ಬುಧವಾರ, ಡಿಸೆಂಬರ್ 14, 2011

ನನ್ನ ಜೀವಕೆ ಜೀವವಾದ ನೀನು ಅಮರ.


ಬಾನು ಭುವಿಗೆ ಇಳಿಸಿದ ಮೊದಲ ಮಳೆಗೆ
ಭುವಿಯು ಕೊಟ್ಟ ಹಸಿರ ಉಡುಗೊರೆಯ ಕಳೆಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ಮೊನ್ನೆತಾನೆ ನಾಡ ಗೌರಿಗೆ ಕಾಡ ಕಡವೆಯ
ಒಲಿದ ಪ್ರೀತಿಯ ಅದ್ಭುತ ಉಡುಗೊರೆ “ಚುಕ್ಕಿ”ಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ಮರಕ್ಕೊಂದು ಹಕ್ಕಿ, ಹಕ್ಕಿಗೊಂದು ಮರ
ಎಲ್ಲ ಜೀವಕೂ ದೇವರು ನೀಡಿದ ವರ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ನನ್ನ ಜೀವಕೆ ಜೀವವಾದ ನೀನು ಅಮರ.

                           - ಗುಬ್ಬಚ್ಚಿ ಸತೀಶ್.

6 ಕಾಮೆಂಟ್‌ಗಳು:

  1. ಮರಕ್ಕೊಂದು ಹಕ್ಕಿ, ಹಕ್ಕಿಗೊಂದು ಮರ
    ಎಲ್ಲ ಜೀವಕೂ ದೇವರು ನೀಡಿದ ವರ.... eee salu thumba ista aythu

    ಪ್ರತ್ಯುತ್ತರಅಳಿಸಿ

ದಾವಣಗೆರೆಯಲ್ಲಿ ಸಿಟಿ ಬಸ್‌ ಹಿಡಿದು...

 ಸ್ನೇಹಿತರೇ, ನಮಸ್ಕಾರ. ನಾನು 2025ರ ಆಗಸ್ಟ್‌ ತಿಂಗಳಿನಿಂದ ದಾವಣಗೆರೆ ನಿವಾಸಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದು. 2020ರ ಆಗಸ್ಟ್‌ ತಿಂಗಳಿನಿಂದ ನಾನು ನನ್ನ ಪ್ರೀತಿ...