ಶುಕ್ರವಾರ, ಅಕ್ಟೋಬರ್ 1, 2010

ಕನ್ನಡ ಪುಸ್ತಕಗಳನ್ನು ಓದುವ ಮೊದಲು ಶ್ರೀಮಂತನಾಗೋಣ!

ರಾವಣನ ಹೆಂಡತಿ ಮಂಡೋದರಿ!

ಕನ್ನಡ ಪುಸ್ತಕಗಳನ್ನು ಕೊಂಡೋದಿರಿ!!

-ಎಚ್. ಡುಂಡೀರಾಜ್.

ಪುಸ್ತಕಗಳನ್ನು ಓದುವ ಹವ್ಯಾಸವುಳ್ಳ ನಾನು, ಆದಷ್ಟು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸವಿರಿಸಿಕೊಂಡಿದ್ದೇನೆ. ಸಿಗರೇಟು, ಟೀ ಕೇಳಿದರೆ ಕೊಡಿಸುವ ಗೆಳೆಯರು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತಾರೆ. ಆದರೆ, ಓದುವ ಹವ್ಯಾಸವಿರುವ ಗೆಳೆಯರು ಸಿಗುವುದು ಅದೃಷ್ಟದ ವಿಷಯ. ಲೈಬ್ರರಿಯಲ್ಲಿ ಓದಲಾಗದ ಪುಸ್ತಕಗಳೇ ಹೆಚ್ಚು ಸಿಗುತ್ತವೆ. ಅಂದಮೇಲೆ ನಮಗೆ ಬೇಕಾದ ಪುಸ್ತಕಗಳನ್ನು ಕೊಂಡೇ ಓದಬೇಕು.

ಒಂದು ಪುಸ್ತಕದ ಬಿಡುಗಡೆಯ ವಿಷಯ ಇದೀಗ ಮುಂಚೆಯೇ ದಿನಪತ್ರಿಕೆಗಳಿಂದಲೋ, ಇಂಟರ್ನೆಟ್ಟಿನಿಂದಲೋ ತಿಳಿದಿರುತ್ತದೆ. ಖ್ಯಾತನಾಮರ ಪುಸ್ತಕಗಳಾದರೋ ಬಿಡುಗಡೆಗೂ ಮುನ್ನ ಒಂದು ಸುತ್ತು ವಿಮರ್ಶೆಯಾಗಿರುತ್ತದೆ. ಪುಸ್ತಕ ಬಿಡುಗಡೆಯ ಸ್ಥಳದಲ್ಲಿ ಹಾಜರಿದ್ದರೆ ತಿಂಡಿಯ ಜೊತೆ ಪುಸ್ತಕಕ್ಕೆ ರಿಯಾಯಿತಿಯೂ ಸಿಗುತ್ತದೆ. ಒಟ್ಟಿನಲ್ಲಿ ಪುಸ್ತಕ ಬಿಡುಗಡೆಗೂ ಮುನ್ನ ಸ್ವಲ್ಪ ಶಬ್ಧ ಮತ್ತು ನಂತರವೂ ಸ್ವಲ್ಪ ಶಬ್ಧ ಮಾಡುತ್ತದೆ.

ಇದೆಲ್ಲಾ ಸರಿಯಷ್ಟೆ. ಆದರೆ, ಪುಸ್ತಕ ಕೊಂಡು ಕೊಳ್ಳಲು ಹಣ ಬೇಕು. ಹಣವೆಲ್ಲಿಂದ ತರುವುದು? ಓದುವುದು ನಮ್ಮ ವೈಯಕ್ತಿಕ ಹವ್ಯಾಸವಾದ್ದರಿಂದ ಅದಕ್ಕೆ ನಮ್ಮ ಬಜೆಟ್ ನಲ್ಲಿ ಹಣ ಎತ್ತಿಡಬೇಕು. ಸರಿ ಎತ್ತಿಟ್ಟಿದಾಯಿತು. ಈಗ ಹೇಳಿ ಯಾವ ಕನ್ನಡ ಪುಸ್ತಕಗಳನ್ನು ಕೊಳ್ಳೋಣ?

ಒಂದು ರೂಪಾಯಿಗೆ ವಿಮಾನದ ಟಿಕೆಟ್ ಕೊಟ್ಟ ಕ್ಯಾಪ್ಟನ್ ಗೋಪಿನಾಥ್ ರವರ ಆತ್ಮಕಥನ “ಬಾನಯಾನ” ದ ಬೆಲೆ ರೂ ೪೨೫. ಕುಂ.ವೀ.ಯವರ ಗಾಂಧಿಕ್ಲಾಸು ರೂ ೨೨೫. ಅತ್ಯಧಿಕ ಮಾರಾಟ ಕಂಡ ಎಸ್.ಎಲ್.ಭೈರಪ್ಪನವರ ಹಾರ್ಡ್ ಬೈಂಡ್ ಕೃತಿ “ಕವಲು” ರೂ ೨೫೦. ಪೇಪರ್ ಬ್ಯಾಕ್ ನಲ್ಲಿ ಕೊಟ್ಟಿದ್ದರೆ ನನಗೆ ಓದಲಿಕ್ಕಾಗುತ್ತಿರಲಿಲ್ಲವೇನೋ? ಪ್ರೋ. ಬಾಲು ಎಂದೇ ಪರಿಚಿತರಾದ ಎಸ್.ಎಲ್.ಬಾಲಗಂಗಾಧರರವರ ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ ರೂ ೪೧೫. ತೇಜಸ್ವಿಯವರ ಮಾಯಾಲೋಕ ರೂ ೧೯೮...ಇತ್ಯಾದಿ.

ಪುಸ್ತಕಗಳ ಬೆಲೆಗಳನ್ನು ನೋಡುತ್ತಿದ್ದರೆ ಏದುಸಿರು ಬರುತ್ತಿರುವಾಗ ಯಾವ ಪುಸ್ತಕವನ್ನು ಕೊಂಡು ಓದುವುದು ಎಂದು ಯೋಚಿಸುತ್ತಿರುವಾಗ ನನಗೆ ಹೊಳೆದದ್ದು ಒಂದೇ ಐಡಿಯಾ! ಮೊದಲು ಶ್ರೀಮಂತನಾಗೋಣ, ನಂತರ ಓದುವ ಹವ್ಯಾಸ ಮುಂದುವರೆಸೋಣ. ನಿವೇನಂತಿರೋ...!?

- ಗುಬ್ಬಚ್ಚಿ ಸತೀಶ್.

8 ಕಾಮೆಂಟ್‌ಗಳು:

  1. ಸತೀಶ್,

    ನೀವು ಅಷ್ಟು ತಲೆಕೆಡಿಸಿಕೊಳ್ಳುವ ಅವಕಾಶವಿಲ್ಲ. ನನ್ನ ಪುಸ್ತಕ ತುಂಬಾ ಕಡಿಮೆ ಐವತ್ತಕ್ಕೆ ಸಿಗುತ್ತದೆ...ಅಹ.ಅಹ್.ಅಹ...ತಮಾಷೆಗೆ ಹೇಳಿದೆ. ನೀವು ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದು ನನ್ನ ಪುಸ್ತಕವನ್ನು ಕೊಂಡುಕೊಂಡಿದ್ದೀರಿ..
    ನಿಜ ಈಗ ವಿಷಯಕ್ಕೆ ಬರೋಣ. ನೀವು ಹೇಳಿದಂತೆ ಫೇಮಸ್ ಆಗಿರುವವರ ಪುಸ್ತಕಗಳೆಲ್ಲಾ ಬೆಲೆ ಹೆಚ್ಚಾಗಿರುತ್ತದೆ. ಅದಕ್ಕೆ ಮೊದಲು ನಾವು ಖಂಡಿತ ಶ್ರೀಮಂತರಾಗಬೇಕು...ಆದ್ರೆ ಹೇಗೆ?

    ಪ್ರತ್ಯುತ್ತರಅಳಿಸಿ
  2. , ಅಗ್ಗದ ಮಾಲು ಮುಗ್ಗಿದ್ದು ಎನ್ನುವುದು ಗಾದೆ ! ಆದರೆ ಸೇವಾ ಮನೋಭಾವದಿಂದ ಗೋರಖ್ಪುರ ಪ್ರೆಸ್ ಮಾಡುವ ಕೆಲಸ ಇದಕ್ಕೆ ವಿರುದ್ಧ! ಇಲ್ಲಿ ನೀವು ಹೇಳಿದಂತೆ ಕೊಳ್ಳುವ ಮನಸ್ಸು ಬೇಕು, ಮಾಲಲ್ಲಿ ಸಾಕಷ್ಟು ಖರ್ಚು, ಹೋಟೆಲಲ್ಲಿ ಖರ್ಚು ಎಲ್ಲಾ ಖರ್ಚು ಮಾಡುತ್ತೇವೆ, ಇಲ್ಲೂ ಸ್ವಲ್ಪ ಹಣಸೇರಿಸಿ ಒಂದೊಂದನ್ನೇ ಕೊಳ್ಳಿ, ಏಕಕಾಲಕ್ಕೆ ಅನೇಕ ಬೇಡ ! ಆದರೆ ನಿಮ್ಮ ಆ ಮಾತು-ಶ್ರೀಮಂತನಾದಮೇಲೆ ಕೊಳ್ಳುತ್ತೇನೆ ಎನ್ನುವುದು ಸರಿಕಾಣಲಿಲ್ಲ ! ಜ್ಞಾನ ಸುಮ್ಮನೇ ಬರುವುದೇ ? 'ಬಾನಯಾನ' ಮುದುಡಿದ ಮನಸ್ಸನ್ನು ಅರಳಿಸುತ್ತದೆ -ಅದರಲ್ಲಿ ಸಾಹಸಕ್ಕೆ ಮನಸ್ಸು ತಯಾರಾಗುವಂತಹ ಕಥೆಗಳಿವೆ, ಹೀಗೆ ಹಲವು ಪುಸ್ತಕಗಳು ! ನಿಮ್ಮ ಬರಹ ಓಕೆ ಆದರೆ ಆ ಪುಸ್ತಕಗಳನ್ನು ಅಗ್ಗಕ್ಕೆ ಮಾಡುವುದು ಸುಲಭ ಅಂತ ನನಗನಿಸಲಿಲ್ಲ, ದಯವಿಟ್ಟು ಬೇಸರಿಸಬೇಡಿ, ಆದಾಗ ಒಂದೊಂದೇ ಕೊಳ್ಳಿ !

    ಪ್ರತ್ಯುತ್ತರಅಳಿಸಿ
  3. ಶತೀಶ್..ಮೊದಲಿಗೆ ಜಲನಯನ ಮತ್ತು ಗುಬ್ಬಿ ಎಂಜಲು ಕಾರ್ಯಕ್ರಮಕ್ಕೆ ಬಂದು ನಮ್ಮನ್ನು ಹರಸಿದ್ದಕ್ಕೆ ಧನ್ಯವಾದ...ಕೊಡದ್ದಕ್ಕೆ ಡಬಲ್...ಹಾಗಾಗಿ ನೀವು ಈಗ ಶ್ರೀಮಂತರಾಗಿದ್ದಿರಿ ಎಂದರ್ಥ...ಹಹಹಹ್ ಚನ್ನಾಗಿದೆ...

    ಪ್ರತ್ಯುತ್ತರಅಳಿಸಿ
  4. ಸತೀಶ್ ಸರ್
    ನಿಜ. ಶ್ರೀಮಂತಿಕೆಯೇ ಬೆನ್ನತ್ತಿದರೆ ನೀವು ಹಿಂದಿರುಗಿ ಬರುವುದು ಕಾಣೆ

    ಆಮೇಲೆ ಓದುವುದು ಬಿಟ್ಟು ಓಡುವುದೇ ಕೆಲ್ಸವಾಗಿಬಿದುತ್ತದೆ :)

    ಪ್ರತ್ಯುತ್ತರಅಳಿಸಿ
  5. satish sir...
    nimma maatu oppuvantadde.. adare nanna ase pustaka oduttane srimanta hagona annodu......

    namma kannada pustaka kolloru jaasti andre 3 rinda 5 savira mandi.. namma aneka barahagaararu tamma jivanavanne barahakke mudupittiruttare avarige ondu 100 jaasti kodre yen tondadre heli..... avaru tamma barahadinda namma manasannu srimanta ragisodillavee.. ?...

    ಪ್ರತ್ಯುತ್ತರಅಳಿಸಿ
  6. ಓದುವದೇ ಶ್ರೀಮಂತಿಕೆ.
    ಗ್ರಂಥಾಲಯದಲ್ಲಿ ಒಳ್ಳೆ ಪುಸ್ತಕಗಳನ್ನೂ ಕೊಂಡೊಯ್ಯುವವರು ಹಿಂತುರಿಗಿಸುವದಿಲ್ಲ.ಹಾಗಾಗಿ ಅಲ್ಲಿ ಓದದ ಪುಸ್ತಕಗಳೇ ಇರುತ್ತವೆ.
    ಪುಸ್ತಕಕ್ಕಾಗಿ ಹಣ ಖರ್ಚು ಮಾಡುವದು ತಪ್ಪಿಲ್ಲ. ಆದಷ್ಟು ಅವಾಗಾವಾಗ ಕೊಳ್ಳಿ.
    ಗ್ರಂಥಾಲಯಕ್ಕೆ ಪ್ರಾಮಾಣಿಕವಾಗಿ ಓದಿ ಪುಸ್ತಕ ಹಿಂತುರಿಗಿಸುವ ಅಭ್ಯಾಸ ಮೊದಲು ಬರಬೇಕು.

    ಪ್ರತ್ಯುತ್ತರಅಳಿಸಿ
  7. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯೋಸ್ಮಿ!

    ಪ್ರತ್ಯುತ್ತರಅಳಿಸಿ

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...