ಗೋಮಿನಿ ಪ್ರಕಾಶನ – ಒಂದು ಕಿರು ಪರಿಚಯ
ಗುಬ್ಬಚ್ಚಿ ಸತೀಶ್ ಅವರ “ಮಳೆಯಾಗು ನೀ...” ಕವನ ಸಂಕಲನ ಪ್ರಕಟಿಸುವ ಮೂಲಕ 2010ರಲ್ಲಿ ಆರಂಭವಾದ ಗೋಮಿನಿ ಪ್ರಕಾಶನವು ಇದುವರೆವಿಗೂ 75ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಗುಬ್ಬಚ್ಚಿ ಸತೀಶ್ ಅವರ ಪುಸ್ತಕಗಳನ್ನು ಪ್ರಕಟಿಸುತ್ತಲೇ ಗುಬ್ಬಚ್ಚಿ ಸತೀಶ್ ಅವರ ಶ್ರೀಮತಿ ಜಿ.ಸಿ. ಚಂಪರಾಣಿ ಇತರ ಉದಯೋನ್ಮುಖ ಮತ್ತು ಪ್ರತಿಭಾನ್ವಿತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ಪುಸ್ತಕಗಳನ್ನು ಕೂಡ ಪ್ರಕಟಿಸಿದ್ದಾರೆ. ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕನ್ನಡ ಮಾತ್ರವಲ್ಲದೇ, ಇಂಗ್ಲೀಷ್ ಪುಸ್ತಕಗಳು ಕೂಡ ಪ್ರಕಟವಾಗಿವೆ.
ಗೋಮಿನಿ ಪ್ರಕಾಶನದ ಪ್ರಕಟಣೆಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಒಳಗೊಂಡಂತೆ ಇತರ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಗುಬ್ಬಚ್ಚಿ ಸತೀಶ್ ಪ್ರಕಾಶನದ ಸಂಪಾದಕರಾಗಿದ್ದು, ಪ್ರಕಾಶನವು ತನ್ನದೇ ವೆಬ್‌ಸೈಟ್ ಮೂಲಕ ಪ್ರಕಟಣೆಗಳನ್ನು ಮಾರುವುದಲ್ಲದೆ ರಾಜ್ಯದಾದ್ಯಂತ ವಿತರಣೆಯ ವ್ಯವಸ್ಥೆಯನ್ನು ಹೊಂದಿದೆ.
ಪ್ರಕಾಶನದ ವತಿಯಿಂದ ತುಮಕೂರಿನಲ್ಲಷ್ಟೇ ಅಲ್ಲದೇ, ಬೆಂಗಳೂರಿನಲ್ಲಿ ಕೂಡ ಪುಸ್ತಕ ಬಿಡುಗಡೆ, ಪರಿಚಯ ಕರ‍್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯವನ್ನು ಪಸರಿಸುವ ಕೆಲಸವನ್ನೂ ಕೂಡ ಪ್ರಕಾಶನ ಮಾಡಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಏರ್ಪಡಿಸುವ ಪುಸ್ತಕ ಮೇಳಗಳಲ್ಲೂ ಕೂಡ ಪ್ರಕಾಶನ ಯಶಸ್ವಿಯಾಗಿ ಭಾಗವಹಿಸಿ, ತನ್ನ ಪ್ರಕಟಣೆಗಳನ್ನು ಓದುಗರಿಗೆ ತಲುಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ.
ಈಗ ನಾಡಿನ ಪ್ರಮುಖ ಯುವ ಸಾಹಿತಿಯಾಗಿರುವ ಶ್ರುತಿ ಬಿ.ಎಸ್. ಅವರ ಮೊದಲ ಪುಸ್ತಕ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋಸರ್ಕೋಮ” ಪುಸ್ತಕವನ್ನು ಪ್ರಕಟಿಸಿ, ನಂತರ ಅವರ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ನಾಡಿನ ಪ್ರಮುಖ ನ್ಯಾನೋ ಕತೆಗಾರ ವಿ. ಗೋಪಕುಮಾರ್ ಅವರ ಮೂರು ನ್ಯಾನೋ ಕತೆಗಳ ಸಂಕಲನಗಳು ಸೇರಿದಂತೆ ಒಟ್ಟು ಇದುವರೆವಿಗೂ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. “ಮೈಸೂರಿನ ಪುಟಗಳು” ಯೂಟ್ಯೂಬ್ ಖ್ಯಾತಿಯ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ಪ್ರಖ್ಯಾತ “ಮರೆತುಹೋದ ಮೈಸೂರಿನ ಪುಟಗಳು” ಪುಸ್ತಕವನ್ನು ಒಳಗೊಂಡಂತೆ ಎರಡು ಪುಸ್ತಕಗಳು ಪ್ರಕಟವಾಗಿವೆ. ಸಮಕಾಲೀನ ಕನ್ನಡ ಸಾಹಿತ್ಯದ ಮೇರುಪ್ರತಿಭೆ ಕವಿ ವಾಸುದೇವ ನಾಡಿಗರ ಹಲವು ಸಂಕಲನಗಳು ಪ್ರಕಟವಾಗಿ, ಇವರ ಐದು ಸಂಕಲನಗಳ ಸಂಕಲನ “ಅನುಕ್ತ” ಕೂಡ ಪ್ರಕಟವಾಗಿ ನಾಡಿನ ಕಾವ್ಯಪ್ರಿಯರ ಮನಗೆದ್ದಿದೆ. ಇತ್ತೀಚೆಗೆ ಪ್ರಕಟವಾದ ಪೂರ್ಣಿಮಾ ಮಾಳಗಿಮಾನಿ ಅವರ ಕಾದಂಬರಿ “ಇಜಯಾ” ತಿಂಗಳೊಳಗೆ ಐನೂರು ಪ್ರತಿಗಳ ದಾಖಲೆ ಮಾರಾಟ ಕಂಡು ಕನ್ನಡ ಸಾಹಿತ್ಯಕ್ಕೆ ಗೋಮಿನಿ ಪ್ರಕಾಶನದ ಮೂಲಕ ಮತ್ತೊಬ್ಬ ಸಾಹಿತಿಯ ಪರಿಚಯ ಮಾಡಿಕೊಟ್ಟಿದೆ.
ಕಲಾವಿದರಾದ ಅಜಿತ್ ಎಸ್. ಕೌಂಡಿನ್ಯ, ಕತೆಗಾರ ಎಚ್.ಕೆ. ಶರತ್, ಬೆಂಗಳೂರಿನ ಶ್ರೀ ವೆಂಕಟೇಶ್ ಅವರ ರೀಗಲ್ ಪ್ರಿಂಟ್ಸ್ ಸೇರಿದಂತೆ ಕಲಾವಿದರಾದ ಸಂತೋಷ್ ಸಸಿಹಿತ್ಲು, ಮುಂಬೈಯ ಟ್ರಿನಿಟಿ ಅಕಾಡೆಮಿ ಫಾರ್ ಕಾರ್ಪೋರೇಟ್ ಟ್ರೈನಿಂಗ್ ಲಿಮಿಟೆಡ್ ಸಂಸ್ಥೆಗಳಂತಹ ಉತ್ತಮ ತಂಡದೊಂದಿಗೆ ಗೋಮಿನಿ ಪ್ರಕಾಶನವು ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿ, ಆಧುನಿಕ ಸೌಲಭ್ಯ ಒದಗಿಸಿರುವ ಎಲ್ಲಾ ಮಾಧ್ಯಮಗಳ ಮೂಲಕ ಸಕ್ರಿಯವಾಗಿ ಪುಸ್ತಕಗಳ ಪರಿಚಯ ಮತ್ತು ಮಾರಾಟದಲ್ಲಿ ಪ್ರಕಾಶನ ತೊಡಗಿಕೊಂಡಿದೆ.
ತನ್ನ ಪುಸ್ತಕಕ್ಕೆ ಪ್ರಕಾಶಕರು ಸಿಗಲಿಲ್ಲವೆಂಬ ಬೇಸರದಿಂದ ಹೊರಬಂದು, ಅಂಕಿತ ಪುಸ್ತಕದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರ ಕಿವಿಮಾತಿನಂತೆ, ಕತೆಗಾರ ವಸುಧೇಂದ್ರ ಅವರ ಸಲಹೆ ಮತ್ತು ತುಮಕೂರಿನ ಪ್ರೊ. ಎಂ.ಎಚ್. ನಾಗರಾಜು ಅವರ ಸಲಹೆಗಳನ್ನು ಪರಿಗಣಿಸಿ, ಬಹುಮುಖ್ಯವಾಗಿ ಕತೆಗಾರ ಕೆ. ಗಣೇಶ್ ಕೋಡೂರ್ ಅವರ ಮಾರ್ಗದರ್ಶನದಲ್ಲಿ ಗುಬ್ಬಚ್ಚಿ ಸತೀಶ್ ತಮ್ಮ ಶ್ರೀಮತಿ ಚಂಪ ಸತೀಶ್ ಅವರೊಂದಿಗೆ ಶುರುಮಾಡಿದ ಗೋಮಿನಿ ಪ್ರಕಾಶನ, ಸಕ್ರಿಯವಾಗಿ ಪುಸ್ತಕ ಪ್ರಕಾಶನದಲ್ಲಿ ತೊಡಗಿಕೊಂಡಿದೆ. ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ʼಅತ್ಯುತ್ತಮ ಪುಸ್ತಕ ಸೊಗಸು ಬಹುಮಾನʼ (ಮಕ್ಕಳ ಹಿರಿಯ ಸಾಹಿತಿ ಶ್ರೀ ತಮ್ಮಣ್ಣ ಬೀಗಾರ ಅವರ "ಫ್ರಾಗಿ ಮತ್ತು ಗೆಳೆಯರು" ಕಾದಂಬರಿ) ಸಂದಿದೆ.
ಪ್ರಕಾಶನದ ವಿಳಾಸ:
ಗೋಮಿನಿ ಪ್ರಕಾಶನ
“ಅಪರಿಮಿತ”, 6ನೇ ಕ್ರಾಸ್,
ಚನ್ನಕೇಶವ ಲೇಔಟ್,
ಗೂಳೂರು – 572118
ತುಮಕೂರು ತಾಲ್ಲೂಕು ಮತ್ತು ಜಿಲ್ಲೆ.
ಮೊಬೈಲ್: 99866 92342
ಇಮೈಲ್: sathishgbb@gmail.com
ವೆಬ್‌ಸೈಟ್: www.gominiprakashana.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ