ಹೊಸ ವರುಷದ ಸನಿಹದಲ್ಲಿ
ದಿವ್ಯ ಬೆಳಕಿನ ಸನ್ನಿಧಿಯಲ್ಲಿ
ಕಾದಿರುವೆ ನನ್ನ ಚೇತನವೆ
ನಿನಗಾಗಿ ನಿನಗಾಗಿ ನಿನಗಾಗಿ
ಹಳೇ ವರುಷದ ಚಿಗುರು
ಹೊಸ ವರುಷದಲಿ ಪೈರಾಗಿ
ತೆನೆ ತೆನೆಯಲೂ ಚಿಮ್ಮಲಿ
ಸಂಭ್ರಮ ಸುಗ್ಗಿಯ ಸಡಗರದಲ್ಲಿ
ಹೊಸ ವಸಂತ ಹೊಸ ದಿಗಂತ
ನನ್ನೆದೆಯ ನಿನ್ನೆದೆಯ ಕೋಗಿಲೆಗೆ
ಹೊಸ ದನಿಯಾಗಿ ಸೃಜಿಸಲಿ
ನಮ್ಮ ಪ್ರೀತಿಯು ಹಸಿರಾಗಲಿ.
- ಗುಬ್ಬಚ್ಚಿ ಸತೀಶ್
(ಈ ಕವನ ನಾನು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ನಲ್ಲೆಯ ಸೇವೆಯನ್ನು ನೋಡಿ ಬಿಲ್ ಹಿಂಭಾಗದಲ್ಲಿ ಬರೆದದ್ದು. ಪ್ರೇರಣೆ: ಜಿ.ಎಸ್.ಎಸ್ ರವರ "ಬೆಳಗು ಬಾ ಹಣತೆಯನು" ಕವನ. ಹೊಸವರ್ಷದ ಮತ್ತು ಸಂಕ್ರಾತಿಯ ಶುಭಾಷಯಗಳೊಂದಿಗೆ - ಗುಬ್ಬಚ್ಚಿ ಕುಟುಂಬ)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ…
ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ… ನಾಡಿನ ಪ್ರತಿಷ್ಠಿತ ʻ ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು...
-
ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... ಅಂದು ನನ್ನ ಕಾದಂ...
ನಿಮ್ಮ ನಲ್ಲೆಯ ಸೇವೆ ತುಂಬಾ ಚೆನ್ನಾಗಿರುವುದರಿಂದಲೇ ಇಷ್ಟು ಚೆಂದದ ಕವನ ಮೂಡಿಬಂದಿದ್ದು ಅಲ್ವಾ?
ಪ್ರತ್ಯುತ್ತರಅಳಿಸಿits really very nice..............
ಪ್ರತ್ಯುತ್ತರಅಳಿಸಿಹೌದು ಶಿವು ಸರ್. ಅವಳಿಲ್ಲದೆ ನನಗೇನಿದೆ?
ಪ್ರತ್ಯುತ್ತರಅಳಿಸಿಥ್ಯಾಂಕ್ಸ್.
Oh! Oh!!! Sharan!!! Thanks da.
ಪ್ರತ್ಯುತ್ತರಅಳಿಸಿvery nice one satish....
ಪ್ರತ್ಯುತ್ತರಅಳಿಸಿThanks Village Cowboy Tarun.
ಪ್ರತ್ಯುತ್ತರಅಳಿಸಿಅನೇಕರು ಸಂಗಾತಿಯ ಸೇವೆಯ ಮೌಲ್ಯವನ್ನೇ ಮರೆಯುತ್ತಾರೆ, ಅವರು ಹೇಗೇ ನಡೆದರೂ ತಪ್ಪು ಹುಡುಕುತ್ತಾರೆ, ಇನ್ನೊ ಕೆಲವರಿಗೆ ಜೀವನವೇ ಒಂದು ವಾಣಿಜ್ಯದ ವ್ಯಾಪಾರ, ವರದಕ್ಷಿಣೆಯ ಸಲುವಾಗಿ ಹೆಂಡತಿಗೆ ತೊಂದರೆಕೊಡುವ, ಹಿಂಸಿಸುವ,ವಿಚ್ಛೇದಿಸುವ, ಸಾಯಿಸುವ ಗಂಡಸರೂ ಇದ್ದಾರಲ್ಲ. ಮಡದಿಯನ್ನು ಪ್ರೀತಿಸುವ ನಿಮ್ಮ ಸಹಜ ಮನೋವೃತ್ತಿಯಿಂದ ಹುಟ್ಟಿದ ಕವನ ಹಿಡಿಸಿತು, ನಿಮ್ಮ ದಾಂಪತ್ಯ ಅನ್ಯೋನ್ಯವಾಗಿ ನೂರ್ಕಾಲ ಬಾಳಲಿ, ಶುಭಾಶಯಗಳು.
ಪ್ರತ್ಯುತ್ತರಅಳಿಸಿಭಟ್ ಸರ್, ನಿಮ್ಮ ಹಾರೈಕೆಗೆ ಅಭಿನಂದನೆಗಳು.
ಪ್ರತ್ಯುತ್ತರಅಳಿಸಿchendada kavana
ಪ್ರತ್ಯುತ್ತರಅಳಿಸಿ