ಮಕ್ಕಳ ಸಾಹಿತಿಗಳಿಗೆ ಯಾವುದಾದರೂ ಪ್ರಶಸ್ತಿ, ಪುರಸ್ಕಾರ, ಗೌರವ, ಸನ್ಮಾನಗಳು ದೊರೆತಾಗ ನನ್ನ ಮನಸ್ಸು ಮುದಗೊಳ್ಳುತ್ತದೆ. ಕಾರಣ, ಈ ನೆಪದಲ್ಲಾದರೂ ಅವರಿಗೆ ಸಿಗಬೇಕಾದ ಗೌರವ ದೊರೆಯಿತಲ್ಲ ಎಂಬ ಸಮಾಧಾನ. ಸಾಮಾನ್ಯವಾಗಿ ಮಕ್ಕಳ ಸಾಹಿತ್ಯ ರಚಿಸುವವರನ್ನು ಕಡೆಗಣಿಸಲಾಗುತ್ತದೆ ಎಂದು ಹೇಳುತ್ತಾರೆ. ಅದು ಎಷ್ಟು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ, ಮಕ್ಕಳ ಸಾಹಿತ್ಯ ರಚಿಸದವರು ಸಾಹಿತಿಗಳೇ ಅಲ್ಲ ಎಂದು ಸುಲಭವಾಗಿ ಹೇಳಬಹುದು. ಯಾಕೆಂದರೆ, ಮಕ್ಕಳ ಸಾಹಿತ್ಯ ರಚಿಸುವವರು ಮಕ್ಕಳೇ ಆಗಿದ್ದರೆ ಓಕೆ. ಇಲ್ಲವಾದರೆ ಅವರು ಮಕ್ಕಳ ಮನಸ್ಸುಳ್ಳವರಾಗಿರಬೇಕಾಗುತ್ತದೆ. ಅದು ಎಲ್ಲರಿಗೂ ಆಗದ ಕೆಲಸ. ನಮ್ಮ ಕನ್ನಡ ಸಾಹಿತ್ಯದಲ್ಲಿ ಜೆ.ಪಿ. ರಾಜರತ್ನಂ, ಪಂಜೇ ಮಂಗೇಶರಾಯರು, ಪಳಕಳ ಸೀತಾರಾಮ ಭಟ್ಟ, ಆನಂದ ಪಾಟೀಲ, ಸುಮತೀಂದ್ರ ನಾಡಿಗ ಹೀಗೆ ಇನ್ನು ಮುಂತಾದ ಹಲವಾರು ಹೆಸರಾಂತ ಮಕ್ಕಳ ಸಾಹಿತಿಗಳಿದ್ದಾರೆ. ಪದ್ಯ ಸಾಹಿತ್ಯದಲ್ಲಷ್ಟೇ ಅಲ್ಲದೇ ಗದ್ಯ ಸಾಹಿತ್ಯದಲ್ಲೂ ಸಾಕಷ್ಟು ಕೃಷಿಮಾಡಿ ಕಿರಿಯರ ಹಿರಿಯರ ಮನಕ್ಕೆ ಲಗ್ಗೆಯಿಟ್ಟ ಬೋಳುವಾರು, ನಾ ಡಿಸೋಜ ಮುಂತಾದವರಿದ್ದಾರೆ. ನಾ ಡಿಸೋಜರವರಂತೂ ಇತ್ತೀಚಿಗೆ ಮಕ್ಕಳ ಸಾಹಿತ್ಯ ರಚನೆ ಮಾಡದವರನ್ನು ಯಾವ ಪ್ರಶಸ್ತಿಗೂ ಪರಿಗಣಿಸಬಾರದು ಎಂದು ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತಲೇ ಸಾಹಿತಿಯಾದವರು ಮಕ್ಕಳ ಸಾಹಿತ್ಯವನ್ನೂ ಶ್ರೀಮಂತಗೊಳಿಸಬೇಕು ಎಂದು ಬುದ್ಧಿಮಾತು ಹೇಳಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ಶಿವರಾಮ ಕಾರಂತರೂ ಮಕ್ಕಳಿಗಾಗಿಯೇ ಸಾಹಿತ್ಯ ರಚನೆ ಮಾಡಿರುವುದು ನಮಗೆಲ್ಲಾ ಗೊತ್ತೇ ಇದೆ.
ಮೇಲಿನ ನನ್ನ ಪೀಠಿಕೆಗೆ ಕಾರಣವಾದ ವಿಷಯವೇನೆಂದರೆ ನಮ್ಮ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಹಲವು ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಮಕ್ಕಳ ಸಾಹಿತಿ ಪ್ರೊ. ಟಿ.ಎಸ್. ನಾಗರಾಜಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿರುವ ಸುದ್ಧಿ ‘ಮಕ್ಕಳ ಸಾಹಿತಿಗೆ ಸಂದ ಗೌರವ’ ಎಂದು ಪತ್ರಿಕೆಗಳಲ್ಲಿ ಪ್ರಕಟವಾದದ್ದು. ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಸಂದಾಗಲೇ ಇವರ ಮಕ್ಕಳ ಸಾಹಿತ್ಯದ ಪುಸ್ತಕಗಳನ್ನು ಓದುವ ಮನಸ್ಸಾಗಿದ್ದರೂ ಅದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದುಬಿಟ್ಟಿತು. ಈ ಸಂದರ್ಭದಲ್ಲಾದರೂ ಅವರ ಪುಸ್ತಕವೊಂದನ್ನು ಓದೋಣವೆಂದರೆ ಅವರ ಯಾವುದೇ ಪುಸ್ತಕ ನನ್ನ ಬಳಿ ಇಲ್ಲ. ಈ ನೆಪದಲ್ಲಾದರೂ ಒಂದು ಮಕ್ಕಳ ಪದ್ಯಗಳ ಸಂಕಲನವನ್ನು ಓದಬೇಕೆಂದು ಹುಡುಕಿದಾಗಲೇ ನನ್ನ ಕೈಗೆ ಸಿಕ್ಕ ಪುಸ್ತಕ ಡಾ|| ಕೆ.ಬಿ. ರಂಗಸ್ವಾಮಿಯವರ ‘ಹಕ್ಕಿ ಮತ್ತು ಮೋಡ’ ಮಕ್ಕಳ ಪದ್ಯಗಳ ಸಂಕಲನ.
ಬಿಂಕದಿ
ಹಾರುತ
ಬಾನಲಿ
ಹಕ್ಕಿ
ಠಣ್ಣನೆ
ಹೊಡೆಯಿತು
ಮೋಡಕ್ಕೆ
ಡಿಕ್ಕಿ
ʼಹಕ್ಕಿ
ಮತ್ತು
ಮೋಡ’ ಪದ್ಯದಲ್ಲಿ
ಹಕ್ಕಿ
ಮತ್ತು
ಮೋಡ
ಅಪಘಾತಕ್ಕೀಡಾಗಿ
ಜಗಳಕ್ಕಿಳಿಯುತ್ತವೆ.
ಆಗ
ಆಗಸ
ಇವೆರಡನ್ನು
ಸಮಾಧಾನ
ಮಾಡಿ
ಜಗಳವನ್ನು
ಬಿಡಿಸುವುದೇ
ಚಂದ
ಜಗಳವು
ಬೇಡ
ಗೆಳೆಯರೇ
ನಿಮ್ಮಲಿ
ನೀವಿಬ್ಬರೂ
ಇರುವುದು
ನನ್ನಂಗಳದಲಿ
ʼಚಂದ್ರನೂರಿಗೆ
ವಿಹಾರ’ ಪದ್ಯದಲ್ಲಿ
ಚಂದಿರನೂರ
ಹಬ್ಬಕ್ಕೆ
ಲಗ್ಗೆಹಾಕುವ
ಓದುಗ
ಮನಸ್ಸು
ಕಜ್ಜಾಯ
ಶ್ಯಾವಿಗೆ
ಒಬ್ಬಟ್ಟು
ಸಂಡಿಗೆ
ಚೆನ್ನಾಗಿ
ಮೆದ್ದು
ಢರ‍್ರನೆ
ತೇಗೋಣ
ಎಂದು
ಅಲ್ಲಿ
ಹಬ್ಬದೂಟ
ಮಾಡಿ
ಹಾಗೇ
ವಿಹರಿಸುತ್ತಾ
ಅರಮನೆ
ತೋಟದಿ
ಚಂದ್ರನ
ಜೊತೆಯಲಿ
ಜೂಟಾಟ
ಆಡೋಣ
ಒಂದಷ್ಟು
ಕಥೆಗಳ
ಕೇಳೋಣ
ಎಂದು
ನಲಿದಾಡಿ
‘ನುಣ್ಣನೆ
ಕೆನ್ನಗೆ
/ ಮುತ್ತನ್ನು
ಕೊಟ್ಟು’ ಮನೆಯ
ಹಾದಿ
ಹಿಡಿಯುತ್ತದೆ.
ಸಂಕಲನದ
ಬಹುತೇಕ
ಪದ್ಯಗಳಲ್ಲಿ
ಪ್ರಾಣಿಪಕ್ಷಿಗಳ,
ಕ್ರಿಮಿಕೀಟಗಳ
ಒಡನಾಟವಿದೆ.
ಚಿಟ್ಟೆ,
ಇರುವೆ,
ಕೊಕ್ಕರೆ,
ನವಿಲು,
ಬೆಕ್ಕು,
ಕಂಬಳಿ
ಹುಳು,
ಬೆಳ್ಳಕ್ಕಿ,
ತಾಯಿ
ಕೋಳಿ
ಇಲ್ಲಿನ
ಪದ್ಯಗಳಲ್ಲಿ
ಬಂದು
ಅವುಗಳದೇ
ಲೋಕಕ್ಕೆ
ನಮ್ಮನ್ನು
ಕೊಂಡೊಯ್ಯುತ್ತವೆ.
ಈ
ಪದ್ಯಗಳಲ್ಲಿ
ಬಳಸಿರುವ
ಪ್ರಾಸವು
ಗಮನ
ಸೆಳೆಯುತ್ತದೆ.
ಉದಾಹರಣೆಗೆ
‘ಕಂಬಳಿ
ಹುಳು’ ಪದ್ಯದ
‘ಅಂಗಳದೊಳಗೆ
ಕಂಬಳಿ
ಹುಳು
/ ತೆವಳುತ
ಬಂದಿತು
ಪುಳು
ಪುಳು’ ಸಾಲುಗಳನ್ನು
ನೋಡಬಹುದು.
ಒಟ್ಟಿನಲ್ಲಿ ಹಾ. ಉಮೇಶ ಸೊರಬರವರ ಸಂಕ್ಷಿಪ್ತ ಮುನ್ನುಡಿಯೊಂದಿಗೆ ಪ್ರಕಟವಾಗಿರುವ ಡಾ|| ಕೆ.ಬಿ. ರಂಗಸ್ವಾಮಿಯವರ ‘ಹಕ್ಕಿ ಮತ್ತು ಮೋಡ’ ಮಕ್ಕಳ ಪದ್ಯಗಳ ಪುಸ್ತಕವು ಸಂಕಲನದ ‘ತಮ್ಮ’ಪದ್ಯದ ‘ಅವಂಗೆ ಮಾತೇ ಬರೊಲ್ಲ / ಆದ್ರೂ ನಂಗೆ ಬೋರಾಗಲ್ಲ’ ಎಂಬ ಸಾಲುಗಳಂತೆ ಎಲ್ಲೂ ಬೋರು ಹೊಡೆಸಲ್ಲ. ಬದಲಾಗಿ ಓದುಗನನ್ನು ಬೆರಗಾಗಿಸಿ ಬಾಲ್ಯದ ಆಗಸದಲ್ಲಿ ಒಮ್ಮೆ ಕೈಹಿಡಿದುಕೊಂಡು ಓಡಾಡಿಸಿಕೊಂಡು, ಆಟವಾಡಿಸಿಕೊಂಡು ಬರುತ್ತವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ