ನೆನಪಾಗುವುದು ನನಗೆ, ಬಹುಷಃ ನಿಮಗೂ
ನಮ್ಮ ಮಹಾತ್ಮ ಗಾಂಧಿ, ಇಲ್ಲವೇ ನೆಲ್ಸನ್ ಮಂಡೇಲಾ
ಆಕೆಯೇ ನೊಬೆಲ್ ಶಾಂತಿ ಪುರಸ್ಕೃತೆ
“ಬರ್ಮಾದ ಬೆಳಕು”
ಆಂಗ್ ಸಾನ್ ಸೂಕಿ
ವಿರೋಧಿಗಳ ಸಂಚಿಗೆ ಬಲಿಯಾದ
ರಾಷ್ಟ್ರನಾಯಕನ ಮಗಳೀಕೆ
ತಂದೆಯ ಪಡಿಯಚ್ಚು
ಅಪ್ಪನ ದೇಶಪ್ರೇಮದ ಜೊತೆಜೊತೆಗೆ
ಸ್ವಸಾಮರ್ಥ್ಯದ ಬುದ್ಧಿವಂತೆ
ಗೆಳೆಯರ, ಹಿತೈಷಿಗಳ ಅಕ್ಕರೆಯ “ಸೂ”
ಗೃಹವಿದ್ದರೂ ಬಂಧನ
ಅಮ್ಮ, ಗಂಡ, ಮಕ್ಕಳ ಅಗಲಿಕೆಗೆ,
ತನ್ನ ಹತ್ಯೆಯ ಪ್ರಯತ್ನಗಳಿಗೆ
ಧೃತಿಗೆಡದ ಕೃಶಾಂಗಿ
“ದೇಶ ನನಗಲ್ಲ, ನಾನು ದೇಶಕ್ಕಾಗಿ”
ಎಂದ ಸ್ವಾತಂತ್ರ್ಯದ ಸಂಕೇತ ಈ ದೇಶಭಕ್ತೆ
ಆ ಬುದ್ಧ, ಅದ್ಯಾವ ಘಳಿಗೆಯಲ್ಲಿ
ಇವಳ ಕಿವಿಯಲ್ಲಿ ಉಸಿರಿದನೋ
“ನೀನು ನಿನ್ನ ದೀಪವಾಗು” ಎಂದು
ಇವಳು ತಾನೇ ಉರಿದು
ಎಂದೆಂದಿಗೂ ಆರದ ದೀಪವಾದಳು
ಬರ್ಮಾದ ಬುದ್ಧನಾದಳು.
(ಆಂಗ್ ಸಾನ್ ಸೂಕಿಯವರ ನ್ಯಾಷನಲ್ ಲೀಗ್ ಫಾರ್ ಡೆಮಕ್ರಸಿ (ಎನ್ ಎಲ್ ಡಿ) ಪಕ್ಷ
ಬರ್ಮಾದ ಸಂಸತ್ತಿನಲ್ಲಿ ದಿಗ್ವಿಜಯ ಸಾಧಿಸಿದ ನೆನಪಿನಲ್ಲಿ ಸೂಕಿಯವರಿಗೆ ಅರ್ಪಣೆ)
- ಗುಬ್ಬಚ್ಚಿ ಸತೀಶ್.
satish sir,
ಪ್ರತ್ಯುತ್ತರಅಳಿಸಿLiked it.
Suu Kyi, gruaha bandhanadoLage iddaagaloo Burmese mele eshtondu prabhaava beeriddavaru. Nantara, ivara chatuvatikegaLu aadarsha, maargadarshana, vyaktitva....elladakkoo Hats off Sir.
Roopa Satish
ಸತೀಶ್ ಸರ್:
ಪ್ರತ್ಯುತ್ತರಅಳಿಸಿಆಂಗ್ ಸೂಕಿ ಬಗ್ಗೆ ನನಗೆ ಆಗಾಧ ಗೌರವವಿದೆ..ಆಕೆಯ ಬಗ್ಗೆ ಕವನ ತುಂಬಾ ಚೆನ್ನಾಗಿದೆ..