ಬ್ಲಾಗ್ ಆರ್ಕೈವ್

ಶುಕ್ರವಾರ, ಮಾರ್ಚ್ 23, 2012

ನಂದನ ಯುಗಾದಿ

ಬಂದಿದೆ ಯುಗಾದಿ
ನಂದದ ಯುಗಾದಿ
ಚಂದನ ಯುಗಾದಿ
ಸಂಭ್ರಮದ ಈ ನಂದನ ಯುಗಾದಿ

ಶತಮಾನಗಳ ಯುಗಾದಿ
ದಶಕದ ಪ್ರೀತಿಯ ಯುಗಾದಿ
ಕಳೆದೈದು ವಸಂತಗಳ ಯುಗಾದಿ
ನಲ್ಲನಲ್ಲೆಯರ ಬಂಧನದ ಯುಗಾದಿ

ಸರಸ-ವಿರಸದ ಯುಗಾದಿ
ಬೇವು-ಬೆಲ್ಲದ ಯುಗಾದಿ
ಹಾವು-ಏಣಿಯಾಟದ ಯುಗಾದಿ
ಗುಬ್ಬಚ್ಚಿಗಳ ಗೂಡಿನಲ್ಲೊಂದು ಚಿಲಿಪಿಲಿ ಯುಗಾದಿ

ಬಂದಿದೆ ಯುಗಾದಿ
ನಂದದ ಯುಗಾದಿ
ಚಂದನ ಯುಗಾದಿ
ಸಂಭ್ರಮದ ಈ ನಂದನ ಯುಗಾದಿ

                        - ಗುಬ್ಬಚ್ಚಿ ಸತೀಶ್.

2 ಕಾಮೆಂಟ್‌ಗಳು:

  1. ಕವನದ ಮೂಲಕ ಉಗಾದಿ ಹಬ್ಬದ ಶುಭಾಶಯ ಚೆನ್ನಾಗಿದೆ ಕವನ.
    ನಿಮಗೂ ಉಗಾದಿ ಹಬ್ಬದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ