ನೆನ್ನೆ
ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಡುಗೆ ಅನಿಲ ದರದಲ್ಲಿ ರೂ. 200/- ಇಳಿಸುವ ಪ್ರಸ್ತಾವನೆಗೆ
ಸಮ್ಮತಿ ದೊರೆತಿದ್ದು, ಇಂದಿನಿಂದ ದೇಶಾದ್ಯಂತ ಅಡುಗೆ ಅನಿಲ ದರದಲ್ಲಿ ರೂ. 200/- ಇಳಿಕೆಯಾಗಲಿದೆ.
ಪ್ರಧಾನ ಮಂತ್ರಿಗಳು ಓಣಂ ಮತ್ತು ರಕ್ಷಾಬಂಧನದ ಉಡುಗೊರೆಯಾಗಿ ದೇಶದ ಮಹಿಳೆಯರಿಗೆ ಈ ಸಿಹಿಸುದ್ಧಿ ನೀಡಿದ್ದಾರೆ
ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಅಡುಗೆ ಅನಿಲ
ಸಿಲಿಂಡರ್ ದರ ಕರ್ನಾಟಕದಲ್ಲಿ ರೂ. 1107.50 ಇದ್ದು ಪರಿಷ್ಕೃತ ದರ ರೂ. 907.50 ಆಗಲಿದೆ. ಉಜ್ವಲ
ಯೋಜನೆಯ ಫಲಾನುಭವಿಗಳಿಗೆ ಡಬಲ್ ಬೆನಿಫಿಟ್ ಆಗಲಿದ್ದು, ಈಗೀರುವ 200/- ರೂ ಸಬ್ಸಿಡಿ ಮುಂದುವರಿಸಿರುವುದರಿಂದ
ಒಟ್ಟು ರೂ. 400/- ಕಡಿತವಾಗಲಿದೆ. ಹಲವು ರಾಜ್ಯಗಳ ವಿಧಾನಸಭೆ ಮತ್ತೆ 2024ರ ಲೋಕಸಭಾ ಚುನಾವಣೆಗಳ
ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಪೆಟ್ರೋಲ್
ಮತ್ತು ಡೀಸೆಲ್ ಬೆಲೆಗಳಲ್ಲೂ ಇಳಿಕೆಗೂ ಸರ್ಕಾರ ಮುಂದಾಗುವ ನಿರೀಕ್ಷೆಯಿದ್ದು, ಇದು ಚುನಾವಣೆ ದೃಷ್ಠಿಯಿಂದ
ಮಾತ್ರವಲ್ಲದೆ ಹೆಚ್ಚುತ್ತಿರುವ ಹಣದುಬ್ಬರ ಇಳಿಸಲು ಕೇಂದ್ರ ಮುಂದಾಗಿರುವ ಕ್ರಮ ಎಂದು ಕೂಡ ಹೇಳಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ