ಬ್ಲಾಗ್ ಆರ್ಕೈವ್

ಶುಕ್ರವಾರ, ಅಕ್ಟೋಬರ್ 8, 2010

ಸಿಡಿಲಿನ ಹಂಗು

ಅರ್ಧರಾತ್ರಿಯಲ್ಲಿ ಸಿಡಿಲಂತೆ?

ಹೆಂಡತಿ ಬೆಚ್ಚಿ ಬೆದರಿ

ಅವನ ತೆಕ್ಕೆಗೆ ಬಿದ್ದು

ಅರ್ಧಗಂಟೆ ಬಿಡಲಿಲ್ಲವಂತೆ!ಗೆಳೆಯನೊಬ್ಬ ಹೇಳಿದಾಗ

ಹೊಟ್ಟೆ ಉರಿಯಿತು.

ಅಯ್ಯೋ...! ನನಗೂ ನನ್ನ

ನಲ್ಲೆಗೂ ಎಚ್ಚರವೇ ಆಗಲಿಲ್ಲ!ಬಂದವನೇ ನನ್ನವಳಿಗೆ ಹೇಳಿದೆ

ಬಿದ್ದು ಬಿದ್ದು ನಕ್ಕಳು.

ಏನು ದೊಡ್ಡ ರೋಮಾನ್ಸ...?

ನಮಗೆ ಎಚ್ಚರವೇ ಆಗಲಿಲ್ಲವೆಂದಳು!ತುಸು ಯೋಚಿಸಿ ನಸುನಕ್ಕಿ ನಾನಂದೆ

ಆಗಷ್ಟೆ ರಮಿಸಿ, ಪರಸ್ಪರ

ತೆಕ್ಕೆಯಲ್ಲಿ ವಿರಮಿಸುತ್ತಿದ್ದ

ನಮಗೇಕೆ ಸಿಡಿಲಿನ ಹಂಗು?

- ಗುಬ್ಬಚ್ಚಿ ಸತೀಶ್.

5 ಕಾಮೆಂಟ್‌ಗಳು: