ಮಂಗಳವಾರ, ಡಿಸೆಂಬರ್ 7, 2010

ಮಳೆಯಾಗು ನೀ... (ನಮ್ಮ ಮಗುವೆ)

ಮಿಂಚದಿರು ನೀನು

ಮಿಂಚಿದರೆ ಚೆಂದ

ಮಳೆಗೆ ಮುನ್ಸೂಚನೆ!

ಆದರೆ, ಆ ಬೆಳಕು

ಕ್ಷಣಿಕ ಸುಖ

ಮಿಂಚದಿರು ನೀನು



ಎಂದಿಗೂ ಗುಡುಗದಿರು

ಗುಡುಗೆಂದರೆ ಭಯ

ಮಳೆ ಶುರುವಾಗಬಹುದ?

ಆದರೆ, ಆ ಶಬ್ಧ

ಕ್ಷಣಿಕ ದುಃಖ

ಎಂದಿಗೂ ಗುಡುಗದಿರು



ಮಳೆ, ಮಳೆಯಾಗು ನೀ

ಮಳೆಯೆಂದರೆ ಬೆಳೆ

ಬದುಕು ಚಿಗುರುತ್ತದೆ!

ಆದರೆ, ಆ ಹಸಿರು

ಸುಃಖ ದುಃಖಗಳ ಬಸಿದು

ಹೆತ್ತವರ ಮನಕೆ ತಂಪೆರೆಯಲಿ

ಅತಿವೃಷ್ಠಿ-ಅನಾವೃಷ್ಠಿಯಾಗದ

ಮಳೆ, ಮಳೆಯಾಗು ನೀ...

---

3 ಕಾಮೆಂಟ್‌ಗಳು:

  1. ಎಂದಿಗೂ ಗುಡುಗದಿರು

    ಗುಡುಗೆಂದರೆ ಭಯ

    ಮಳೆ ಶುರುವಾಗಬಹುದ?

    ಆದರೆ, ಆ ಶಬ್ಧ

    ಕ್ಷಣಿಕ ದುಃಖ

    ಎಂದಿಗೂ ಗುಡುಗದಿರು
    estu chendaneya saalugalu

    ಪ್ರತ್ಯುತ್ತರಅಳಿಸಿ
  2. ಸತೀಶ್...

    ಬಹಳ ಸುಂದರ ಸಾಲುಗಳು..

    ಶಬ್ಧಗಳಲ್ಲಿ ಭಾವ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ..

    ಇಷ್ಟವಾಗುತ್ತದೆ ನಿಮ್ಮ ಸಾಲುಗಳು...

    ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  3. ಸತೀಶ್,
    ನಿಜಕ್ಕೂ ಇದು ಅದ್ಬುತ ಕಲ್ಪನೆ. ಸೊಗಸಾದ ಪದಗಳ ಕವನ.

    ಪ್ರತ್ಯುತ್ತರಅಳಿಸಿ

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...