ಅದು ೧೯೯೯ರ ವರ್ಷ. ಆಗಷ್ಟೆ ನನ್ನ ಪದವಿ ಫಲಿತಾಂಶ ಬಂದಿತ್ತು. ಮುಂದೆ ಓದುವ ಇಚ್ಛೆಯಿದ್ದರೂ ಹಣಕಾಸಿನ ತೊಂದರೆಯಿಂದ ಕೆಲಸ ಹುಡುಕುವುದೆಂದು ನಿರ್ಧಾರವಾಗಿತ್ತು. ಅದಾಗಲೇ ನನಗೆ ನನ್ನ ವಾರಿಗೆಗಿಂತಲೂ ಹಿರಿಯರಾದ ಕೆಲವು ಗೆಳೆಯರಿದ್ದರು. ಅದರಲ್ಲಿ ಗುಬ್ಬಿಯ ಮಂಜುನಾಥ ಹೋಟೆಲ್ಲಿನ ವಿಶು ಕೂಡ ಒಬ್ಬರು. ಅವರು ಶೈಕ್ಷಣಿಕವಾಗಿ ಹೆಚ್ಚೇನು ಓದಿಲ್ಲದಿದ್ದರೂ ಅವರಿಗೆ ಇದ್ದ ಸಾಹಿತ್ಯದ ಬಗೆಗಿನ ಆಸಕ್ತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಇದ್ದ ಮಾಹಿತಿಗಳಿಂದ ನನ್ನಲ್ಲಿ ವಿಶೇಷ ಆಸಕ್ತಿ ಬೆಳೆಸಿದ್ದರು. ಅವರ ಹೋಟೇಲಿನಲ್ಲಿ ಗುಬ್ಬಿಗೆ ಬರುತ್ತಿದ್ದ ಎಲ್ಲಾ ನ್ಯೂಸ್‌ಪೇಪರ್‌ಗಳು ಸಿಗುತ್ತಿದ್ದವು. ನಾನಂತೂ ಭಾನುವಾರದ ಬೆಳಗಿನ ಲೈಬ್ರರಿ ವಿಸಿಟ್ ಮುಗಿದ ಮೇಲೆ ಅಲ್ಲೇ ಹತ್ತಿರದಲ್ಲೇ ಇದ್ದ ಇವರ ಹೋಟೆಲ್ಲಿಗೆ ಸುಮಾರು ೧೧ ಗಂಟೆಯ ಹೊತ್ತಿಗೆ ಹೋಗಿಬಿಡುತ್ತಿದೆ. ಆ ಸಮಯಕ್ಕೆ ಸರಿಯಾಗಿ ವಿಶುವಿನ ಕೆಲವು ಗೆಳೆಯರು, ಜೊತೆಗೆ ಬಹುಮುಖ್ಯವಾಗಿ ಗುರು-ಗೆಳೆಯ ಮೃತ್ಯುಂಜಯ ಬರುತ್ತಿದ್ದರು. ಭಾನುವಾರವಾದ್ದರಿಂದ ಅಷ್ಟೇನೂ ಜನರಿರುತ್ತಿರಲಿಲ್ಲ. ನಮ್ಮ ಮಾತುಗಳಿಗೆ, ಓದಿಗೆ, ಕಾಫೀ, ಟೀ ಕುಡಿಯಲಿಕ್ಕೆ ಹೋಟೇಲ್ ಸಾಕ್ಷಿಯಾಗುತ್ತಿತ್ತು. ಲೈಬ್ರರಿಯಲ್ಲಿ ಓದಲಾಗದ ಭಾನುವಾರದ ಪುರವಣಿಗಳನ್ನು ತೆಗೆದುಕೊಂಡು ನಾನೊಂದು ಮೂಲೆಯಲ್ಲಿ ಕುಳಿತು ಏನನ್ನಾದರೂ ಓದುವುದಕ್ಕೆ ಹಚ್ಚುತ್ತಿದ್ದೆ. ಕಾಫೀ ಕುಡಿದ ಮೇಲೆ ಎಲ್ಲಾ ಗೆಳೆಯರೂ ಒಂದಷ್ಟು ಹೊತ್ತು ಹರಟಿ ಹೊರಟುಬಿಡುತ್ತಿದ್ದರು. ಕಡೆಗೆ ನಾನು ವಿಶು ಊಟದ ಸಮಯದವರೆಗೂ ಕುಳಿತು ಒಂದಷ್ಟು ಹರಟುತ್ತಿದ್ದೆವು. ನಮ್ಮಿಬ್ಬರ ಮಾತುಗಳಲ್ಲಿ ಯಾವಾಗಲೂ ಬರುತ್ತಿದ್ದದ್ದು ಸಾಹಿತ್ಯ ಮತ್ತು ಸಾಹಿತಿಗಳ ಬದುಕು ಮಾತ್ರ. ಅದಾಗಲೇ ನನಗೆ ವೈಯೆನ್ಕೆ ಪರಿಚಯವಾದದ್ದು. ಅವರ ಅಂಕಣ “ವೆಂಡರ್ ಕಣ್ಣು”ವನ್ನು ತಪ್ಪದೆ ಓದಿರುತ್ತಿದ್ದ ವಿಶು ಅವರ ಪ್ರಖರ ಪನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇವರ ಜೊತೆಗೆ ಲಂಕೇಶ್, ಕುವೆಂಪು, ತೇಜಸ್ವಿ, ವಿಶೇಷವಾಗಿ ಶಿವರಾಮ ಕಾರಂತರ ಪುಸ್ತಕಗಳ ಬಗ್ಗೆ ಹೇಳುತ್ತಿದ್ದರು. ನನಗೆ ಮೊದಲು ವೈಚಾರಿಕತೆಯಿದ್ದ ಗೆಳೆಯರು ಸಿಕ್ಕಿದ್ದರೆ ಅದು ವಿಶುವೇ! ಅವರಿಂದ ನನಗೆ ಎ.ಎನ್. ಮೂರ್ತಿರಾಯರ, ಡಾ.ಅಬ್ರಾಹಂ ಕೋವೂರರ ಪರಿಚಯವಾಗಿತ್ತು. ಮೂರ್ತಿರಾಯರು ಬರೆದ ದೇವರು, ದೆವ್ವ ಕುರಿತ ಹಲವು ಲೇಖನಗಳನ್ನು ಓದಿದ್ದೆ. ಕೋವೂರರ “ದೇವರು, ದೆವ್ವ, ವಿಜ್ಞಾನ” ಪುಸ್ತಕವನ್ನು ಇಡೀಯಾಗಿ ಓದಿ ಮುಗಿಸಿದ್ದೆ.
ವಿಶುವಿಗೆ ಟ್ಯಾಬ್ಲಯ್ಡಗಳ ಬಗೆಗೂ ಪರಿಚಯವಿತ್ತು. ಆ ಕಾಲದಲ್ಲಿ ಉತ್ತುಂಗದಲ್ಲಿದ್ದ “ಹಾಯ ಬೆಂಗಳೂರ್” ಪತ್ರಿಕೆಯ ರವಿಬೆಳಗೆರೆಯ ಬಗ್ಗೆ ದಂತಕಥೆಗಳೆ ಹುಟ್ಟಿಕೊಂಡಿದ್ದವು. ವಿಶು ತಪ್ಪದೇ ಓದುತ್ತಿದ್ದ ಪತ್ರಿಕೆಗಳ ಪೈಕಿ ಅದು ಬಹು ಮುಖ್ಯವಾಗಿತ್ತು. ಆ ಪತ್ರಿಕೆಯನ್ನು ಮೊದಲು ತಂದವರೇ ವಿಶು ಅದರಲ್ಲಿರುತ್ತಿದ್ದ ಜಾನಕಿ ಕಾಲಂ ಓದಿಬಿಡುತ್ತಿದ್ದರು. ಕಾರಣ ಕೇಳಿದರೆ, ಇವರ್ಯಾಿರೋ ಬೆಂಗಳೂರಿನ ಕಾಲೇಜಿನಲ್ಲಿ ಕನ್ನಡ ಪ್ರೊಫೇಸರ್ (ಲೇಡಿ) ಇರಬೇಕು, ಚೆನ್ನಾಗಿ ಬರೀತಾರೆ ಎಂದು ಹೇಳುತ್ತಿದ್ದರು. ಆಗೊಮ್ಮೆ ಈಗೊಮ್ಮೆ ನಾನೂ ಕಣ್ಣಾಡಿಸುತ್ತಿದ್ದರೂ ಮೊದಲು ಕೆಲಸ ಹುಡುಕುವ ಧಾವಂತದಲ್ಲಿದ್ದದರಿಂದ ಹೆಚ್ಚೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆ ಜಾನಕಿ ಜೋಗಿಯವರು ಎಂದು ನನಗೆ ಗೊತ್ತಾಗಿದ್ದು ಸುಮಾರು ೨೦೦೬-೦೭ರಲ್ಲಿ ಇರಬೇಕು. ಅದೂ ಈಟಿವಿಯವರು ಇವರ ಬಗ್ಗೆ ಪರಿಚಯಮಾಡಿಕೊಟ್ಟಮೇಲೆ!
ಇದೆಲ್ಲಾ ಇರಲಿ, ಅಲ್ಲಿಯವರೆಗೂ ಏನಾನ್ನಾದರೂ ಬರೆಯಬೇಕೆಂದು ಚಿಂತಿಸುತ್ತಿದ್ದ ನನಗೆ ಏನನ್ನು ಬರೆಯಬೇಕು? ಹೇಗೆ ಬರೆಯಬೇಕು? ಎಂದು ಸರಿಯಾಗಿ ತೋಚುತ್ತಿರಲಿಲ್ಲ. ಎಂಟನೇ ತರಗತಿಯಲ್ಲಿ ಒಂದು ಕಥೆ ಬರೆದು ಯಾರಾದರೂ ನೋಡಿಬಿಟ್ಟರೆ ಗತಿಯೇನು ಎಂಬ ಭಯದಿಂದಲೇ ಅದನ್ನು ಹರಿದುಹಾಕಿದ್ದೆ (ಭಯವೇಕಿತ್ತು ಎಂದು ನನಗೆ ಈಗಲೂ ಸರಿಯಾಗಿ ತಿಳಿದಿಲ್ಲ). ಆ ಸಂದರ್ಭದಲ್ಲಿ (೧೯೯೯) ಅರುಧಂತಿ ರಾಯ್‌ಳ “ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಪುಸ್ತಕಕ್ಕೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿ ಬಂದಿತ್ತು. ನಾನು ಸುಮ್ಮನೆ ಅವಳಿಗೆ ಬಂದಿದ್ದ ಪ್ರಶಸ್ತಿಯ ಮೊತ್ತವನ್ನು ಲೆಕ್ಕ ಹಾಕಿದ್ದೆ. ಹತ್ತಿರತ್ತಿರ ಐವತ್ತು ಲಕ್ಷಗಳು. ಆಗಲೇ ನನ್ನಲ್ಲಿದ್ದ ನಿರುದ್ಯೋಗಿ ನಿನ್ಯಾಕೆ ಒಂದು ಪುಸ್ತಕವನ್ನು ಬರೆದು ಇಷ್ಟು ಮೊತ್ತವನ್ನು ಗಳಿಸಬಾರದೆಂದು ಲೆಕ್ಕಹಾಕಿದ್ದ. ಎಂಥಾ ಹುಚ್ಚು ಭ್ರಮೆ!
ಅದು ಇಷ್ಟಕ್ಕೆ ಮುಗಿಯಲಿಲ್ಲ. ಒಂದು ರಾತ್ರಿ ಊಟವಾದ ಬಳಿಕ ವಿಶುವಿನ ಜೊತೆ ಸಣ್ಣ ತಿರುಗಾಟದಲ್ಲಿ ವಿಶುವನ್ನು ಕೇಳಿಯೆಬಿಟ್ಟೆ. ವಿಶು ನಾನೊಂದು ಪುಸ್ತಕ ಬರೆಯಬೇಕೆಂದಿರುವೆ? ವಿಶುವಿಗೆ ಗೊತ್ತಿತ್ತು ನಾನು ಕನ್ನಡದಲ್ಲಷ್ಟೆ ಬರೆಯಬಲ್ಲೆನೆಂದು. ಅವರು ಸಣ್ಣ ಆಶ್ಚರ್ಯಬವನ್ನಷ್ಟೆ ವ್ಯಕ್ತ ಪಡಿಸಿ ಬರೆಯುವುದೆನೋ ಸರಿ, ಆದರೆ, ಕನ್ನಡದಲ್ಲಿ ಪುಸ್ತಕ ಮಾಡುವುದು ಅದನ್ನು ಮಾರಾಟ ಮಾಡುವುದು ತುಂಬ ಕಷ್ಟದ ಕೆಲಸ. ಅದಕ್ಕೆಲ್ಲಾ ತುಂಬಾ ಹಣ ಖರ್ಚಾಗುತ್ತದೆ, ಜೊತೆಗೆ ಹೊಸಬರ ಪುಸ್ತಕಗಳನ್ನು ಯಾರೂ ಪ್ರಕಾಶಿಸಲು ಇಷ್ಟಪಡುವುದಿಲ್ಲ ಮತ್ತು ಯಾರೂ ಕೊಂಡು ಓದುವುದಿಲ್ಲ ಎಂದು ವಾಸ್ತವವನ್ನು ಹೇಳಿದ್ದರು. ಎಸ್.ಎಲ್.ಭೈರಪ್ಪ ಮತ್ತು ರವಿಬೆಳಗೆರೆಯವರ ಪುಸ್ತಕಗಳು ಮಾತ್ರ ಚೆನ್ನಾಗಿ ಮಾರಾಟವಾಗುತ್ತವೆ, ಇನ್ನೂ ಉತ್ತಮ ಲೇಖಕರಿದ್ದರೂ ಅವರ ಪುಸ್ತಕಗಳು ಅಷ್ಟೇನೂ ಖರ್ಚಾಗುವುದಿಲ್ಲ ಎಂದು ವಿವರಿಸಿದ್ದರು. ಜೊತೆಗೆ ಬಹಳ ಹಿಂದೆ ಅವರದೊಂದು ಕವನವನ್ನು ಸೇರಿಸಿ ಹೊರತಂದಿದ್ದ “ಕತ್ತಲೆಗೆ ಮೂರು ಬಣ್ಣ” ಎಂಬ ಕವನ ಸಂಕಲನದ ಬಗೆಗೂ ಹೇಳಿದರು. ಅವರ ಹಿರಿಯ ಸಾಹಿತಿ ಮಿತ್ರರಾದ ಹಂಪಣ್ಣ ಸರ್, ಎಂ.ಹೆಚ್.ಎನ್. ಸರ್ ಮತ್ತಿತ್ತರರು ಸೇರಿ ಈ ಪುಸ್ತಕವನ್ನು ಹೊರತಂದಿದ್ದರು. ಅದಕ್ಕೆ ಪಟ್ಟ ವ್ಯಥೆಯನ್ನು ಹಂಚಿಕೊಂಡಿದ್ದರು. ಜೊತೆಗೆ ಇದೆಲ್ಲಾ ಬೆಂಗಳೂರಿನಲ್ಲಿರುವವರಿಗೆ ಸುಲಭ ಎಂದು ಹೇಳಿದರು. ಕನ್ನಡ ಮತ್ತು ಇಂಗ್ಲೀಷ್ ಪುಸ್ತಕ ಮಾರುಕಟ್ಟೆಯತ್ತಲೂ ನಮ್ಮ ಚರ್ಚೆ ಮುಂದುವರಿದು ಸಾಕಷ್ಟು ಮಾಹಿತಿ ನನಗೆ ದೊರೆತ್ತಿತ್ತು.
ಅಲ್ಲಿಗೆ ಸದ್ಯಕ್ಕೆ ಪುಸ್ತಕವೊಂದನ್ನು ಬರೆದು ಪ್ರಕಟಿಸಿ, ಮಾರುವ ಬದಲು ಒಂದು ಕೆಲಸ ಹುಡುಕಿಕೊಂಡು ನಂತರ ಇದರ ಬಗ್ಗೆ ಚಿಂತಿಸಬೇಕೆಂದು ನನಗೆ ನಾನೇ ತಿಳಿ ಹೇಳಿಕೊಂಡದ್ದಾಯಿತು.
ತದನಂತರ ನನ್ನ ಜೀವನದಲ್ಲಿ ನಾನೆಂದೂ ಉಹಿಸಲಾರದ ರೀತಿಯಲ್ಲಿ ಹಲವು ಬದಲಾವಣೆಗಳಾಗಿ ನಾನೇನಾಗುವೇನೋ ನನಗೆ ಸರಿಯಾಗಿ ತಿಳಿಯದಾಯಿತು. ಆಗ ನನ್ನ ಕೈ ಹಿಡಿದಿದ್ದು ಸಾಹಿತ್ಯ. ಆಗ ಮತ್ತೆ ಹೆಚ್ಚು ಹೆಚ್ಚು ಓದಲು ಶುರುಮಾಡಿದೆ. ಆ ಓದೇ ಏನೋ ನನ್ನಿಂದ ಕೆಲವು ಕವನಗಳನ್ನು ಬರೆಯಲಾರಂಭಿಸಿತು. ಅದಕ್ಕೆ ಪ್ರೀತಿಯ ಪ್ರೇರಣೆಯೂ ದೊರೆಯಿತು. ಆ ಹಲವು ಕವನಗಳಿಗೆ ವಿಶುವೇ ಮೊದಲ ಸಾಕ್ಷಿಯಾದರು. ಹಲವರು ಓದಿ ಪ್ರೋತ್ಸಾಹಿಸಿದರು. ಇದರಲ್ಲಿ ಬಹುಮುಖ್ಯವಾಗಿ ದೇವರು ಕೊಟ್ಟ ತಂಗಿ ಸುಷ್ಮಾ ಮತ್ತು ಜೀವದ ಗೆಳೆಯ ಮೃತ್ಯುಂಜಯರು. ನನ್ನವಳಿಗೆ (ಆಗಿನ್ನೂ ಮದುವೆಯಾಗಿರಲಿಲ್ಲ) ನನ್ನೆಲ್ಲಾ ಕವನಗಳು ಮೆಚ್ಚುಗೆಯಾಗುತ್ತಿದ್ದವು.
ಹೀಗೆ ಕಾಲ ಕಳೆಯುತ್ತಿರಲು ಕೆಲಸದ ನಿಮಿತ್ತ ತುಮಕೂರಿನಲ್ಲಿ ಮನೆ ಮಾಡಿಕೊಂಡೆ. ಆಗ ಸ್ವಲ್ಪ ಗದ್ಯದ ಕಡೆಗೂ ಗಮನ ಹರಿಸತೊಡಗಿದೆ. ಕಾಲ್ಪನಿಕವಾಗಿ ಕೆಲವು ಲೇಖನಗಳನ್ನು ಬರೆದು ನನ್ನಲ್ಲೇ ಇಟ್ಟುಕೊಳ್ಳತೊಡಗಿದೆ. ಜೊತೆಗೆ ನನ್ನ ಬಳಿ ಕುತೂಹಲಭರಿತ ಒಳ್ಳೊಳ್ಳೆ ಲೇಖನಗಳ ಸಂಗ್ರಹವಿತ್ತು. ನನ್ನ ಲೇಖನಗಳನ್ನು ಯಾವ ಪತ್ರಿಕೆಗೂ ಕಳುಹಿಸುತ್ತಿರಲ್ಲಿಲ್ಲ. ನಾನೇ ಆಗಾಗ ತೆರೆದು ಓದುವುದು, ಮತ್ತೆ ತಿದ್ದುವುದು. ಹೀಗೇ ಸಾಗಿತ್ತು...
ಮದುವೆಯಾದ ನಂತರ, ಶ್ರೀಮತಿಯ ಪ್ರೋತ್ಸಾಹದಿಂದ ಮತ್ತಷ್ಟು ಬರೆಯತೊಡಗಿದೆ. ಆಗಷ್ಟೇ ಎಸ್.ಎಸ್.ಪುರಂನ ಶೆಟ್ಟರ ಪುಸ್ತಕದಂಗಡಿಯಲ್ಲಿ “ನಿಮ್ಮೆಲ್ಲರ ಮಾನಸ” ಎಂಬ ಮಾಸ ಪತ್ರಿಕೆಯೂ ಪರಿಚಯವಾಗಿತ್ತು. ಶ್ರೀಮತಿಯ ಪ್ರೋತ್ಸಾಹದಿಂದ ಒಂದು ಸಂಗ್ರಹ ಲೇಖನವನ್ನು ಮಾನಸಕ್ಕೆ ಕಳುಹಿಸಿ ಆತಂಕದಲ್ಲಿದ್ದೆ. ಅದಕ್ಕೂ ಮುಂಚೆ ಕೆಲವು ನಗೆಹನಿಗಳು ವಿಜಯಕರ್ನಾಟಕದ “ನಗೆವಿಜಯ” ಅಂಕಣದಲ್ಲಿ ಪ್ರಕಟವಾಗಿ ಮಿಂಚಿ ಮರೆಯಾಗಿದ್ದವು. ಒಂದು ದಿನ ಬೆಳಗ್ಗೆ ನಾನು ಸ್ನಾನ ಮಾಡುತ್ತಿದ್ದ ಸಮಯದಲ್ಲಿ ನನ್ನ ಫೋನು ರಿಂಗಣಿಸತೊಡಗಿತು. ನೋಡಿದ ಇವಳು “ರೀ... ಗಣೇಶ್ ಕೋಡೂರ್” ಎಂದು ಒಂದೇ ಉಸಿರಿಗೆ ಬಚ್ಚಲಿಗೆ ಹಾರಿದ್ದಳು. ಫೋನ್ ರಿಸೀವ್ ಮಾಡಿ ವಿಶ್ ಮಾಡಿ ಮಾತನಾಡಿದೆ. ನನ್ನ ಸಂಗ್ರಹ ಚೆನ್ನಾಗಿರುವುದೆಂದು ಅದನ್ನು ಪ್ರಕಟಿಸುವುದಾಗಿಯೂ ಗಣೇಶ್ ಹೇಳಿದರು. ನನ್ನಲ್ಲಿ ವಿದ್ಯುತ್ ಸಂಚಾರವಾಯಿತು. ಅವರೆಷ್ಟು ಸರಳವಾಗಿ ನನ್ನನ್ನು ಗಣೇಶ್ ಎಂದಷ್ಟೇ ಕರಿಯಿರಿ ಎಂದು ಆತ್ಮೀಯತೆ ತೋರಿದರು. ನನಗೆ ಆ ಆತ್ಮೀಯತೆ ಆಪ್ತವಾಯಿತು. ಹೀಗೆ ಹಲವು ವರ್ಷಗಳು ಕಳೆದವು. ಒಮ್ಮೆ ಗೆಳೆಯ ವಿಶುವಿನ ಜೊತೆ ಬೆಂಗಳೂರಿಗೆ ಹೋಗಿ ಗಣೇಶ್ ರವರನ್ನು ಭೇಟಿಮಾಡಿ ಬಂದೆ. ಆಗಾಗ ಏನಾದರು ಕೇಳುವುದಿದ್ದರೆ ಫೋನ್ ಮಾಡಿ ತೊಂದರೆ ಕೊಡುವುದು ಮುಂದುವರಿದೇ ಇತ್ತು.
ಮತ್ತೆ ಅನಿರೀಕ್ಷಿತ ಘಟನೆಗಳು ನನ್ನ ಆರೋಗ್ಯದ ವಿಚಾರವಾಗಿ ನಡೆದು ತತ್ತರಿಸಿದ್ದೆ. ಆಗೆಲ್ಲಾ ಗಣೇಶರನ್ನು ಮೀಟ್ ಮಾಡಬೇಕೆಂದುಕೊಂಡರೂ ಸುಮ್ಮನೆ ಅವರ ಕ್ರಿಯೇಟಿವ್ ಟೈಮನ್ನು ಹಾಳುಮಾಡುವುದೇಕೆ ಎಂದು ಸುಮ್ಮನಿದ್ದೆ.
ಒಂದಷ್ಟು ಸಮಯದ ನಂತರ ಒಂದೆರಡು ಸಂಗ್ರಹ ಲೇಖನಗಳು ಪ್ರಕಟವಾದ ಮೇಲೆ, ನನ್ನದೇ ಸ್ವಂತ ಲೇಖನಗಳನ್ನು ಮಾನಸಕ್ಕೆ ಕಳುಹಿಸುವುದೆಂದು ನಿರ್ಧರಿಸಿ ಅದನ್ನೂ ಮಾಡಿದೆ. ಸುಂದರವಾದ ಚಿತ್ರಗಳೊಂದಿಗೆ “ನಿನ್ನ ಮನೆಯ, ನನ್ನ ಮನದ ಲಕ್ಷ್ಮೀಯು ನೀನು...” ಎಂಬ ಲೇಖನ ಪ್ರಕಟವಾಗಿ ನನ್ನಲ್ಲಿ ಮತ್ತಷ್ಟು ಹುರುಪು ತುಂಬಿತು. ಆ ಸಮಯಕ್ಕೆ ಸರಿಯಾಗಿ ನನ್ನ ಬ್ಲಾಗ್ ರೂಪುಗೊಂಡಿತ್ತು. ಅದರ ಮುಖಾಂತರವೂ ಒಂದಷ್ಟು ಗೆಳೆಯರು ಸಿಕ್ಕಿದ್ದರು.
ಮತ್ತೊಂದೆರೆಡು ಲೇಖನಗಳು ಮಾನಸದಲ್ಲಿ ಪ್ರಕಟವಾದ ಮೇಲೆ, ಒಂದಷ್ಟು ಹಣವನ್ನು ಹೊಂದಿಸಿಕೊಂಡು ನನ್ನ ಮೊದಲ ಪುಸ್ತಕವಾಗಿ “ಮಳೆಯಾಗು ನೀ...” ಕವನಸಂಕಲನವನ್ನು ನಮ್ಮದೇ ಪ್ರಕಾಶನದಲ್ಲಿ ಪ್ರಕಟಿಸುವುದಾಗಿ ತೀರ್ಮಾನಿಸಿದ್ದೆ.
ಆಗೆಲ್ಲಾ ಸಾಕಷ್ಟು ವಿವರ ನೀಡಿದವರು ಗಣೇಶ್. ಜೊತೆಗೆ ಖ್ಯಾತ ಲೇಖಕಿ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್ ರವರ ಮುನ್ನುಡಿಯೊಂದಿಗೆ ಪುಸ್ತಕ ಬಿಡುಗಡೆ ಸಮಾರಂಭ ಚೆನ್ನಾಗಿ ನಡೆಯಿತು. “ಮಳೆಯಾಗು ನೀ...” ನನಗೊಂದಿಷ್ಟು ಹೆಸರನ್ನೂ ತಂದುಕೊಟ್ಟಿತ್ತು. ಈ ಸಂಕಲನದ “ಬೆಚ್ಚಗೆ” ಎಂಬ ಹನಿಗವನ ‘ಎಲ್ಲಾ ಕಾಲದಲ್ಲೂ ಬೆಚ್ಚಗಿರಲು/ಹೆಂಗಸರಿಗೆ ನೈಟಿ/ಗಂಡಸರಿಗೆ ನೈಂಟಿ’ ಟಿವಿಯ ಕಾರ್ಯನಕ್ರಮವೊಂದರಲ್ಲಿ ಉದ್ಗರಿಸಿದ್ದನ್ನ ನಮ್ಮ ಬ್ಯಾಂಕಿನ ಆಗಿನ ನಿರ್ದೇಶಕರಾಗಿದ್ದ ಶ್ರೀ ಟಿ.ವಿ.ಮಂಜುನಾಥರವರಿಂದ (ಇವರೀಗ ಅಧ್ಯಕ್ಷರು) ಮತ್ತು ನನ್ನ ಹಿರಿಯ ಸಹೋದ್ಯೋಗಿ ಶ್ರೀಮತಿ ಆಶಾರವರಿಂದ ತಿಳಿದು ಖುಷಿಗೊಂಡಿದ್ದೆ. ಶ್ರೀಯುತ ಮಂಜುನಾಥರವರು ನನಗೊಂದು ಪೆನ್ನನ್ನು ಉಡುಗೊರೆಯಾಗಿ ಕೂಡ ನೀಡಿದ್ದರು.
ಆನಂತರ ಅದಾಗಲೇ ಮಾನಸದಲ್ಲಿ ಪ್ರಕಟವಾಗಿದ್ದ ಮೊದಲ ಲೇಖನಕ್ಕೆ ಪೂರಕವಾಗಿ ಹಲವು ಲೇಖನಗಳನ್ನು ಬರೆದು ಬ್ಲಾಗಿನಲ್ಲಿ ಪ್ರಕಟಿಸಿ, ಹಲವು ಗೆಳೆಯರನ್ನು ಗಳಿಸಿಕೊಂಡಿದ್ದೆ. ನಂತರ ಮಾನಸದಲ್ಲಿ ಮತ್ತೂ ಎರಡೂ ಲೇಖನಗಳು ಪ್ರಕಟವಾದವು. ಆ ಸಮಯದಲ್ಲಿ “ಗಾಳಿಪಟದ ಬಾಲ ಎನ್ನ ಮನ” ಎಂಬ ಲೇಖನಕ್ಕೆ ತುಮಕೂರಿನ ಶ್ರೀ ಸಿದ್ದರಾಜ ಐವಾರರು ನಡೆಸಿದ್ದ ಗಾಳಿಪಟ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವೂ ಬಂತು. ಈ ಲೇಖನ ಅಂತಾರ್ಜಾಲ ಪತ್ರಿಕೆ “ಅವಧಿ”ಯಲ್ಲಿ ಪ್ರಕಟವಾದ ನನ್ನ ಮೊದಲ ಲೇಖನ. ಆಗ ಈ ಎಲ್ಲಾ ಲೇಖನಗಳನ್ನೂ ಸೇರಿಸಿ “ಸ್ನೇಹ ಮಾಡಬೇಕಿಂಥವಳ...” ಎಂಬ ಸಂಗ್ರಹವನ್ನು ಹೊರತರುವುದೆಂದು ನಿರ್ಧರಿಸಿದ್ದೆ. ಅದಕ್ಕೆ ಶ್ರೀ ಎ.ಆರ್. ಮಣಿಕಾಂತ್ ರವರ ಕೈಯಲ್ಲಿ ಮುನ್ನುಡಿಬರೆಸಬೇಕೆಂದು ತೀರ್ಮಾನಮಾಡಿಕೊಂಡಿದ್ದೆ. ಅವರಿಗೆ ಹೇಳಿ ಮುನ್ನುಡಿ ಬರೆಸಿಕೊಡುವ ಜವಾಬ್ದಾರಿಯನ್ನು ಪ್ರೀತಿಯ ಪ್ರಕಾಶಣ್ಣ ತೆಗೆದು ಕೊಂಡಿದ್ದರು. ಆದರೆ, ಮಣಿಕಾಂತ್ ಸರ್ ಪತ್ರಕರ್ತರಾದ್ದರಿಂದಲೋ ಏನೋ ಮುನ್ನುಡಿ ಬೇಗ ಸಿಗಲಿಲ್ಲ. ಅದಾಗ ನಾಗತಿಹಳ್ಳಿಯ ಮೊದಲನೇ ಚಿತ್ರಕಥಾ ಶಿಬಿರದ ನಂತರ ಬರೆದಿದ್ದ “ಮುಗುಳ್ನಗೆ”ಯನ್ನು ಪ್ರಕಟಿಸುವುದೆಂದು ತೀರ್ಮಾನಿಸಿ, ಆ ಪುಸ್ತಕ ತುಮಕೂರಿನಲ್ಲಿ ಬಿಡುಗಡೆಯೂ ಆಯಿತು. ಈಗ ಮತ್ತೆ ಸಹಾಯಕ್ಕೆ ಬಂದವರು ಮತ್ತೆ ಗಣೇಶ್. ಅವರು ಪುಸ್ತಕದ ವಿನ್ಯಾಸ, ಮುದ್ರಣ ಮತ್ತು ವಿತರಣೆಯ ಜವಾಬ್ದಾರಿಯನ್ನು ತೆಗೆದುಕೊಂಡರು. ಎಂದಿನಂತೆ ಗೆಳೆಯ ಅಜಿತನ ಮುಖಪುಟ ವಿನ್ಯಾಸವಿತ್ತು. ಮೊದಲ ಬಾರಿಗೆ ನನ್ನ ಪುಸ್ತಕ ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಅದರಲ್ಲೂ ಸಪ್ನದಲ್ಲಿ ಸಿಗುವಂತಾಯಿತು. ಈ ಒಂದೊಂದು ಸಂತೋಷವೂ ಮರೆಯಲಾಗದ ಘಟನೆಗಳೆ. ಹ್ಞಾಂ.. ಈ ಪುಸ್ತಕದ ಬಗ್ಗೆ ಹಲವು ಮೆಚ್ಚುಗೆಗಳು ಬಂದವು. ಇದರಲ್ಲಿ ಬಹುಪ್ರಮುಖವಾದದು ವಿಶುವಿನದ್ದು. ಅವರು ನನ್ನ ಶೈಲಿಯನ್ನು ಮೆಚ್ಚಿದ್ದರು. ಅವರ ಯಾವಾಗಲೂ ನಿಮ್ಮದೇ ಶೈಲಿಯನ್ನು ಕಂಡುಕೊಳ್ಳಬೇಕೆಂದು ಹೇಳುತ್ತಿದ್ದರಿಂದ ನನಗೆ ಸಂತಸ ಇಮ್ಮಡಿಯಾಗಿತ್ತು.
ಕೆಲವು ತಿಂಗಳುಗಳು ಕಳೆದ ಮೇಲೆ, ನಮ್ಮ ಪ್ರಕಾಶನದಿಂದ ಇತರರ ಪುಸ್ತಕಗಳನ್ನು ಪ್ರಕಟಿಸಿ, ನಮ್ಮ ಪ್ರಕಾಶನವನ್ನು ಬೆಳೆಸಬೇಕೆಂದಿದ್ದ ನಮಗೆ ಪ್ರಕಾಶ್ ಹೆಗಡೆಯವರ “ಇದರ ಹೆಸರು ಇದಲ್ಲ”, ಡಾ.ಅಜಾದ್‌ರವರ “ಬಟಾಣಿ ಚಿಕ್ಕಿ” ಮತ್ತು ಉಮೇಶ್ ದೇಸಾಯಿಯವರ “ಕನವರಿಕೆಗಳು” ಪುಸ್ತಕಗಳನ್ನು ಪ್ರಕಟಿಸುವ ಸೌಭಾಗ್ಯ ಒದಗಿಬಂತು. ಈ ಸಂದರ್ಭದಲ್ಲೆ ನನ್ನ ಸ್ನೇಹ ಮಾಡಬೇಕಿಂಥವಳ ಪುಸ್ತಕವನ್ನು ಪ್ರಕಟಿಸುವುದೆಂದು ತೀರ್ಮಾನಿಸಿ ಮಣಿಕಾಂತ್ ಸರ್ ಅವರನ್ನು ಸಂಪರ್ಕಿಸಲಾಗಿ ಅವರು ಮುನ್ನುಡಿಯನ್ನೂ ಕೊಟ್ಟರು. ಅಲ್ಲಿಗೆ ಎಂದಿನಂತೆ ಗಣೇಶರ ಸಹಕಾರದಿಂದ ಪುಸ್ತಕಗಳನ್ನು ಪ್ರಕಟಿಸಿ, ಆಗಸ್ಟ್ ೨೫ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡುವುದೆಂದಾಯಿತು.
ಬೆಂಗಳೂರಿನ ಈ ಕಾರ್ಯಕ್ರಮಕ್ಕೆ ನನ್ನ ಪುಸ್ತಕ ಕುರಿತು ಯಾರು ಮಾತನಾಡುತ್ತಾರೆ ಎಂಬ ಗೆಳೆಯರ ಪ್ರಶ್ನೆಗೆ ಗಣೇಶ್ ಎಂದು ಹೇಳಿ ಗಣೇಶ್ ರವರಿಗೆ ಫೋನ್ ಮಾಡಿ ಪ್ರೀತಿಯಿಂದ ಅವರನ್ನು ಒಪ್ಪಿಸಿಯೇ ಬಿಟ್ಟೆ. ಮೊದಲು ನಾನು ಜೊತೆಗಿರುತ್ತೇನೆ ಎಂದ ಗಣೇಶ್, ನಂತರ ನನ್ನ ಪ್ರೀತಿಗೆ ಮಣಿದು ವೇದಿಕೆಗೆ ಬರಲು ಒಪ್ಪಿಕೊಂಡರು.
ಆಗಸ್ಟ್ ೨೫ರಂದು ಶ್ರೀ ಬಿ.ಆರ್. ಲಕ್ಷ್ಮಣರಾವ್, ಶ್ರೀ ಈರಣ್ಣ ಇಟಗಿ, ಶ್ರೀ ದಿವಾಕರ ಹೆಗಡೆ ಮುಂತಾದ ಘಟಾನುಘಟಿಗಳ ಸಮ್ಮುಖದಲ್ಲಿ ನನ್ನನ್ನು ಮೊದಲಬಾರಿಗೆ ಪ್ರೋತ್ಸಾಹಿಸಿದ ಗಣೇಶ್ ಕೋಡೋರುರ ಉಪಸ್ಥಿತಿಯಲ್ಲಿ ನಮ್ಮ ೪ ಪುಸ್ತಕಗಳು, ಜೊತೆಗೆ ಶ್ರೀ ಸೃಷ್ಟಿ ನಾಗೇಶರವರ ಪ್ರಕಾಶನದ “ಬ್ಲಾಗಿಸು ಕನ್ನಡ ಡಿಂಡಿಮ” ಎಂಬ ಪುಸ್ತಕ, ಒಟ್ಟು ೫ ಪುಸ್ತಕಗಳು ಲೋಕಾರ್ಪಣೆಗೊಂಡವು. ಗಣೇಶ್, ನನ್ನ ಪುಸ್ತಕದ ಜೊತಗೆ ನಮ್ಮ ಸ್ನೇಹ ಬೆಳೆದ ರೀತಿಯನ್ನು ನೆನೆಸಿಕೊಂಡರು. ಇದೆಲ್ಲಾ ನನ್ನನ್ನು ಮತ್ತಷ್ಟು ಭಾವುಕನನ್ನಾಗಿಸಿತು. ಜೊತೆಗೆ ಅಂದಿನ ನೋವಿನ ವಿಷಯವೇಂದರೆ ಇದನ್ನೆಲ್ಲಾ ನೋಡಲು ಗೆಳೆಯ ವಿಶು ಯಾವುದೋ ಕಾರ್ಯ ಕ್ರಮದ ಒತ್ತಡದಿಂದ ಬಂದಿರಲಿಲ್ಲ. ಬೆಂಗಳೂರಿನಲ್ಲಿ ನಿಮ್ಮ ಪುಸ್ತಕ ಬಿಡುಗಡೆಯಾಗುವ ಮಟ್ಟಕ್ಕೆ ನೀವು ಬೆಳೆಯಬೇಕು ಎಂದು ಹರಸಿದ್ದ ಗೆಳೆಯನ ಅನುಪಸ್ಥಿತಿ ಅಂದು ಕಾಡಿದರೂ, ನೆರೆದ ಗೆಳೆಯರ ಪ್ರೀತಿಗೆ ನಾನು ಮೂಕನಾಗಿದ್ದೆ.
(ಅಂದಹಾಗೆ ಅಕ್ಟೋಬರ್ ತಿಂಗಳ “ನಿಮ್ಮೆಲ್ಲರ ಮಾನಸ” ಮಾಸಪತ್ರಿಕೆಯ ನನ್ನ ನೆಚ್ಚಿನ ಅಂಕಣ “ಕಾಗದದ ದೋಣಿ”ಯಲ್ಲಿ ಗಣೇಶ್ ನಮ್ಮ ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ ಮತ್ತು ನಮ್ಮ ಸ್ನೇಹ ಕುರಿತು ಬರೆದಿದ್ದಾರೆ. ಅವರಿಗೆ, ಅವರ ಸ್ನೇಹಕ್ಕೆ ನಾನು ಆಭಾರಿ)
(ಮತ್ತೊಂದು ಖುಷಿಯ ಸಂಗತಿಯೆಂದರೆ, ಈ ಲೇಖನ ನಮ್ಮ “ಕಾಲೇಜ್ ಡೈರಿ” ಮಾಸಪತ್ರಿಕೆಯಲ್ಲಿ ಪ್ರಕಟವಾಗಿ ಇನ್ನೇನು ವಿಶುವಿಗೆ ತಲುಪಬೇಕು ಅನ್ನುವಷ್ಟರಲ್ಲಿ ವಿಶು, ಅವರ ಮದುವೆಯ ಲಗ್ನಪತ್ರಿಕೆ ಹಿಡಿದು ನಮ್ಮ ಮನೆಯಲ್ಲಿದ್ದರು)

shubhavagali sir
ಪ್ರತ್ಯುತ್ತರಅಳಿಸಿsir..good one nice to know about your urge to write..expecting many more
ಪ್ರತ್ಯುತ್ತರಅಳಿಸಿಒಳ್ಳೆಯ ಆಶಯದ ಬರಹ ಸಾರ್. ಒಳ್ಳೆಯದಾಗಲಿ, ಶುಭಾಶಯಗಳು.
ಪ್ರತ್ಯುತ್ತರಅಳಿಸಿಗುಬ್ಬಚ್ಚಿ ಸತೀಶ್ ಸರ್,
ಪ್ರತ್ಯುತ್ತರಅಳಿಸಿನಿಮ್ಮ ಕಾಲೇಜು ದಿನದಿಂದ ಇಲ್ಲಿಯವರೆಗಿನ ಅನುಭವದ ಲೇಖನ ಓದಿ ತುಂಬಾ ಖುಷಿಯಾಯ್ತು. ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ...
ಸರ್ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕಾಗಿ ವಂದನೆಗಳು...ಓದಿ ಸಖತ್ ಸಂತೋಷವಾಯ್ತು...ನಿಮ್ಮ ಬರವಣಿಗೆ ಸಾಗುತ್ತಿರಲಿ ..
ಪ್ರತ್ಯುತ್ತರಅಳಿಸಿಹಾಂ ಅಲ್ಲಿ ಒಂದು ಕಡೆ "ಭಾವುಕನನ್ನಾಗಿಸಿತು"(ಕೊನೆಯಿಂದ ಮೂರನೇಯ ಪ್ಯಾರಾ) ಎಂಬಲ್ಲಿ ಬೆರಳಚ್ಚು ದೋಷವಿದೆ ಎಂದೆನಿಸುತ್ತದೆ,ನೋಡಿ...
ಹೊಸ ಸ್ಪೂರ್ತಿಯನ್ನು ನೀಡಿದ್ದಕ್ಕಾಗಿ ವಂದನೆಗಳು..
ನಮಸ್ತೆ..
ನಿಮ್ಮ ಬರವಣಿಗೆಯ ಹಿನ್ನೋಟದ ಬರಹ ಚೆನ್ನಾಗಿದೆ...ಮು೦ದೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ.
ಪ್ರತ್ಯುತ್ತರಅಳಿಸಿಶುಭ ಹಾರೈಕೆಗಳು.