ಶುಕ್ರವಾರ, ಜನವರಿ 14, 2011

ಚಳಿಗಾಲದ ಚುಟುಕುಗಳು


ಬೆಚ್ಚಗೆ
ಎಲ್ಲಾ ಕಾಲದಲ್ಲೂ
ಬೆಚ್ಚಗಿರಲು
ಹೆಂಗಸರಿಗೆ ನೈಟಿ!!
ಗಂಡಸರಿಗೆ ನೈಂಟಿ!

ಮುತ್ತಿನ ಅರ್ಥ
ನೀ ಕೊಟ್ಟ ಮುತ್ತು
ಹೇಳುತ್ತಿದೆ ಸಾವಿರಾರು ಅರ್ಥ
ಮೊದಲರ್ಥ ಮುತ್ತಿನ ಮತ್ತು!
ಉಳಿದೆಲ್ಲಾರ್ಥ ಮತ್ತಿನ ಗಮ್ಮತ್ತು!!

ತಬ್ಬಲಿ
ನಲ್ಲೆ,
ನೀ ನನ್ನ ಮೈ ತಡವಿದರೆ
ನಾ ಹೆಬ್ಬುಲಿ!
ನಲ್ಲೆ,
ನೀ ನನ್ನ ಮೈ ಕೊಡವಿದರೆ
ನಾ ಯಾರ ತಬ್ಬಲಿ!

ಮಿಲನ
ಆಗಸಕ್ಕೆ ತಿಳಿನೀಲಿ
ಕಾಮನಬಿಲ್ಲಿಗೆ ಚಿತ್ತಾರ
ಮಗುವಿಗೆ ನಗುವು
ಗುಲಾಬಿಗೆ ಕೆಂಬಣ್ಣ
ನದಿಗೆ ಹರಿವು
ಪ್ರಕೃತಿಗೆ ಹಸಿರು
ನಮ್ಮ ಮಿಲನ!

         - ಗುಬ್ಬಚ್ಚಿ ಸತೀಶ್.

10 ಕಾಮೆಂಟ್‌ಗಳು:

  1. ಸತೀಶ್,

    ಚಳಿಗಾಲಕ್ಕೆ ಚುಟುಕುಗಳು ಖುಷಿ ಕೊಡುತ್ತವೆ.

    "ನೀ ನನ್ನ ಮೈ ಕೊಡವಿದರೆ
    ನಾ ಯಾರ ತಬ್ಬಲಿ!"
    ಹೀಗೆ ಒಂದು ಸಣ್ಣ ತುಂಟಾಟದ ಬದಲಾವಣೆ ಮಾಡಿದರೆ ಹೇಗೇ? ಇದು ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ
  2. ಶಿವು ಸರ್,

    ನಿಮ್ಮ ತುಂಟಾಟದ ಸೂಕ್ತ ಸಲಹೆ ಸ್ವೀಕರಿಸಿದ್ದೇನೆ.

    ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  3. ಸತೀಶ್, ನಿಮ್ಮ ಚುಟುಕಗಳು ನಗುತರಿಸಿದವು, ನಿಮಗೆಲ್ಲಾ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  4. ಭಟ್ ಸರ್, ಸೀತಾರಾಮ್ ಸರ್, ತರುಣ್ ಭಾಯ್ ಥ್ಯಾಂಕ್ಯೂ ವೆರಿ ಮಚ್.

    ಪಲವಳ್ಳಿ ಸರ್, ದಯಮಾಡಿ ಹಾಕ್ಕೋಳ್ಳಿ.

    ಪ್ರತ್ಯುತ್ತರಅಳಿಸಿ
  5. ಸತೀಶ್, ನೈಂಟಿ ಗಮ್ಮತ್ತೇ,,ಹಹಹ, ಉಳಿದಲ್ಲಾರ್ಥ,,,??!! ಗೊತ್ತಾಗಲಿಲ್ಲ...ಚನ್ನಾಗಿವೆ ಗುಟುಕುಗಳು,,,

    ಪ್ರತ್ಯುತ್ತರಅಳಿಸಿ

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...