ಸ್ನೇಹಿತರೇ, ನಮಸ್ಕಾರ.
ಹೇಗಿದ್ದೀರಿ? ಎಲ್ಲಾ ಕುಶಲ ಎಂದು ಭಾವಿಸಿ ಈ ಪೋಸ್ಟ್ ಬರೆಯುತ್ತಿದ್ದೇನೆ...
ನನ್ನ ಕೆಲವು ಸ್ನೇಹಿತರು ಆಗಾಗ ಆನ್ ಲೈನಿನಲ್ಲಿ ಹಣ ಗಳಿಸುವುದರ ಬಗ್ಗೆ ಚರ್ಚಿಸುತ್ತಿರುತ್ತಾರೆ. ಈಗಾಗಲೇ ನಾವು ಯೂಟ್ಯೂಬಿನಲ್ಲಿ, ಫೇಸ್ ಬುಕ್ಕಿನಲ್ಲಿ, ಬ್ಲಾಗ್ ಬರೆಯುವ ಮೂಲಕ, ರೀಲ್ಸ್ ಮಾಡುವ ಮೂಲಕ ಅನೇಕರು ಹಣ ಗಳಿಸುತ್ತಿರುವುದನ್ನು ನೋಡಿದ್ದೇವೆ. ಸಿನಿಮಾ ನಟರಿಗಿಂತ ಖ್ಯಾತರಾದ, ಹಣ ಮತ್ತು ಹೆಸರು ಎರಡನ್ನು ಗಳಿಸಿದವರನ್ನು ನೋಡಿದ್ದೇವೆ. ಆದರೂ, ಇದೆಲ್ಲಾ ನಿಜವೇ ಎಂಬುದನ್ನು ಕೂಡ ಕೇಳುವವರು ನಮ್ಮ ನಡುವೆಯೇ ಇದ್ದಾರೆ. ಹಾಗೂ, ಯಾವ ರೀತಿ ಗಳಿಸಬಹುದು ಎಂದು ಕೇಳುವವರು ಕೂಡ ಇದ್ದಾರೆ. ಅಂತಹವರಿಗಾಗಿ ಅಂತಲೇ ಈ ಪ್ರಾಥಮಿಕ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆನ್ ಲೈನಿನಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಹಣ ಗಳಿಸಬಹುದಾದ ಕೆಲವು ನನಗೆ ಗೊತ್ತಿರುವ ಸಂಗತಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಮೊದಲಿಗೆ, ನೀವು ಬರಹಗಾರರಾಗಿದ್ದರೆ ಒಂದು ಬ್ಲಾಗನ್ನು ಶುರು ಮಾಡಿಕೊಳ್ಳಿ. ಬ್ಲಾಗರ್.ಕಾಮ್ (blogger.com) ಗೂಗಲ್ಲಿನವರದ್ದಾಗಿದ್ದು ನೀವು ಉಚಿತವಾಗಿ ಇಲ್ಲಿ ಬ್ಲಾಗನ್ನು ಶುರು ಮಾಡಬಹುದು. ನಿಯಮಿತವಾಗಿ ಬ್ಲಾಗ್ ಮಾಡುತ್ತಾ ನಿಮ್ಮ ಬ್ಲಾಗಿನ ವೀಕ್ಷಣೆಯು ಹೆಚ್ಚಾದಾಗ ಗೂಗಲ್ ಆಡ್ ಸೆನ್ಸ್‌ಗೆ ಅಪ್ಲೈ ಮಾಡಬಹುದು. ನಿಮಗೆ ಅಪ್ರೂವಲ್ ಸಿಕ್ಕರೆ ನಿಮ್ಮ ಬ್ಲಾಗಿನ ಪೋಸ್ಟುಗಳಿಗೆ ಗೂಗಲ್‌ನವರೇ ಜಾಹೀರಾತು ಹಾಕುತ್ತಾರೆ. ಈ ಜಾಹೀರಾತುಗಳಿಗೆ ಅವರು ತೆಗೆದುಕೊಳ್ಳುವ ಹಣದಲ್ಲಿ ನಿಮಗೂ ಪಾಲನ್ನು ಕೊಡುತ್ತಾರೆ. ನಿಯಮಿತವಾಗಿ ನಿಮಗೆ ಆಸಕ್ತಿದಾಯಕ ವಿಷಯದಲ್ಲಿ ಬ್ಲಾಗ್ ಪೋಸ್ಟುಗಳನ್ನು ಬರೆಯುತ್ತಾ ಇದ್ದರೆ ನಿಮ್ಮ ಬ್ಲಾಗಿಗೆ ಹೆಚ್ಚು ವೀಕ್ಷಣೆಗಳು ಬಂದಷ್ಟು ಹಣ ಗಳಿಕೆಯೂ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ವರ್ಡ್ ಪ್ರೆಸ್ (wordpress.com) ನಲ್ಲಿಯೂ ಕೂಡ ನೀವು ಬ್ಲಾಗ್ ಶುರು ಮಾಡಬಹುದು. ಇನ್ನಿತರ ಪ್ಲಾಟ್ ಫಾರ್ಮ್ ಗಳು ಕೂಡ ಇವೆ...
My Blog: https://nallanalle.blogspot.com/
ಎರಡನೆಯದಾಗಿ, ನಿಮಗೆ ಬರೆಯಲು ಆಸಕ್ತಿ ಇಲ್ಲದಿದ್ದರೆ ನಿಮ್ಮ ಕಲೆಯನ್ನು ಅಥವಾ ಆಸಕ್ತಿಯನ್ನು ವಿಡಿಯೋ ಮಾಡಬಹುದು. ಆ ವಿಡಿಯೋವನ್ನು ನಿಮ್ಮದೊಂದು ಯೂಟ್ಯೂಬ್ ಚಾನೆಲ್ ಶುರು ಮಾಡಿ ಅಲ್ಲಿ ಅಪ್ಲೋಡ್ ಮಾಡಬಹುದು. ಈಗಿರುವ ನಿಯಮದ ಪ್ರಕಾರ 1000 ಚಂದಾದಾರರು ಮತ್ತು 4000 ಗಂಟೆಗಳ ವೀಕ್ಷಣೆ ನಿಮ್ಮ ಚಾನೆಲ್ ಪಡೆದುಕೊಂಡರೆ, ಇಲ್ಲಿ ನೀವು ಗೂಗಲ್ ಆಡ್ ಸೆನ್ಸ್ ಗೆ ಅಪ್ಲೈ ಮಾಡಬಹುದು. ಅಪ್ರೂವಲ್ ಸಿಕ್ಕರೆ ಬ್ಲಾಗ್ ರೀತಿಯೇ ಇಲ್ಲೂ ಕೂಡ ಜಾಹೀರಾತುಗಳು ಬರಲು ಶುರುವಾಗಿ ಗೂಗಲ್ ಪಡೆವ ಹಣದಲ್ಲಿ ನಿಮಗೂ ಪಾಲು ಸಿಗುತ್ತದೆ. ಹೆಚ್ಚು ವಿಡಿಯೋಗಳು, ಹೆಚ್ಚು ವೀಕ್ಷಣೆಗಳು ಇದ್ದಷ್ಟೂ ಹಣ ಹೆಚ್ಚು ಗಳಿಸುವ ಸದಾವಕಾಶ ಇದೆ.
My Youtube Channel: https://www.youtube.com/@sathishgbb
ಮೂರನೇಯದಾಗಿ, ಫೇಸ್ ಬುಕ್. ಊರಿಗೆ ಬಂದವರು ನೀರಿಗೆ ಬರದೇ ಇರ್ತಾರ ಎಂಬ ಗಾದೆಯಂತೆ ಸ್ಮಾರ್ಟ್ ಫೋನ್ ಇದ್ದವರ ಬಳಿ ಫೇಸ್ ಬುಕ್ ಅಕೌಂಟ್ ಇರದೇ ಇರುತ್ತಾ!? ನಿಮ್ಮ ಫೇಸ್ ಬುಕ್ ಅಕೌಂಟನ್ನು ಪ್ರೊಫೆಷನಲ್ ಮೋಡಿಗೆ ಬದಲಾಯಿಸಿ ಇಲ್ಲಿ ಹಣ ಗಳಿಸುವ ಸಾಧ್ಯತೆಗಳನ್ನು ಪಡೆದುಕೊಳ್ಳಬಹುದು. ಅಥವಾ ನಿಮ್ಮದೇ ಒಂದು ಫೇಸ್ಬುಕ್ ಪೇಜನ್ನು ಕೂಡ ಮಾಡಿಕೊಳ್ಳಬಹುದು. ಕಾಲಕ್ಕೆ ತಕ್ಕಂತೆ ಇಲ್ಲಿ ಹಣ ಗಳಿಸುವ ವಿಧಾನಗಳು ಬದಲಾಗುತ್ತಿದ್ದು ನಿಯಮಿತವಾಗಿ ಅವುಗಳ ಮೇಲೆ ಗಮನ ಇಟ್ಟು ಕೆಲಸ ಮಾಡಬೇಕಾಗುತ್ತದೆ. ಟೆಕ್ಸ್ಟ್ ಪೋಸ್ಟುಗಳು, ಪೋಟೊಗಳು, ವಿಡಿಯೋಗಳು, ಬಹುಮುಖ್ಯವಾಗಿ ರೀಲ್ಸ್ ಮಾಡುವವರು ಇಲ್ಲಿ ಹೆಚ್ಚಿನ ಹಣ ಗಳಿಸುತ್ತಾರೆ. ಅದೇ ರೀತಿ ಇನ್ಟಾಗ್ರಾಂ ಅಕೌಂಟ್ ಕೂಡ ಮಾಡಿಕೊಂಡು ಖ್ಯಾತಿ ಮತ್ತು ಹಣ ಗಳಿಸಬಹುದು. ಇಲ್ಲಿ ರೀಲ್ಸ್ ಗಳದ್ದೇ ಹವಾ!
My Facebook Page: https://www.facebook.com/profile.php?id=100064182813052
ನಾಲ್ಕನೇಯದಾಗಿ, ಅಮೇಜಾನ್ ಅಫಿಲೇಟ್ ಮಾರ್ಕೆಟಿಂಗ್. ನಿಮ್ಮಿಷ್ಟದ ವಸ್ತುಗಳನ್ನು ಅಮೇಜಾನ್ ಅಫಿಲೇಟ್ ಅಸೋಸಿಯೇಟ್ ಆಗಿ (https://affiliate-program.amazon.in/) ಅವರು ಕೊಡುವ ಲಿಂಕನ್ನು ಪ್ರಮೋಟ್ ಮಾಡುವುದರ ಮೂಲಕವೂ ಹಣ ಗಳಿಸಬಹುದು. ನೀವು ಪ್ರಮೋಟ್ ಮಾಡುವ ವಸ್ತುಗಳು ಮಾರಾಟವಾದರೆ ನಿಮಗೆ ಸ್ವಲ್ಪ ಕಮೀಷನ್ ಸಿಗುತ್ತದೆ. ಹೆಚ್ಚು ಮಾರಾಟವಾದಷ್ಟು ಹೆಚ್ಚು ಹಣ ಗಳಿಸುವ ಅವಕಾಶವಿದೆ. ನಿಮ್ಮ ಸೋಶಿಯಲ್ ಮೀಡಿಯಾ ಐಡಿಗಳನ್ನು ಈ ಲಿಂಕನ್ನು ಶೇರ್ ಮಾಡಲು ಬಳಸಬಹುದು.
ನನ್ನದು ಈ ಅಕೌಂಟ್ ಕೂಡ ಇದ್ದು, ಸೂಕ್ತ ಸಂದರ್ಭಗಳಲ್ಲಿ ಹೆಚ್ಚಾಗಿ ಕನ್ನಡ ಪುಸ್ತಕಗಳನ್ನು ಪ್ರಮೋಟ್ ಮಾಡಲು ಮಾತ್ರ ಬಳಸುತ್ತೇನೆ.
(ನನ್ನ ಅಮೇಜಾನ್ ಲಿಂಕ್ ಮೂಲಕ ಕನ್ನಡ ಪುಸ್ತಕ ಕೊಳ್ಳಿರಿ: https://amzn.to/3ClRFCF)
ಈ ರೀತಿ ಇನ್ನೂ ಹತ್ತು ಹಲವು ನ್ಯಾಯಯುತವಾಗಿ ಹಣ ಗಳಿಸುವ ಅವಕಾಶಗಳು ಆನ್ ಲೈನಿನಲ್ಲಿವೆ.
ಯಾವುದೆ ಪ್ಲಾಟ್ ಫಾರ್ಮ್ ಆದರೂ ನೀವು ಯಾವ ಕೆಟಗರಿ ಅಥವಾ ನೀಚೆ (niche) ಅಂದರೆ ಸರಳವಾಗಿ ನಿಮ್ಮ ಆಸಕ್ತಿ, ವಸ್ತು, ವಿಷಯದ ಮೇಲೆ ಹೆಚ್ಚು ಪರಿಣಿತರಾಗಿರುತ್ತೀರಿ ಎಂಬುದರ ಮೇಲೆ ನಿಮ್ಮ ಹಣ ಗಳಿಕೆಯ ಸಾಮರ್ಥ್ಯ ಅವಲಂಬಿತವಾಗಿರುತ್ತದೆ.
ಬಹುಮುಖ್ಯವಾಗಿ, ಇಲ್ಲಿ ಎಲ್ಲೂ ಸುಲಭವಾಗಿ ಹಣ ಗಳಿಸಲಾಗುವುದಿಲ್ಲ. ನಿರಂತರತೆ ಮಾತ್ರ ನಿಮ್ಮನ್ನು ಹೆಚ್ಚು ಖ್ಯಾತಿ, ಹಣವನ್ನು ಗಳಿಸುವಂತೆ ಮಾಡಬಹುದು.
ಮತ್ತೇನಾದರೂ ಹೆಚ್ಚಿಗೆ ಮಾಹಿತಿ ಬೇಕೆಂದರೆ ಇಲ್ಲಿಯೇ ಕಾಮೆಂಟ್ ಮಾಡಿ ತಿಳಿಸಿ. ಮುಂದಿನ ಪೋಸ್ಟಿನಲ್ಲಿ ಬರೆಯಲು ಪ್ರಯತ್ನಿಸುತ್ತೇನೆ.
ಇಲ್ಲೇಲ್ಲಾ ನೀವು ಎಷ್ಟು ಗಳಿಸಿದಿರಿ ಎಂದು ಮಾತ್ರ ಸದ್ಯಕ್ಕೆ ಕೇಳದಿರಿ.
ಶುಭವಾಗಲಿ,
- ಗುಬ್ಬಚ್ಚಿ ಸತೀಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ