ಶುಕ್ರವಾರ, ಜನವರಿ 7, 2011

ಸುಗ್ಗಿ ಪ್ರೀತಿ

ಹೊಸ ವರುಷದ ಸನಿಹದಲ್ಲಿ

ದಿವ್ಯ ಬೆಳಕಿನ ಸನ್ನಿಧಿಯಲ್ಲಿ

ಕಾದಿರುವೆ ನನ್ನ ಚೇತನವೆ

ನಿನಗಾಗಿ ನಿನಗಾಗಿ ನಿನಗಾಗಿ


ಹಳೇ ವರುಷದ ಚಿಗುರು

ಹೊಸ ವರುಷದಲಿ ಪೈರಾಗಿ

ತೆನೆ ತೆನೆಯಲೂ ಚಿಮ್ಮಲಿ

ಸಂಭ್ರಮ ಸುಗ್ಗಿಯ ಸಡಗರದಲ್ಲಿ


ಹೊಸ ವಸಂತ ಹೊಸ ದಿಗಂತ

ನನ್ನೆದೆಯ ನಿನ್ನೆದೆಯ ಕೋಗಿಲೆಗೆ

ಹೊಸ ದನಿಯಾಗಿ ಸೃಜಿಸಲಿ

ನಮ್ಮ ಪ್ರೀತಿಯು ಹಸಿರಾಗಲಿ.

                            - ಗುಬ್ಬಚ್ಚಿ ಸತೀಶ್
(ಈ ಕವನ ನಾನು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ನಲ್ಲೆಯ ಸೇವೆಯನ್ನು ನೋಡಿ ಬಿಲ್ ಹಿಂಭಾಗದಲ್ಲಿ ಬರೆದದ್ದು. ಪ್ರೇರಣೆ: ಜಿ.ಎಸ್.ಎಸ್ ರವರ "ಬೆಳಗು ಬಾ ಹಣತೆಯನು" ಕವನ. ಹೊಸವರ್ಷದ ಮತ್ತು ಸಂಕ್ರಾತಿಯ ಶುಭಾಷಯಗಳೊಂದಿಗೆ - ಗುಬ್ಬಚ್ಚಿ ಕುಟುಂಬ)

9 ಕಾಮೆಂಟ್‌ಗಳು:

  1. ನಿಮ್ಮ ನಲ್ಲೆಯ ಸೇವೆ ತುಂಬಾ ಚೆನ್ನಾಗಿರುವುದರಿಂದಲೇ ಇಷ್ಟು ಚೆಂದದ ಕವನ ಮೂಡಿಬಂದಿದ್ದು ಅಲ್ವಾ?

    ಪ್ರತ್ಯುತ್ತರಅಳಿಸಿ
  2. ಹೌದು ಶಿವು ಸರ್. ಅವಳಿಲ್ಲದೆ ನನಗೇನಿದೆ?
    ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ
  3. ಅನೇಕರು ಸಂಗಾತಿಯ ಸೇವೆಯ ಮೌಲ್ಯವನ್ನೇ ಮರೆಯುತ್ತಾರೆ, ಅವರು ಹೇಗೇ ನಡೆದರೂ ತಪ್ಪು ಹುಡುಕುತ್ತಾರೆ, ಇನ್ನೊ ಕೆಲವರಿಗೆ ಜೀವನವೇ ಒಂದು ವಾಣಿಜ್ಯದ ವ್ಯಾಪಾರ, ವರದಕ್ಷಿಣೆಯ ಸಲುವಾಗಿ ಹೆಂಡತಿಗೆ ತೊಂದರೆಕೊಡುವ, ಹಿಂಸಿಸುವ,ವಿಚ್ಛೇದಿಸುವ, ಸಾಯಿಸುವ ಗಂಡಸರೂ ಇದ್ದಾರಲ್ಲ. ಮಡದಿಯನ್ನು ಪ್ರೀತಿಸುವ ನಿಮ್ಮ ಸಹಜ ಮನೋವೃತ್ತಿಯಿಂದ ಹುಟ್ಟಿದ ಕವನ ಹಿಡಿಸಿತು, ನಿಮ್ಮ ದಾಂಪತ್ಯ ಅನ್ಯೋನ್ಯವಾಗಿ ನೂರ್ಕಾಲ ಬಾಳಲಿ, ಶುಭಾಶಯಗಳು.

    ಪ್ರತ್ಯುತ್ತರಅಳಿಸಿ

ಬರೆಯಿರಿ, ಸಂಭಾವನೆಯನ್ನೂ ಪಡೆಯಿರಿ...

ಸಮಕಾಲೀನ ಕಾಲಘಟ್ಟದಲ್ಲಿ ಪತ್ರಿಕೆಗಳಿಗೆ ಬರೆದರೂ ಸಂಭಾವನೆ ಸಿಗದು ಎಂಬ ಮಾತಿದೆ. ಪ್ರಕಟವಾಗುತ್ತಿದ್ದ ಸಾಪ್ತಾಹಿಕ ಪುರವಣಿಗಳು ಕಾಣೆಯಾಗಿವೆ. ಕೆಲವು ಪುರವಣಿಗಳು ಪ್ರಕಟವಾಗ...