ಪ್ರಿಯ ಸ್ನೇಹಿತರೇ,
ನಮ್ಮ ಭಾರತ ದೇಶದ ʼಚಂದ್ರಯಾನ-3ʼ ಯಶಸ್ವಿಯಾಗಿ, ಇದೀಗ
ಸೂರ್ಯಯಾನವೂ ಉಡಾವಣೆ ಆಗಿದೆ. ಈ ಹೊತ್ತಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಬಾಹ್ಯಾಕಾಶವನ್ನೇ ಮುಖ್ಯ
ವಸ್ತುವನ್ನಾಗಿಸಿಕೊಂಡು ಯಾವುದಾದರೂ ಸೃಜನಶೀಲ ಕೃತಿಗಳು ಪ್ರಕಟವಾಗಿವೆಯೇ ಎಂದು ಆಲೋಚಿಸಿದಾಗ
ತಕ್ಷಣ ನೆನಪಿಗೆ ಬರುವುದು ಡಾ. ಎಸ್.ಎಲ್. ಭೈರಪ್ಪನವರ "ಯಾನ” ಕಾದಂಬರಿ.
ಈ ಕಾದಂಬರಿಯು
2014ರಲ್ಲಿ ಮೊದಲ ಮುದ್ರಣ ಕಂಡಿದ್ದು, ಇದುವರೆವಿಗೂ ನಲ್ವತ್ತಮೂರು ಮುದ್ರಣಗಳನ್ನು ಕಂಡಿದೆ. ಈ
ಕಾದಂಬರಿಯನ್ನು ಪ್ರಕಟವಾದ ಸಮಯದಲ್ಲೇ ನಾನು ಓದಿದ್ದು, ಇದೀಗ ನಮ್ಮ ಭಾರತ ದೇಶದ ಬಾಹ್ಯಾಕಾಶ
ತಂತ್ರಜ್ಞಾನವನ್ನು ಇಡೀ ವಿಶ್ವವೇ ಬೆರಗಾಗಿ ನೋಡುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ
ಕೈಯಲ್ಲಿಡಿದು ಕೂತಿದ್ದೇನೆ. ನೀವು ಈಗಾಗಲೇ ಓದಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ…
ಓದಿಲ್ಲವಾದರೇ, ಓದಿ ನಿಮ್ಮ ಅನಿಸಿಕೆ-ಅಭಿಪ್ರಾಯ ತಿಳಿಸಿ… ಜೊತೆಗೆ ಬಾಹ್ಯಾಕಾಶ ಯಾನ ಕುರಿತೇ
ಪ್ರಕಟವಾಗಿರುವ ಯಾವುದಾದರೂ ಸೃಜನಶೀಲ ಕೃತಿಗಳು ನಿಮ್ಮ ಗಮನದಲ್ಲಿದ್ದರೆ ತಿಳಿಸಿ…
ಡಾ. ಎಸ್.ಎಲ್. ಭೈರಪ್ಪನವರ ʼಯಾನʼ ಕೊಳ್ಳಲು
ಅಮೇಜಾನ್ ಲಿಂಕ್: https://amzn.to/45PDvmA
ಧನ್ಯವಾದಗಳು…
ನಾನೂ ಓದಿದ್ದೇನೆ ಅದ್ಬುತ ಮತ್ತು ಅಚ್ಚರಿ ಯ ಕೃತಿ..
ಪ್ರತ್ಯುತ್ತರಅಳಿಸಿನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರತ್ಯುತ್ತರಅಳಿಸಿ