಯಿತು. ಅವನ್ಯಾರೋ ಹಾಕಿಲ್ಲ ಅಂತ ಮತ್ತೊಬ್ಬನೂ ಹೀಗೆ ಮಾಡಿದುದರಿಂದ ಇಡೀ ವ್ಯವಸ್ಥೆಯೇ ಹೀಗಾಯಿತು. ಎಂದೆ. ಸುಮ್ಮನಾದರು.
ಇದೇ ಉದಾಹರಣೆಯನ್ನು ಭ್ರಷ್ಟಾಚಾರಕ್ಕೆ ಹೋಲಿಸಿ ನೋಡಬಹುದು. ಬಹುತೇಕ ಸಮಸ್ಯೆಗಳ ಸೃಷ್ಠಿಯ ಮೂಲವೇ ಭ್ರಷ್ಟಾಚಾರ. ಆದಕಾರಣ, ವ್ಯವಸ್ಥೆ ಅವ್ಯವಸ್ಥೆಯ ಆಗರವಾಯಿತು.
ಮತ್ತೊಂದು ಕಾರಣ, Nepotism. ಸ್ವಜನ ಪಕ್ಷಪಾತ... ಸ್ವಜಾತಿ ಪ್ರೇಮ.
ಅದಿರಲಿ,
ಶಾಲೆ, ಕಾಲೇಜು, ವ್ಯವಸ್ಥೆ ಸರಿ ಇಲ್ಲ.
ಆಸ್ಪತ್ರೆ, ವ್ಯವಸ್ಥೆ ಸರಿ ಇಲ್ಲ.
ಕೆಲಸ, ವ್ಯವಸ್ಥೆ ಸರಿ ಇಲ್ಲ,
ಗ್ರಂಥಾಲಯ, ವ್ಯವಸ್ಥೆ ಸರಿ ಇಲ್ಲ.
...
ಇಲಾಖೆ, ವ್ಯವಸ್ಥೆ ಸರಿ ಇಲ್ಲ. ಸರ್ಕಾರಿ ಕೆಲಸ ದೇವರ ಕೆಲಸ ಅಂತ ಬೋರ್ಡಿದೆ ಅಷ್ಟೆ. ಕೆಲಸವಾಗಬೇಕೆಂದರೆ ಅಲ್ಲಿ ಸಂಬಳ ತೆಗೆದುಕೊಳ್ಳುವವನಿಗೆ ನೀವು ಕಪ್ಪ ಕಾಣಿಕೆ ಅರ್ಥಾತ್ ಲಂಚ ಕೊಟ್ಟರೆ ಮಾತ್ರ ನಿಮ್ಮ ಕೆಲಸ ಆಗುತ್ತದೆ. ಅವನ್ಯಾಕೆ ಅಷ್ಟಕ್ಕೂ ಲಂಚ ಕೇಳುತ್ತಾನೆಂದರೆ ಅವನ ಮೇಲಿನವರು ಕೇಳುತ್ತಾರೆ, ಮೇಲಿನವನು ಯಾಕೆ ಕೇಳುತ್ತಾನೆ ಎಂದರೆ ಅವನು ಇಲಾಖೆಯ ಸಚಿವರಿಗೆ ಇಂತಿಷ್ಟು ಕೊಡಬೇಕು... ಹುಡುಕುತ್ತಾ ಹೋದರೆ ಬೇರು ವಿಧಾನಸೌಧದ ಬುಡದಲ್ಲಿ ಇದೆ!
ಇವುಗಳ ಜೊತೆ ಮತ್ತಷ್ಟು ಕಾರಣಗಳೂ ಇವೆ. ಇರಲಿ.
ಸೋ, ವ್ಯವಸ್ಥೆ ಸರಿ ಇಲ್ಲ.
ಇದು ಸರ್ಕಾರದ ಕತೆಯಾದರೆ, ಖಾಸಗಿಯದು ಮತ್ತೊಂದು ಅಧ್ವಾನ!!
ಮತ್ತೆ, ಏನು ಮಾಡಬೇಕು?
ಒಂದು ವ್ಯವಸ್ಥೆಯ ಅವ್ಯವಸ್ಥೆಯ ಜೊತೆ ರಾಜಿಯಾಗಿ ಇದ್ದು ಬಿಡಿ.
ಇಲ್ಲ, ವ್ಯವಸ್ಥೆಯಿಂದ ಹೊರಬಂದು ನೀವೇ ಒಂದು ಒಳ್ಳೆಯ ವ್ಯವಸ್ಥೆ ಕಟ್ಟಿಬಿಡಿ.
ಅಷ್ಟೆ!
ಮೊನ್ನೆ ಕಿರಿಯ ಮಾಧ್ಯಮ ವಿದ್ಯಾರ್ಥಿಮಿತ್ರರೊಬ್ಬರು ಯಾರೆಂದರೆ ಅವರೇ ವೆಬ್ ಪತ್ರಿಕೆಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಅವರಿಗೆ ಉತ್ತರವಾಗಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನೀವೊಂದು ಮಾದರಿ ವೆಬ್ ಪತ್ರಿಕೆ ಮಾಡಿ ಸೈ ಎನಿಸಿಕೊಳ್ಳಿ ಎಂದು ಹೇಳಿದೆ. ಆಗ ಹೊಳೆದ ಚಿಂತನೆಯೇ ಈ ಲೇಖನ.
ವ್ಯವಸ್ಥೆ ಸರಿ ಇಲ್ಲ ಅಂತ ಕೊರಗುತ್ತಾ ಕೂಡುವ ಬದಲು ಒಂದೊಳ್ಳೆ ವ್ಯವಸ್ಥೆಯನ್ನು ಸೃಷ್ಟಿಸಿ.
ಅದುಬಿಟ್ಟು,
ಶುಭವಾಗಲಿ,
- ಗುಬ್ಬಚ್ಚಿ ಸತೀಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ