ಪ್ರಿಯ ಸ್ನೇಹಿತರೇ,
ನಮ್ಮ ಭಾರತದ ಹೆಮ್ಮೆ ಇಸ್ರೋ ಚಂದ್ರಯಾನ-3ನ್ನು ಯಶಸ್ವಿಯಾಗಿ ಮುಗಿಸಿ ಸೂರ್ಯಯಾನಕ್ಕೆ ಆದಿತ್ಯ ಎಲ್ 1 ಉಡಾವಣೆಗೆ ಸಜ್ಜಾಗುತ್ತಿರುವ ಹೊತ್ತಲೇ ಚಂದ್ರಯಾನ-3ರ ಯಶಸ್ಸಿಗೆ ಕಾರಣವೇನು ಎಂಬ ಹಲವು ಚರ್ಚೆಗಳು ಶುರುವಾಗಿವೆ. ಚಂದ್ರಯಾನ-2ರ ಸೋಲಿನ ಬಳಿಕ ಗೆಲುವು ಸುಲಭವಾಗಿರಲಿಲ್ಲ. ಧೈರ್ಯಗುಂದಿದ ವಿಜ್ಞಾನಿಗಳಲ್ಲಿ ಹುರುಪು ತುಂಬಿ ಕೆಲಸಕ್ಕೆ ಹಚ್ಚಬೇಕಿತ್ತು. ನಿಗದಿತ ಸಂಬಳ ಬಿಟ್ಟರೆ ಯಾವುದೇ ಪ್ರೋತ್ಸಾಹಕ ಧನ ಅಥವಾ ಉಡುಗೊರೆಗಳ ಬೆಂಬಲವಿರಲಿಲ್ಲ. ಈ ನಿಟ್ಟಿನಲ್ಲಿ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು, ಹುರಿದುಂಬಿಸಲು ಇಸ್ರೋ ಪ್ರತಿದಿನ ಸಂಜೆ 5ಕ್ಕೆ ಉಚಿತವಾಗಿ ಮಸಾಲೆದೋಸೆ ಮತ್ತು ಫಿಲ್ಟರ್ ಕಾಫಿಯನ್ನು ನೀಡುತ್ತಿತ್ತಂತೆ. ಹೌದು, ನೀವು ನಂಬಲೇ ಬೇಕು, ಉಚಿತ ಮಸಾಲದೋಸೆ ಮತ್ತು ಫಿಲ್ಟರ್ ಕಾಫಿ. ಮಸಾಲೆ ದೋಸೆ ಸವಿದು, ಫಿಲ್ಟರ್ ಕಾಫಿ ಹೀರಿದ ನಂತರ ಮತ್ತಷ್ಟು ಉತ್ಸುಕರಾಗಿ ಸಂತೋಷದಿಂದ ಇಸ್ರೋ ವಿಜ್ಞಾನಿಗಳು ಮಿಷನ್ ಚಂದ್ರಯಾನ-3ರಲ್ಲಿ ತೊಡಗುತ್ತಿದ್ದರಂತೆ. ಈಗ ಫಲಿತಾಂಶ ನಮ್ಮ ಕಣ್ಮುಂದೆಯೇ ಇದೆ… ಈ ಸಂಗತಿಯನ್ನು ಇಸ್ರೋದ ಪ್ರಮುಖ ವಿಜ್ಞಾನಿ ಮತ್ತು ಚಂದ್ರಯಾನ-3ರ ಪ್ರಮುಖ ರೂವಾರಿಯಲ್ಲೊಬ್ಬರೂ ಆಗಿರುವ ಶ್ರೀ ವೆಂಕಟೇಶ್ವರ ಶರ್ಮ ಅವರು ಪತ್ರಕರ್ತೆ ಬರ್ಖಾ ದತ್ ಅವರಲ್ಲಿ ಹಂಚಿಕೊಂಡಿದ್ದು, ಇದು ವಾಷಿಗ್ಟಂನ್ ಪೋಸ್ಟ್‌ನಲ್ಲಿ ವರದಿಯಾಗಿದೆ…
ಧನ್ಯವಾದಗಳು…
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ