ಪ್ರಿಯ ಸ್ನೇಹಿತರೇ,
ʼಚಂದ್ರಯಾನ 3ʼ ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯಾಯಾನ ʼಆದಿತ್ಯ ಎಲ್ 1ʼ ಸೋಲಾರ್ ಮಿಷನ್ ಕೈಗೊಂಡಿದ್ದು, ಇಂದು (02/09/2023) ಯಶಸ್ವಿಯಾಗಿ ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣೆ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ57 ರಾಕೆಟ್ ʼಆದಿತ್ಯ-ಎಲ್ 1ʼ ಬಾಹ್ಯಾಕಾಶ ನೌಕೆಯನ್ನು ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದಿದೆ. ಕೇಂದ್ರ ಸರಕಾರ ಈ ಯೋಜನೆಗಾಗಿ 380 ಕೋಟಿ ರೂಗಳ ಅನುದಾನ ನೀಡಿದ್ದು, ಸೂರ್ಯನ ಮೇಲೆ ಗಮನ ಇಡಲು ಇಸ್ರೋ ನಿಗದಿಪಡಿಸಿರುವ ನ್ಯೂಟನ್ ಲಾಂಗ್ರೇಜ್ ಪಾಯಿಂಟ್ ಎಲ್ 1 ತಲುಪಲು 125 ದಿನಗಳ ಸಮಯಾವಕಾಶ ಬೇಕಿದೆ.ಇಲ್ಲಿ ನೌಕೆಯಲ್ಲಿ ಕಳಿಸಿರುವ ಬಾಹ್ಯಾಕಾಶ ಆಧಾರಿತ ಭಾರತೀಯ ಪ್ರಯೋಗಾಲಯ ಸ್ಥಾಪಿತವಾಗಲಿದೆ. ಭೂಮಿಯಿಂದ
15 ಲಕ್ಷ ಕಿ.ಮೀ. ದೂರದ ಎಲ್1 ಪಾಯಿಂಟಿನಿಂದ ಸೂರ್ಯನ ಅಧ್ಯಯನ ಮಾಡಲು ಭಾರತದ ಚೊಚ್ಚಲ ಸೌರಮಂಡಲ ಸಾಹಸ
ಇದಾಗಿದೆ. ಮತ್ತಷ್ಟು ಹತ್ತಿರದಿಂದ ಸೂರ್ಯನ ಪ್ರಕ್ರಿಯೆಗಳನ್ನು ಗಮನಿಸುವುದು ನಮ್ಮ ಉದ್ದೇಶವಾಗಿದೆ
ಎಂದು ಇಸ್ರೋ ಮುಖ್ಯಸ್ಥರಾದ ಎಸ್. ಸೋಮನಾಥ್ ಅವರು ತಿಳಿಸಿದ್ದಾರೆ. ಈ ಯಾನವೂ ಯಶಸ್ವಿಯಾಗಲಿ ಎಂಬುದು
ಎಲ್ಲ ಭಾರತೀಯರ ಹಾರೈಕೆ…
ಧನ್ಯವಾದಗಳು…
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ