ಭಾನುವಾರ, ಮಾರ್ಚ್ 17, 2024

ಹಿರಿತನ (ನ್ಯಾನೋ ಕತೆ)


ಯತೀಶ, ಆನಂದ, ಲಿಂಗಪ್ಪ, ರಾಜ ಎಲ್ಲಾ ಹೇಗಿದ್ದೀರ? ಏನು ಓದುದ್ರಿ? ಏನು ಬರೆದ್ರಿ? ಎನ್ನುತ್ತಲೇ ಕಾಫಿ ಬಾರಿಗೆ ಬರುತ್ತಿದ್ದ ಹಿರಿಯ ಸಾಹಿತಿಗಳನ್ನು ಕಂಡ ಕೂಡಲೇ ಅಲ್ಲಿದ್ದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಎದ್ದು ನಿಂತು ಗೌರವಿಸುತ್ತಿದ್ದರು. ಅದು ಆಗ. ಇತ್ತೀಚೆಗೆ ಈ ಹಿರಿಯ ಸಾಹಿತಿಗಳಿಗೆ ಯಾರೂ ಸಿಗಲಿಲ್ಲವೆಂದು ಗೌರವವೊಂದು ಸಮರ್ಪಣೆಯಾಗಿದೆ. ಈಗ ಅವರು ಠೀವಿಯಿಂದ ಏನನ್ನೂ ಮಾತನಾಡದೆ, ಯಾರನ್ನೂ ಮಾತನಾಡಿಸದೆ ಕಾಫಿ ಬಾರಿಗೆ ಗಜಗಾಂಭೀರ್ಯದಲ್ಲಿ ಬರುತ್ತಾರೆ. ಆ ಸಮಯಕ್ಕೆ ಸರಿಯಾಗಿ ಅಲ್ಲಿಂದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಏನೋ ಕೆಲಸವಿರುವವರಂತೆ ಗೊಣಗಾಡುತ್ತಾ ಮೆಲ್ಲನೆ ಜಾಗ ಖಾಲಿ ಮಾಡುತ್ತಾರೆ.

- ಗುಬ್ಬಚ್ಚಿ ಸತೀಶ್.

6 ಕಾಮೆಂಟ್‌ಗಳು:

  1. ಯಾರು ಈ ಹಿರಿಯ ಸಾಹಿತಿಗಳು? ಹೇಳಿ ಪುಣ್ಯ ಕಟ್ಟಿಕೊಳ್ಳಿ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೆಸರು ಹೇಳಲು ಹೋಗಬಾರದು ಸರ್.‌ ಜಗತ್ತಿನ ಬಹುತೇಕ ಕತೆಗಳು ಹುಟ್ಟುವುದು ಹೀಗೆಯೇ ಅಲ್ಲವೇ? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

      ಅಳಿಸಿ
  2. ಬದಲಾದ ಕಾಲ. ಬರಹಕ್ಕಿಂತ ಬದುಕು ದೊಡ್ಡದು ಅಂತ ಗೊತ್ತಾದರೆ ಜೊತೆಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ನಗುತ್ತಾ ಹರಟೆ ಹೊಡೆಯಬಹುದು.

    ಪ್ರತ್ಯುತ್ತರಅಳಿಸಿ

ದಾವಣಗೆರೆಯಲ್ಲಿ ಸಿಟಿ ಬಸ್‌ ಹಿಡಿದು...

 ಸ್ನೇಹಿತರೇ, ನಮಸ್ಕಾರ. ನಾನು 2025ರ ಆಗಸ್ಟ್‌ ತಿಂಗಳಿನಿಂದ ದಾವಣಗೆರೆ ನಿವಾಸಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದು. 2020ರ ಆಗಸ್ಟ್‌ ತಿಂಗಳಿನಿಂದ ನಾನು ನನ್ನ ಪ್ರೀತಿ...