ಜರ್ಮನ್ ಮೂಲ : ಅರ್ನ್ಸ್ಟ್ ಜಂಡಿ
ಇಂಗ್ಲೀಷ್‍ಗೆ : ಮೈಕೆಲ್ ಹಮ್‍ಬರ್ಗರ್
ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್
ಅವನು ಮರವೊಂದರ ಬಳಿ ಬಂದ.
ಆ ಮರದಡಿಯಲ್ಲಿ ತನ್ನ ಮನೆ ಕಟ್ಟಿದ.
ಮರದಿಂದಲೇ ಕತ್ತರಿಸಿಕೊಂಡು
ಕೋಲು ಮಾಡಿಕೊಂಡ.
ಕೋಲು ಭರ್ಜಿಯಾಯಿತು.
ಭರ್ಜಿ ಬಂದೂಕಾಯಿತು.
ಬಂದೂಕು ಗನ್ನಾಯಿತು.
ಗನ್ನು ಸಿಡಿಗುಂಡಾಯಿತು.
ಸಿಡಿದ ಸಿಡಿಗುಂಡು ಅವನ ಮನೆಗೇ ಬಡಿಯಿತು
ಮತ್ತು ಮರವನ್ನು ಬೇರುಸಮೇತ ಸೀಳಿಹಾಕಿತು.
ಆಶ್ಚರ್ಯಗೊಂಡ ಅವನು ಅಲ್ಲಿಯೇ ನಿಂತಿದ್ದ.
ಆದರವನು, ಎಚ್ಚರಗೊಳ್ಳಲೇ ಇಲ್ಲ.
(ಈ ಕವನದಲ್ಲಿ, ಜರ್ಮನ್ ಕವಿ ಅರ್ನ್ಸ್ಟ್ ಜಂಡಿ (Ernst Jandi) ಮಾನವ ಸ್ವಾರ್ಥಿ ಎಂದು ಹೇಳುತ್ತಿದ್ದಾರೆ. ತಾನು ಪ್ರಕೃತಿಯನ್ನು ಉಪಯೋಗಿಸುಕೊಳ್ಳುವುದರ ಜೊತೆಗೆ ಹಾಳು ಮಾಡುವ ಮಾನವನ ಸ್ವಾರ್ಥ ಗುಣ ಇಲ್ಲಿ ಮೂಡಿಬಂದಿದೆ. ಕವಿ ಬೇಕೆಂತಲೇ “ನಿದ್ರಿತ” (Asleep) ಎಂಬ ಶೀರ್ಷಿಕೆಯನ್ನು ಕೊಟ್ಟಿರುತ್ತಾರೆ. ಮನುಷ್ಯ ಸದಾಕಾಲ ಕಣ್ಣು ತೆರೆದುಕೊಂಡೇ ನಿದ್ರಿತನಾಗಿರುತ್ತಾನೆ ಮತ್ತು ಕವನದ ಕೊನೆಯಲ್ಲಿ ಅವನು ಎಚ್ಚರಗೊಂಡು ಆಶ್ಚರ್ಯಪಟ್ಟರೂ ಅವನು ಮಾಡಿದ ಅವಾಂತರ ಅವನ ಅರಿವಿಗೆ ಬರುವುದಿಲ್ಲ ಎಂದು ಕವಿ ವಿಶಾದಿಸುತ್ತಾರೆ.)
ಮನುಷ್ಯನ ಸ್ವಾರ್ಥಕ್ಕೆ ಎಲ್ಲೆ ಕಟ್ಟುವರ್ಯಾರೂ ಇಲ್ಲಾ....
ಪ್ರತ್ಯುತ್ತರಅಳಿಸಿಭೂಮಿ ಬರಡಾಗಬೇಕು ಸ್ವಾರ್ಥ ಅಳಿಯಬೇಕೇನೋ.....
ಅರ್ಥವತ್ತಾಗಿತೆ ಕವನ..
ತರ್ಜುಮೆಯೂ ಚನ್ನಾಗಿದೆ...
ಚನ್ನಾಗಿದೆ.. ಅರ್ಥದ ಜೊತೆ ತರ್ಜುಮೆ ಕೂಡಾ.
ಪ್ರತ್ಯುತ್ತರಅಳಿಸಿಚನ್ನಾಗಿದೆಕವನ..
ಪ್ರತ್ಯುತ್ತರಅಳಿಸಿಅರ್ಥವತ್ತಾದ ಕವನವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಮೂಲ ಕವನವನ್ನೂ ಪರಿಚಯಿಸಿದ್ದರೆ ಇನ್ನೂ ಉತ್ತಮವಿರುತ್ತಿತ್ತು. ವ೦ದನೆಗಳು.
ಪ್ರತ್ಯುತ್ತರಅಳಿಸಿಉತ್ತಮ ಕವನ ಸಾರ್, ಚಿಕ್ಕದಾದರೂ ಮನ ಮುಟ್ಟುವ೦ತಿದೆ. ಅಭಿನ೦ದನೆಗಳು
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಈ ಕವನ..
ಪ್ರತ್ಯುತ್ತರಅಳಿಸಿನಿಮ್ಮವ,
ರಾಘು.
ಬಹಳ ಅರ್ಥಗರ್ಭಿತ ಸಾಲುಗಳು..ಇಂದು ಆಗುತ್ತಿರುವುದು ಇದೇ..ಪ್ರಕೃತಿ ನಾಶದ ಮೂಲಕ ಮನುಷ್ಯ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ....
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ....ಧನ್ಯವಾದಗಳು ನಿಮಗೆ ಗುಬ್ಬಚಿ ಸರ್...
ಉತ್ತಮ ಭಾಷಾಂತರ. ಅನುವಾದದ ಜೊತೆಗೆ ಮೂಲವನ್ನೂ ಹಾಕಿದರೆ ಇನ್ನೂ ಚೆನ್ನಿರುವುದು.
ಪ್ರತ್ಯುತ್ತರಅಳಿಸಿarthavattaada kavana
ಪ್ರತ್ಯುತ್ತರಅಳಿಸಿ