"ಜವಾನ್" ವಿಮರ್ಶೆ
ಪಠಾಣ್ ಸಿನಿಮಾದ ಯಶಸ್ಸಿನ ಬೆನ್ನಿಗೇ ಬಿಡುಗಡೆಯಾಗಿರುವ ಬಾಲಿವುಡ್ ಬಾದ್ ಶಾ ಎಂದೇ ಖ್ಯಾತರಾದ ಶಾರುಖ್ ಖಾನ್ ಅವರ ನಟನೆಯ ಸಿನಿಮಾ ʼಜವಾನ್ʼ ದೇಶದ ಹಲವು ಸಾಮಾಜಿಕ ಸಮಸ್ಯೆಗಳನ್ನು ತೋರಿಸುತ್ತಲೇ ಜೈ ಜವಾನ್ ಜೈ ಕಿಸಾನ್ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ನೋಡುಗನಿಗೆ ರವಾನಿಸುತ್ತದೆ. ಮನರಂಜನೆಯ ನೆಪದಲ್ಲಿ ದೇಶದ ಚುನಾವಣೆಯ ಮಹತ್ವವನ್ನು ಕೂಡ ಎತ್ತಿ ಹಿಡಿಯುತ್ತದೆ. ದ್ವಿಪಾತ್ರದಲ್ಲಿ ಶಾರುಖ್ ಲೀಲಾಜಾಲವಾಗಿ ಅಭಿನಯಿಸಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಾರೆ. ಎರಡು ತಲೆಮಾರಿಗೂ ವಿಲನ್ ಆಗಿ ವಿಜಯ್ ಸೇತುಪತಿ ಶಾರುಖ್ ಖಾನಿಗೆ ಸಮನಾಗಿ ಅಭಿನಯಿಸಿದ್ದಾರೆ. ನಾಯಕಿಯರಾಗಿ ದಿಪೀಕಾ ಪಡುಕೋಣೆ ಮತ್ತು ನಯನತಾರ ಹಾಗೂ ಉಳಿದ ಪೋಷಕ ಪಾತ್ರಗಳು ಕೂಡ ಗಮನ ಸೆಳೆಯುತ್ತವೆ. ಅಟ್ಲಿ ಅವರು ರಚಿಸಿ-ನಿರ್ದೇಶಿಸಿರುವ “ಜವಾನ್” ಒಂದು ಹೈವೋಲ್ಟೇಜ್ ಸಿನಿಮಾವಾಗಿ ಪ್ರೇಕ್ಷಕನಿಗೆ ರಂಜಿಸುವುದರ ಜೊತೆಜೊತೆಗೆ ಚಿಂತನೆಗೆ ಹಚ್ಚುತ್ತದೆ. ಶಾರುಖ್ ಖಾನ್ ಮತ್ತು ವಿಜಯ್ ಸೇತುಪತಿ ಅಭಿಮಾನಿಗಳಿಗೆ ಹಬ್ಬವಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ