ಪೋಸ್ಟ್‌ಗಳು

ಅಕ್ಟೋಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

“ಇಂದಿನ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯವು ಪರಿಹಾರ ಮಾರ್ಗವಾದೀತೆ?”

ಇಮೇಜ್
“ ಇಂದಿನ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯವು ಪರಿಹಾರ ಮಾರ್ಗವಾದೀತೆ? ”         “ ಈ ಸಮಯದಲ್ಲಿ ವಿಶ್ವಕ್ಕೆ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆ ಸೂಕ್ತವಾದುದು ”                      - ಅಹಗಮಗೆ ಟೂಡೋರ್ ಅರಿಯರತ್ನೆ,  ಶ್ರೀಲಂಕಾದ ಸರ್ವೋದಯ ನಾಯಕ.         ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯವೆಂದರೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವಾವಲಂಬಿಗಳಾಗುವುದು. ಪ್ರತಿಯೊಂದಕ್ಕೂ ವಿದೇಶಗಳನ್ನೇ ಅವಲಂಬಿಸುವ ಕೆಟ್ಟ ಸಂಸ್ಕ್ರತಿಯನ್ನು ಗಾಂಧೀಜಿ ಅಂದಿನ ದಿನಗಳಲ್ಲೇ ತಮ್ಮ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಮೂಲಕ ವಿರೋಧಿಸಿದ್ದರು. ದೇಶಿಯ ಉತ್ಪನ್ನಗಳನ್ನು ಬಳಸಿ, ವಿದೇಶಿ ಉತ್ಪನ್ನಗಳನ್ನು ತ್ಯಜಿಸಿ ಎಂದು ಕರೆ ನೀಡಿದ್ದರು. ದೇಶಿಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಜನರ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕೆ ತಮ್ಮ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೂಲಕ ನಾಂದಿ ಆಡಿದ್ದರು. ಅದು ಅವರ ಮಹತ್ವಾಕಾಂಕ್ಷೆಯೂ ಆಗಿತ್ತು.         ಇನ್ನೂ ವಿಸ್ತಾರವಾಗಿ ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ದಾಖಲಾಗಿರುವಂತೆ ಹೇಳುವುದಾದರೇ, “ ಭಾರತದ ಸ್ವಾತಂತ್ರ್ಯಕ್ಕಾಗಿ ಅಪ್ರತಿಮವಾಗಿ ಹೋರಾಟ ನಡೆಸಿದ ಗಾಂಧೀಜಿಯವರು ಕೇವಲ ರಾಜಕೀಯ ಸ್ವಾತಂತ್ರ್ಯದ ಗುರಿ ಇಟ್ಟುಕೊಂಡಿರಲ