ಸ್ನೇಹಿತರೇ, ನಮಸ್ಕಾರ.
ಖ್ಯಾತ ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು - ಹಣ, ಸಂಪತ್ತು ಮತ್ತು ಯಶಸ್ಸಿನ ಹಿಂದಿನ ಸರಳ ಅಭ್ಯಾಸಗಳು ಮತ್ತು ಚಿಂತನೆಗಳು" ಎಂಬ ಹೊಸ ಪುಸ್ತಕ ಬಂದಿದೆ. ಈ ಪುಸ್ತಕದ 25 ಅಧ್ಯಾಯಗಳಲ್ಲಿ ಲಕ್ಷಾಧಿಪತಿಯ 25 ಗುಣಲಕ್ಷಣಗಳನ್ನು ಲೇಖಕರು ಓದುಗರಿಗೆ ತಿಳಿಸಿದ್ದಾರೆ. ಇಲ್ಲಿ ಲಕ್ಷಾಧಿಪತಿ ಎಂಬುದನ್ನು ಸಿರಿವಂತ ಎಂಬ ಅರ್ಥದಲ್ಲಿ ಬಳಸಲಾಗಿದೆ. ನೀವು ಸಿರಿವಂತರಲ್ಲದಿದ್ದರೆ ಈ ಪುಸ್ತಕ ನೀವು ಸಿರಿವಂತರಾಗಲು ಅಳವಡಿಸಿಕೊಳ್ಳಬಹುದಾದ ಕೆಲವು ಗುಣಲಕ್ಷಣಗಳ ಮೇಲೆ ಬೆಳಕು ಚೆಲ್ಲಲಿದೆ. ನಿಮ್ಮ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಂಡರೆ ನೀವೂ ಕೂಡ ಲಕ್ಷಾಧಿಪತಿಯಾಗುವ ಕಾಲ ದೂರವಿಲ್ಲ. ಅಥವಾ ನೀವಿಗಾಗಲೇ ಸಿರಿವಂತರಾಗಿದ್ದರೆ ಮತ್ತಷ್ಟು ಸಿರಿವಂತರಾಗಲು ಈ ಪುಸ್ತಕ ನೆರವಾಗಲಿದೆ.
ತಮ್ಮ ಎಂದಿನ ಶೈಲಿಯಲ್ಲಿಯೇ ರಂಗಸ್ವಾಮಿ ಮೂಕನಹಳ್ಳಿಯವರು ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಳ್ಳುತ್ತಲೇ ಅವುಗಳಿಗೆ ತಮ್ಮ ಅನುಭವದ ಆಧಾರದ ಮೇಲೆ ಉತ್ತರಗಳನ್ನು ನೀಡುತ್ತಾ ಹೋಗುತ್ತಾರೆ. ಅಸಾಮಾನ್ಯರು ಎನ್ನಿಸಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೆ! ಹೌದಲ್ವಾ? ನೀವೇ ಯೋಚಿಸಿ ನೋಡಿ. ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತಾ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಎಂದು ಹೇಳುತ್ತಾರೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೆ? ಎನ್ನುವ ಸಹಜ ಪ್ರಶ್ನೆಗಳನ್ನಿಟ್ಟುಕೊಂಡು ಓದುಗರಿಗೆ ಮನದಟ್ಟಾಗುವಂತೆ, ಅವರು ಲಕ್ಷಾಧಿಪತಿಗಳಾಗಲು ಪ್ರೇರೆಪಿಸುವಂತೆ ಪುಸ್ತಕವನ್ನು ರಚಿಸಿದ್ದಾರೆ. ಜಗತ್ತಿನ ಮುಕ್ಕಾಲು ಪಾಲು ಶ್ರೀಮಂತರು ಸೆಲ್ಫ್ ಮೇಡ್ ಎನ್ನುವ ಒಂದೇ ಸಾಲು ಸಾಕು ಓದುಗನು ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸಲು.
ಪುಸ್ತಕದಲ್ಲಿ ಹಲವು ಅಚ್ಚರಿಯ ವಿಷಯಗಳೂ ಇವೆ. ಲೇಖಕರ ಅನುಭವಗಳು, ಇತರ ಸಿರಿವಂತರ ಗುಣಲಕ್ಷಣಗಳ ಉದಾಹರಣೆಗಳು ಇವೆ. ನಮ್ಮ ಕ್ಷಮತೆ ಹೆಚ್ಚಿಸಿಕೊಂಡು, ನಿರಂತರ ಕಲಿಕೆಯ ಮೂಲಕ ಈ ಪುಸ್ತಕದಲ್ಲಿನ ಗುಣಗಳನ್ನು ಅಳವಡಿಸಿಕೊಂಡು ಸಿರಿವಂತರಾಗುವುದು ಪುಸ್ತಕದ ಆಶಯವಾಗಿದೆ.
ಈಗಾಗಲೇ ಹಲವಾರು ಪುಸ್ತಕಗಳ ಮೂಲಕ ಓದುಗರಿಗೆ ನೆರವಾಗಿರುವ ರಂಗಸ್ವಾಮಿಯವರ ಈ ಪುಸ್ತಕವನ್ನು ಕೂಡ ಧಾರಾಳವಾಗಿ ಕೊಂಡು ಓದುವ ಮೂಲಕ, ಕಲಿಯುವ ಮೂಲಕ ನಿಮ್ಮ ಸಿರಿವಂತರಾಗುವ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಬೆಂಗಳೂರಿನ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಮೌಲ್ಯ ರೂ. 225/- ಆಗಿದ್ದು ಅಮೇಜಾನಿನಲ್ಲಿ ಸುಲಭವಾಗಿ ಕೆಳಗಿನ ಲಿಂಕ್ ಮೂಲಕ ಕೊಳ್ಳಬಹುದಾಗಿದೆ.
ಪುಸ್ತಕ ಕೊಳ್ಳಲು ಲಿಂಕ್... https://amzn.to/4iFvFST
ನಿಮ್ಮ ಸಿರಿವಂತಿಕೆಯ ಕನಸು ಆದಷ್ಟು ಬೇಗ ನನಸಾಗಲಿ ಎಂದು ಹಾರೈಸುವೆ.
ನೀವೀಗಾಗಲೇ ರಂಗಸ್ವಾಮಿ ಮೂಕನಹಳ್ಳಿಯವರ ಇತರ ಪುಸ್ತಕಗಳನ್ನು ಓದಿದ್ದರೆ, ಯಾವು ಪುಸ್ತಕ/ಗಳು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ. ಈ ಸಂಬಂಧವಾಗಿ ಓದಬಹುದಾದ ಯಾವುದೇ ಪುಸ್ತಕಗಳಿದ್ದರೆ ಅವುಗಳನ್ನು ಕೂಡ ತಿಳಿಸಿ ಎಂದು ಕೋರುತ್ತೇನೆ.
ಸ್ನೇಹದಿಂದ,
- ಗುಬ್ಬಚ್ಚಿ ಸತೀಶ್.
ನನ್ನ ಯೂಟ್ಯೂಬ್ ಚಾನೆಲ್: https://www.youtube.com/@sathishgbb