ನಂದನ ಯುಗಾದಿ
ಬಂದಿದೆ ಯುಗಾದಿ ನಂದದ ಯುಗಾದಿ ಚಂದನ ಯುಗಾದಿ ಸಂಭ್ರಮದ ಈ ನಂದನ ಯುಗಾದಿ ಶತಮಾನಗಳ ಯುಗಾದಿ ದಶಕದ ಪ್ರೀತಿಯ ಯುಗಾದಿ ಕಳೆದೈದು ವಸಂತಗಳ ಯುಗಾದಿ ನಲ್ಲನಲ್ಲೆಯರ ಬಂಧನದ ಯುಗಾದಿ ಸರಸ-ವಿರಸದ ಯುಗಾದಿ ಬೇವು-ಬೆಲ್ಲದ ಯುಗಾದಿ ಹಾವು-ಏಣಿಯಾಟದ ಯುಗಾದಿ ಗುಬ್ಬಚ್ಚಿಗಳ ಗೂಡಿನಲ್ಲೊಂದು ಚಿಲಿಪಿಲಿ ಯುಗಾದಿ ಬಂದಿದೆ ಯುಗಾದಿ ನಂದದ ಯುಗಾದಿ ಚಂದನ ಯುಗಾದಿ ಸಂಭ್ರಮದ ಈ ನಂದನ ಯುಗಾದಿ - ಗುಬ್ಬಚ್ಚಿ ಸತೀಶ್.