ಅಣ್ಣಾ, ಇಂದು ನಿಮ್ಮ ಜನುಮದಿನ
ಈ ಪುಟ್ಟ ತಂಗಿಯ ಸಂಭ್ರಮದ ದಿನ
ಅಪ್ಪ ಅಮ್ಮನ ಪ್ರೀತಿಗೆ ಗರಿಯಿಟ್ಟ ದಿನ
ನಮ್ಮೆಲ್ಲರಿಗೂ ಇದುವೇ ಶುಭದಿನ !
ಕಣ್ಣ ಮುಂದೆಯೇ ಇದೇ
ಮೈಸೂರು ಕಾಣದ ದಸರಾ
ನಿಮ್ಮ ಬೆನ್ನ ಮೇಲೆ ನನ್ನ ಅಂಬಾರಿ
ಇಂದೂ ಕೂಡ ಹೊಳೆಯುತ್ತಿದೆ !
ಅಪ್ಪ ಬೈದಾಗ, ಅಮ್ಮ ಹೊಡೆದಾಗ
ನೀವು ಸಂತೈಸಿ ಹಣೆಗಿಟ್ಟ ಮುತ್ತು !
ಇವತ್ತಿಗೂ ಹಸಿಯಾಗಿಯೇ ಇದೇ
ನಾ ಜಾರಿಬಿದ್ದಾಗ, ಕಾಲೆಡವಿದಾಗ
ಕಣ್ಣೀರ ಸುರಿಸುತ್ತಾ, ನೀವು ಹಚ್ಚಿದ ಎಂಜಲು !
ದಿನದಿನವೂ ಸಿಹಿ ಹೆಚ್ಚುತ್ತಲೇ ಇದೇ
ಕದ್ದು ನಾವಿಬ್ಬರೇ ಮೇಯ್ದ ಕೊಬ್ಬರಿ ಬೆಲ್ಲ
ನೀವು ಗೋಳಾಡಿಸಿ ಕೊಟ್ಟ ಚಾಕ್ ಲೇಟ್!
ಪ್ರತಿ ಹೆಜ್ಜೆಯಲ್ಲೂ ಬೆಳಕಾಗಿಯೇ ಇದೆ
ಕತ್ತಲಲ್ಲಿ ನಾ ತಪ್ಪೆಜ್ಜೆಯಿಟ್ಟಾಗ
ನೀವು ಹಚ್ಚಿಟ್ಟ ದೀಪ!
ಅಣ್ಣಾ, ಇಂದು ನಿಮ್ಮ ಜನುಮದಿನ
ಅದೇಕೋ ಕಾಣೇ ಆನಂದ ಬಾಷ್ಪ
ನೀವು ಪ್ರೀತಿಯಿಂದ ಒರೆಸಲೆಂದಿರಬೇಕು!
ಆರೋಗ್ಯ, ಐಶ್ವರ್ಯದಿಂದ ನೀವು
ನೂರಾರು ವರುಷ ಹರುಷದಿಂದ ಬಾಳಬೇಕು.
ನಿಮ್ಮ ಮುದ್ದಿನ
ಪೆದ್ದು ಪೆದ್ದಾದ
ತಂಗಿ
ಅಣ್ಣ ತಂಗಿಯ ಪ್ರೀತಿ ಬಹಳ ದೊಡ್ಡದು
ಪ್ರತ್ಯುತ್ತರಅಳಿಸಿಸುಂದರ ಕವಿತೆ
ತಂಗಿಯ ಮನದಾಳ ಸುಂದರವಾಗಿ ವ್ಯಕ್ತವಾಗಿದೆ
ಗುರು ಸರ್!
ಪ್ರತ್ಯುತ್ತರಅಳಿಸಿರಕ್ಷಾಬಂಧನದ ಶುಭಾಶಯಗಳು. ನನಗೆ ಸ್ವಂತ ಅಕ್ಕ, ತಂಗಿಯರಿಲ್ಲ. ದೇವರು ಕೊಟ್ಟವರು ಇದ್ದಾರೆ. ಅದೇ ಸಂತೋಷ.
Nice !
ಪ್ರತ್ಯುತ್ತರಅಳಿಸಿThank U Sir.
ಪ್ರತ್ಯುತ್ತರಅಳಿಸಿಸುಮಧುರ ಭಾವದ ಸು೦ದರ ಕವನ...ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿsavi savi nenapu.... nimmannu bheTi aagiddu khushi kodtu.....
ಪ್ರತ್ಯುತ್ತರಅಳಿಸಿchennaagide kavana...
ಚೆನ್ನಾಗಿದೆ ಗುಬ್ಬಚ್ಚಿ.
ಪ್ರತ್ಯುತ್ತರಅಳಿಸಿ