ಪ್ರೀತಿಯ ಗೆಳೆಯರೇ,
ಇಂದು ಸಂಜೆ
ಪ್ರೀತಿಯ ಗೆಳೆಯರೊಬ್ಬರು, ಸರ್ ನೀವು ಬನ್ನಿ ನಮ್ಮ ಅತಿ ಸಣ್ಣಕತೆಗಳ ಫೇಸ್ ಬುಕ್ ಗುಂಪಿಗೆ
ಎಂದು ಆಹ್ವಾನಿಸಿದರು. ಪರಸ್ಪರ ಅಭಿಪ್ರಾಯಗಳನ್ನು ಗೇಮ್ ಮಾಡುವ ಆಲೋಚನೆ ಅವರಿಗಿತ್ತು. ನಾನು “ಬೆಳದಿಂಗಳು ಮತ್ತು ಮಳೆ” ಪುಸ್ತಕವನ್ನು ಓದಿರುವಿರಾ
ಎಂದು ಕೇಳಿ, ಆ ಪುಸ್ತಕ ಕುರಿತು ಹೇಳಿದೆ. ಅವರು ಇಲ್ಲವೆಂದರು. ಆಗಿದ್ದರೆ ಮೊದಲು ಆ
ಪುಸ್ತಕವನ್ನು ಓದಿ, ಆ ರೀತಿಯಾಗಿ ನಿಮ್ಮದೇ ಒಂದಷ್ಟು ಕತೆಗಳನ್ನು ಬರೆದುಕೊಡಿ ನಾನೇ
ಪ್ರಕಟಿಸುತ್ತೇನೆ ಎಂದೆ. ಅವರು ಸದ್ಯಕ್ಕೆ ಆಯ್ತು ಎಂದರು. ಅವರ ಆಹ್ವಾನವನ್ನು ನಾನು
ತಿರಸ್ಕರಿಸುವುದಕ್ಕೆ ನನ್ನ ಮೇಲೆ ಸಿಟ್ಟು ಅಥವಾ ಬೇಜಾರು ಮಾಡಿಕೊಂಡಿರಬಹುದು. ನಾನು ಓದುವುದು
ಮತ್ತು ಬರೆಯುವದನ್ನು ಬಿಟ್ಟು ಉಳಿದಿದ್ದೇಲ್ಲಾ ಟೈಮ್ ವೇಸ್ಟ್ ಎಂದು ಭಾವಿಸಿರುವವನು. ಅವರ
ಒಳ್ಳೆಯದಕ್ಕೇ ಹೇಳಿದ್ದೇನೆ ಎಂದೂ ಹೇಳಿದ್ದೇನೆ. ಮಿಕ್ಕಿದ್ದು ಅವರಿಗೆ ಬಿಟ್ಟದ್ದು.
ನಿಮಗೆ ನಮ್ಮ
ಪ್ರಕಾಶನದಿಂದ ಪ್ರಕಟಗೊಂಡಿರುವ ವಿ.ಗೋಪಕುಮಾರ್ ರವರ “ಬೆಳದಿಂಗಳು ಮತ್ತು ಮಳೆ” ನ್ಯಾನೋಕತೆಗಳ ಸಂಕಲನ ಗೊತ್ತಿರಬಹುದು. ಈ ಪುಸ್ತಕವನ್ನು ಓದಿ, ತಮ್ಮ ಅನಿಸಿಕೆಯನ್ನು ಕನ್ನಡ
ಸಿನಿಮಾರಂಗದಲ್ಲಿ ಸಹ ನಿರ್ದೇಶಕನಾಗಿರುವ ಪ್ರವೀಣ್ ಕುಮಾರ್ ಜಿ. ಯವರು ಪ್ರೀತಿಯಿಂದ ಹಂಚಿಕೊಂಡಿದ್ದಾರೆ.
ನೀವು ಈ ಪುಸ್ತಕವನ್ನು
ಇನ್ನೂ ಓದಿಲ್ಲವಾದರೆ ಮರೆಯದೆ ಓದಿ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಮರೆಯದೆ ಪುಸ್ತಕದ ಬಗ್ಗೆ ಬರೆಯಿರಿ...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.
ಎಲ್ಲರೂ "ಓದುವುದು ಮತ್ತು ಬರೆಯುವುದನ್ನು ಬಿಟ್ಟು ಬೇರೆಲ್ಲವನ್ನೂ ವೇಸ್ಟ್" ಎಂದುಕೊಂಡರೆ ಎಷ್ಟು ಅಕ್ಷರಪುಷ್ಪಗಳು ಹುಟ್ಟುತ್ತವೆ, ನಿಮ್ಮ ವೈಚಾರಿಕತೆ ಹೀಗೆ ಇರಲಿ
ಪ್ರತ್ಯುತ್ತರಅಳಿಸಿಪುಸ್ತಕ ಎಲ್ಲಿ ಸಿಗುತ್ತದೆಂದು ದಯವಿಟ್ಟು ತಿಳಿಸಿ
ಪ್ರತ್ಯುತ್ತರಅಳಿಸಿ