ನಿರೀಕ್ಷೆಯಂತೆ ಪುನೀತ್ ರಾಜ್ ಕುಮಾರ್ ಅವರು ಹೀರೋ ಆಗಿ ನಟಿಸಿರುವ ಕೊನೆಯ ಚಿತ್ರ “ಜೇಮ್ಸ್” ಮಾರ್ಚ್ 17ರಂದೇ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಚಿತ್ರ ನೋಡಿ
ಅಭಿಮಾನಿಗಳು ಅಪ್ಪುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನೀವಿನ್ನೂ ಇರಬೇಕಿತ್ತು ಅಂತ ಕಣ್ಣುಗಳನ್ನು
ಒದ್ದೆ ಮಾಡಿಕೊಳ್ಳುತ್ತಿದ್ದಾರೆ.
“ಜೇಮ್ಸ್” ಚಿತ್ರ
ನೋಡುವಷ್ಟು ಕಾಲ ಪುನೀತ್ ರಾಜ್ ಕುಮಾರ್ ಮತ್ತೆ ಹುಟ್ಟಿ ಬಂದಿದ್ದಾರೆ ಎಂಬ ಭಾವ ತೀವ್ರವಾಗಿ
ಕಾಡುತ್ತದೆ. ಅಪ್ಪು ನೀವಿನ್ನೂ ಇರಬೇಕಿತ್ತು ಎಂಬ ಹಾರೈಕೆ ಮನದಲ್ಲಿ ಮೂಡುತ್ತದೆ. ಜೊತೆಯಿರದ ಜೀವ
ಎಂದೆಂದಿಗೂ ಜೀವಂತ ಎನ್ನುವ ಯೋಗರಾಜ ಭಟ್ಟರ ಮಾತುಗಳು ಸತ್ಯವಾಗಿವೆ.
ಡಾ. ರಾಜ್‌ಕುಮಾರ್
ಅವರ ಬಾಂಡ್ ಸಿನಿಮಾಗಳಂತೆಯೇ ಈ ಸಿನಿಮಾ ಕೂಡ ನೋಡುಗರನ್ನು ಸೆಳೆಯುತ್ತಿದೆ. ಪುನೀತ್ ಅವರ
ಅಬ್ಬರದ ರೌದ್ರ ನಟನೆಗೆ ಡಾ. ಶಿವರಾಜ್‌ಕುಮಾರ್ ಅವರ ಧ್ವನಿ ಬೊಬ್ಬಿರಿಯುತ್ತದೆ. ಕಿಶೋರ್
ಪತ್ತಿಕೊಂಡ ಅವರ ನಿರ್ಮಾಣ, ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಬಹಳ ಅದ್ದೂರಿಯಾಗಿ ಮೂಡಿದೆ. ಶಿವಣ್ಣ
ಮತ್ತು ರಾಘವೇಂದ್ರ ರಾಜ್‍ಕುಮಾರ್ ಕೂಡಾ ಈ ಚಿತ್ರದಲ್ಲಿ ನಟಿಸಿರೋದು ಹೈಲೈಟ್.
ನೀವಿನ್ನೂ ಈ
ಸಿನಿಮಾ ನೋಡಿಲ್ಲವಾದರೆ, ಈ ಕೂಡಲೇ ನೋಡಿ…
***
ತುಮಕೂರಿನ INOX ನಲ್ಲಿ "ಜೇಮ್ಸ್" ನೋಡಿ ಈ ವಿಡಿಯೋ ಮಾಡಿದ್ದೇನೆ… ಮತ್ತೆ ಹುಟ್ಟಿ ಬಂದರು... ಡಾ. ಪುನೀತ್ ರಾಜ್ ಕುಮಾರ್...
https://youtu.be/2FI04vVJ1Dg
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ