ಉತ್ತೇಜನ
ಇಂಗ್ಲೀಷ್ ಮೂಲ : ಮಾರ್ಸಿ ಹ್ಯಾನ್ಸ್
ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್
ಉತ್ತೇಜನ:
ಸಹಸ್ರಾರು
ಮಾನವ ಕೈಗಳು ನಿರ್ಮಿತ
ಅಗ್ನಿಯ ರೆಕ್ಕೆಗಳಿಂದ
ಆಗಸವ ಸೀಳಿದ ರಾಕೆಟ್ಟು
ಬಾನಿಗೊಂದು ಸುರಂಗ ತೋಡಿತು.
ಎಲ್ಲರೂ ಕೇಕೆಹಾಕಿದರು.
ಉತ್ತೇಜನ:
ಸೃಷ್ಟಿಕರ್ತನ ಆಲೋಚನೆಯೊಂದರಿಂದಲೇ
ಬೀಜಾಂಕುರವು
ಸ್ವಯಂ ಪ್ರೇರಿತವಾಗಿ
ಕತ್ತಲ ಗರ್ಭವನ್ನು ಭೇದಿಸಿ
ಕಠಿಣ ಒಳಮಾಳಿಗೆಯನ್ನು ಛೇದಿಸಿ
ತನ್ನಷ್ಟಕ್ಕೆ ತಾನು ಪಥಕ್ರಮಣ ಆರಂಭಿಸಿ
ಆಕಾಶದತ್ತ ಮುಖಮಾಡಿತು.
ಯಾರೊಬ್ಬರೂ
ಒಂದು
ಸಣ್ಣ ಚಪ್ಪಾಳೆಯನ್ನೂ
ತಟ್ಟಲಿಲ್ಲ.
ಇಂಗ್ಲೀಷ್ ಮೂಲ : ಮಾರ್ಸಿ ಹ್ಯಾನ್ಸ್
ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್
ಉತ್ತೇಜನ:
ಸಹಸ್ರಾರು
ಮಾನವ ಕೈಗಳು ನಿರ್ಮಿತ
ಅಗ್ನಿಯ ರೆಕ್ಕೆಗಳಿಂದ
ಆಗಸವ ಸೀಳಿದ ರಾಕೆಟ್ಟು
ಬಾನಿಗೊಂದು ಸುರಂಗ ತೋಡಿತು.
ಎಲ್ಲರೂ ಕೇಕೆಹಾಕಿದರು.
ಉತ್ತೇಜನ:
ಸೃಷ್ಟಿಕರ್ತನ ಆಲೋಚನೆಯೊಂದರಿಂದಲೇ
ಬೀಜಾಂಕುರವು
ಸ್ವಯಂ ಪ್ರೇರಿತವಾಗಿ
ಕತ್ತಲ ಗರ್ಭವನ್ನು ಭೇದಿಸಿ
ಕಠಿಣ ಒಳಮಾಳಿಗೆಯನ್ನು ಛೇದಿಸಿ
ತನ್ನಷ್ಟಕ್ಕೆ ತಾನು ಪಥಕ್ರಮಣ ಆರಂಭಿಸಿ
ಆಕಾಶದತ್ತ ಮುಖಮಾಡಿತು.
ಯಾರೊಬ್ಬರೂ
ಒಂದು
ಸಣ್ಣ ಚಪ್ಪಾಳೆಯನ್ನೂ
ತಟ್ಟಲಿಲ್ಲ.
ಸರ್,
ಪ್ರತ್ಯುತ್ತರಅಳಿಸಿಎರಡು ಕವನಗಳ ಭಾವದಲ್ಲಿ ಎಷ್ಟು ವ್ಯತ್ಯಾಸವಲ್ಲವೇ...ಕಾಣದಿರುವುದಕ್ಕೆ ಬೆಲೆಯಿಲ್ಲವೆನ್ನುವುದು ಇದಕ್ಕೆ ಅಲ್ಲವೇ..
ಶಿವು ಸರ್, ಇದು ಒಂದೇ ಕವನ. ಇಲ್ಲಿ ಕವಿ ಮನುಷ್ಯನ ವಿಭಿನ್ನ ಮನೋಭಾವವನ್ನು ತೋರಿಸಲು ಯತ್ನಿಸಿದ್ದಾರೆ. ಮನುಷ್ಯ ತಾನು ಮಾಡಿದ್ದೇ ಶ್ರೇಷ್ಟ ಎನ್ನುತ್ತಾನಲ್ಲವೇ? ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಎರಡು ಭಿನ್ನ ಭಾವಗಳು. ಒ೦ದು ನಿರ್ಮಿತ ಇನ್ನೊ೦ದು ಅತೀತ. ಭಾವಾನುವಾದ ಸು೦ದರವಾಗಿದೆ ಸತೀಶ್. ಅಭಿನ೦ದನೆಗಳು.
ಪ್ರತ್ಯುತ್ತರಅಳಿಸಿಅನ೦ತ್
ಸತೀಶ್..ಮಾನವ ನಿರ್ಮಿತದ ಸಣ್ಣ ಸಾಧನೆಯೂ ಚಪ್ಪಾಳೆ ಗಿಟ್ಟಿಸುತ್ತೆ ..ಅದೇ ನಿಸರ್ಗದ ಹಲವಾರು ವಿಸ್ಮಯಗಳಿಗೆ ಯಾವುದೇ ಚಪಾಳೆ ಸಿಗುವುದಿಲ್ಲ...!!
ಪ್ರತ್ಯುತ್ತರಅಳಿಸಿಇದು ಮಾನವ ನಿಸರ್ಗಕ್ಕೆ ನೀಡುತ್ತಿರುವ ಮಹತ್ವಕ್ಕೆ ಒಂದು ಸೂಚ್ಯವೆನ್ನುವಂತೆ ನನ್ನ ಭಾವನೆ..ಅಲ್ಲವೇ ನಾನು ಮೂಲ ಓದಿಲ್ಲ ಆದ್ರೂ ಅರ್ಥಪೂರ್ಣ ಕವನ...
ನಮ್ಮ ಕಡೆಯಿಂದ ನಿಮಗೆ ಚಪ್ಪಾಳೆ ಇದ್ದೆ ಇದೇ ಅನುವಾದಿತ ಕವನ ಚನ್ನಾಗಿದೆ..!
ಪ್ರತ್ಯುತ್ತರಅಳಿಸಿtumba olleya prayatna, munduvarisi.
ಪ್ರತ್ಯುತ್ತರಅಳಿಸಿಅರ್ಥಪೂರ್ಣ ಕವನ.
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿ