ಇಸ್ತಾನ್‌ಬುಲ್ಲಿಗೆ ಸುಮಾರು ಎರಡು ಘಂಟೆಯ ಪ್ರಯಾಣ ವೇಳೆ ತಗಲುವ ಒಂದು ಹಳ್ಳಿಯಲ್ಲಿ ಅಲ್ಲಾದ್ದೀನ್
ಎಂಬ ಶ್ರೀಮಂತ ವ್ಯಾಪಾರಿಯಿದ್ದ. ಆತನ ಬಳಿ ಹಲವು ಸೇವಕರಿದ್ದರು. ಅವರಲ್ಲಿ ಮುಸ್ತಾಫನೂ ಒಬ್ಬ. ಆತ
ತನ್ನ ಒಡೆಯನಿಗೆ ಬಹಳ ಬೇಕಾದವನಾಗಿದ್ದ.
ಒಂದು ದಿನ ಅಲ್ಲಾದ್ದೀನ್ ಮುಸ್ತಾಫನನ್ನೂ
ಏನೋ ತರಲು ಮಾರ್ಕೆಟ್ಟಿಗೆ ಕಳುಹಿಸಿದ್ದ. ಹೋದ ಸ್ವಲ್ಪ ಹೊತ್ತಿನಲ್ಲಿಯೇ ಮುಸ್ತಾಫನು ಬೆವರುತ್ತಾ ಭಯಭೀತನಾಗಿ
ಹಿಂದಿರುಗಿ ಬಂದಿದ್ದ. ಇದನ್ನು ಕಂಡ ಅಲ್ಲಾದ್ದೀನ್ ಕಾರಣ ಕೇಳಲು, ಕಾರಣ ಆಮೇಲೆ ಹೇಳುತ್ತೇನೆಂದ ಮುಸ್ತಾಫಾ
ತನ್ನ ಒಡೆಯನ ಕುದುರೆಯನ್ನು ಕೇಳಿ ಪಡೆದು ಅದನ್ನು ಹತ್ತಿ ವೇಗವಾಗಿ ಇಸ್ತಾನ್‌ಬುಲ್ ಕಡೆಗೆ ಮಿಂಚಿನ
ವೇಗದಲ್ಲಿ ಹೋಗಿಯೇ ಬಿಟ್ಟ.
ಅಲ್ಲಾದ್ದೀನನಿಗೆ ಇದೆಲ್ಲಾ ವಿಚಿತ್ರವಾಗಿ
ಕಂಡಿತ್ತು. ಮಾರ್ಕೆಟ್ಟಿನಲ್ಲಿ ಏನೋ ವಿಚಿತ್ರ ಘಟನೆ ನಡೆದಿರಬಹುದೆಂದು ಊಹಿಸಿ ಅಲ್ಲಿಗೆ ಹೋದರೆ ಅಲ್ಲಿ
ಯಮಧರ್ಮರಾಯ ಸುತ್ತಾಡುತ್ತಿದ್ದಾನೆ! ಆಶ್ಚರ್ಯದಿಂದ ಯಮನು ಯಾರನ್ನೋ ಹುಡುಕುತ್ತಿದ್ದಾನೆ. ಇದನ್ನು
ಗಮನಿಸಿದ ಅಲ್ಲಾದ್ದೀನ್ ನೇರವಾಗಿ ಯಮನಲ್ಲಿಗೆ ಹೋಗಿ ಆತ ಅಲ್ಲಿ ಸುತ್ತಾಡುತ್ತಿರುವ ಕಾರಣವೇನು ಎಂದು
ಕೇಳುತ್ತಾನೆ. ಆಗ ಯಮನು, “ಇಲ್ಲಿ ಸ್ವಲ್ಪ ಹೊತ್ತಿಗೆ ಮುಂಚೆ ಮುಸ್ತಾಫನನ್ನು ನೋಡಿದೆ. ಆತ ಇಲ್ಲೇನು
ಮಾಡುತ್ತಿದ್ದಾನೆ ಎಂದು ಯೋಚಿಸುತ್ತಿರುವಷ್ಟರಲ್ಲಿ ಆತ ಮಂಗಮಾಯವಾದ. ಯಾಕೆಂದರೆ, ಇನ್ನು ಎರಡು ಘಂಟೆಯ
ನಂತರ ಆತನ ಸಾವು ಇಸ್ತಾನ್‌ಬುಲ್‌ನಲ್ಲಿ ನಿಶ್ಚಯವಾಗಿದೆ” ಎಂದು ಹೇಳಿದ.
(ಯಮನೊಂದಿಗೆ ನಮ್ಮ ಸಾವಿನ ಮುಹೂರ್ತ ಹೇಗೆ ಕೂಡಿ ಬರುತ್ತದೆ ಎಂಬುದನ್ನು ಅರಿಯಲು ಅಥವಾ ನೀತಿಗಾದರೂ ಇರುವ ಮುಸ್ತಾಫನ ಕಥೆ ಇದು - ಸಂಗ್ರಹ)
{ಎರಡು ಧರ್ಮಗಳ ಪಾತ್ರಗಳನ್ನು ಬೆಸೆದಿರುವ ಈ ಅಜ್ಞಾತ ಕತೆಗಾರನಿಗೆ ಒಂದು ನಮಸ್ಕಾರ ಅಥವಾ ಸಲಾಂ ಹೇಳಲೇಬೇಕು)
ಜೈಕರ್ನಾಟಕ ಹಂತಕನಿಗೆ ಧರ್ಮ ಇಲ್ಲ
ಪ್ರತ್ಯುತ್ತರಅಳಿಸಿ👌🏻
ಪ್ರತ್ಯುತ್ತರಅಳಿಸಿ