ಪ್ರಿಯ ಸ್ನೇಹಿತರೇ,
ರಕ್ಷಿತ್
ಶೆಟ್ಟಿ ಅವರ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಇಂದಿನಿಂದ ತೆರೆಕಂಡಿದ್ದು, ನಾನು ನೆನ್ನೆಯೇ
ತುಮಕೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೇಯ್ಡ್ ಪ್ರಿಮೀಯರ್ ಶೋನಲ್ಲಿ ಸಿನಿಮಾವನ್ನು
ನೋಡಿ, ನನಗೆ ಇಷ್ಟವಾದ ಹತ್ತು ಅಂಶಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ…
ಎರಡನೆಯದಾಗಿ,
ಚಿತ್ರಕಥೆ… ನಿರ್ದೇಶಕರು ಕಥೆ ಹೇಳಿರುವ ಶೈಲಿ ಬಹಳ ಇಷ್ಟವಾಗುತ್ತದೆ… ರಚನೆ ಮತ್ತು ನಿರ್ದೇಶನ ಹೇಮಂತ
ಎಮ್ ರಾವ್…
ಮೂರನೆಯದಾಗಿ,
ಸಿನಿಮಾಟೋಗ್ರಫಿ ನಿರ್ದೇಶಕರ ತಾಳಕ್ಕೆ ತಕ್ಕಂತಿದೆ… ಛಾಯಗ್ರಹಣ ಅದ್ವೈತ ಗುರುಮೂರ್ತಿ…
ನಾಲ್ಕನೇಯದಾಗಿ,
ಕವಿ ಗೋಪಾಲಕೃಷ್ಣ ಅಡಿಗ ಟ್ರಸ್ಟಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವುದು. ಕವಿ ಅಡಿಗರ ʼಯಾವ ಮೋಹನ
ಮುರಳಿ ಕರೆಯಿತುʼ ಗೀತೆಯಲ್ಲಿ ಈ ಸಿನಿಮಾದ ಹೆಸರು “ಸಪ್ತ ಸಾಗರದಾಚೆ ಎಲ್ಲೋ” ಬರುತ್ತದೆ…
ಐದನೆಯದು,
ಈ ಸಿನಿಮಾದ ಎಡಿಟಿಂಗ್ ಇಷ್ಟವಾಯ್ತು. ಸಂಕಲನ ಸುನಿಲ್ ಎಸ್ ಭಾರಧ್ವಾಜ್…
ಆರನೆಯದು,
ಪೋಷಕ ಪಾತ್ರಗಳು… ಅವರುಗಳ ಆಯ್ಕೆ, ಸಂಭಾಷಣೆ… ಅಭಿನಯ ಬಹಳ ಇಷ್ಟವಾಗುತ್ತೆ…
ಏಳನೆಯದು,
ನಿರ್ದೇಶಕರು… ಓನ್ ಅಂಡ್ ಓನ್ಲಿ ಹೇಮಂತ್ ಎಮ್ ರಾವ್… ಸಿನಿಮಾವನ್ನು ಎರಡು ಭಾಗಗಳಲ್ಲಿ ಹೇಳಿರುವುದು
ಇಷ್ಟವಾಗುತ್ತದೆ.
ಎಂಟನೇಯದು,
ನಾಯಕಿ ರುಕ್ಮಿಣಿ ವಸಂತ್ ಅಭಿನಯ
ಒಂಭತ್ತನೆಯದು,
ರಕ್ಷಿತ್ ಶೆಟ್ಟಿ ಅಭಿನಯ…
ಹತ್ತನೆಯದು,
ಸಿನಿಮಾದ ಕತೆ… ಪ್ರೇಮಕತೆ… ಇದು ಕನ್ನಡ ಸಿನಿಮಾಗಳ ಮತ್ತೊಂದು ಕ್ಲಾಸಿಕ್ ಪ್ರೇಮಕತೆಯಾಗುತ್ತದೆ.
ಮತ್ತು
ಇನ್ನು ಇಷ್ಟವಾಗುವ ಅಂಶಗಳಿದ್ದರೂ ಇಷ್ಟ ಆಗದೇ ಇದ್ದ ಅಂಶವೆಂದರೆ ಚಿತ್ರಗಳಲ್ಲಿ ಕತೆಗೆ ತಕ್ಕಂತೆ ಪೂರಕವಾಗಿ
ಹಾಡುಗಳು ಅರ್ಥಾತ್ ಸಾಹಿತ್ಯ ಬಂದಾಗ ಹಿನ್ನಲೆ ಸಂಗೀತವೇ ಜೋರಾಗಿ ಕೇಳುವುದು…
ಸದ್ಯಕ್ಕೆ
ಸೈಡ್ ಎ ನೋಡಿರಿ… ಅಕ್ಟೋಬರ್ 20ಕ್ಕೆ ಸೈಡ್ ಬಿ ನೋಡೋದು ಇದ್ದೇ ಇದೆ… ಥ್ಯಾಂಕ್ಯು…
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ