ಬುಧವಾರ, ಮೇ 1, 2024

ಮತ್ತೊಂದು ಪ್ರಮುಖ ಕಥೆ, ಕಾವ್ಯ ಸ್ಪರ್ಧೆ...

ಸ್ನೇಹಿತರೇ,



ನನಗೆ ಮತ್ತೊಂದು ಪ್ರಮುಖ ಕಥೆ, ಕಾವ್ಯ ಸ್ಪರ್ಧೆಯ ವಿವರಗಳು ಲಭ್ಯವಾಗಿದ್ದು, ಇದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. 

ವಿವರಗಳಿಗೆ...


ಶುಭವಾಗಲಿ,

- ಗುಬ್ಬಚ್ಚಿ ಸತೀಶ್.

ಮಂಗಳವಾರ, ಏಪ್ರಿಲ್ 30, 2024

ಹತ್ತು ಅತ್ಯುತ್ತಮ ಕವನ ಸಂಕಲನಗಳಿಗೆ ಸುವರ್ಣಾವಕಾಶ...

ಸುವರ್ಣ ಕರ್ನಾಟಕ ಕಾವ್ಯ ಪುರಸ್ಕಾರಕ್ಕಾಗಿ ಕವನ ಸಂಕಲನಗಳ ಅಹ್ವಾನ...


ರಾಜ್ಯಮಟ್ಟದ ಸಾಹಿತ್ಯಾತ್ಮಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ  ಕರ್ನಾಟಕ ರಾಜೋತ್ಸವದ  ಸುವರ್ಣ ಮಹೋತ್ಸವದ ಅಂಗವಾಗಿ  ಮುಂಬರುವ ಜೂನ್ ತಿಂಗಳಿನಲ್ಲಿ  ರಾಜ್ಯ ಮಟ್ಟದ ಕನ್ನಡ ಹಬ್ಬ ನಡೆಸಲು ಯೋಜಿಸಲಾಗಿದೆ.


ಇದರ ಅಂಗವಾಗಿ ರಾಜ್ಯ ಮಟ್ಟದ  ಕವನ ಸಂಕಲನ ಸ್ಪರ್ಧೆ ಏರ್ಪಡಿಸಲಾಗಿದೆ. 2023 ಹಾಗೂ 24 ನೇ  ಸಾಲಿನಲ್ಲಿ ಪ್ರಕಟಗೊಂಡಿರುವ ಕವನ ಸಂಕಲನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು. ಆಯ್ಕೆಯಾದ ಹತ್ತು ಅತ್ಯುತ್ತಮ ಕವನ ಸಂಕಲನಗಳಿಗೆ ರಾಜ್ಯ ಮಟ್ಟದ ಸುವರ್ಣ ಕರ್ನಾಟಕ ಕಾವ್ಯ ಪುರಸ್ಕಾರ  ನೀಡಿ  ಸನ್ಮಾನಿಸಲಾಗುವುದು. 

ಇದೇ ಸಂದರ್ಭದಲ್ಲಿ ಕೆ.ಎಸ್.ನ.  ಕೃತಿ, ಉದಯೋನ್ಮುಖ ಕವಿಗಳ ಕೃತಿಗಳ ಲೋಕಾರ್ಪಣೆ, ಕೆ.ಎಸ್.ನ. ಕಾವ್ಯ ಪುರಸ್ಕಾರ ಪ್ರಧಾನ,ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮಗಳು ಜರುಗಲಿವೆ.


ಆಸಕ್ತಿಯುಳ್ಳ  ಕವಿಗಳು ಹಾಗೂ ಕವಯತ್ರಿಯರು ತಾವು 2023 ಅಥವಾ 2024ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಕವನಸಂಕಲನದ  ಮೂರು ಪ್ರತಿಗಳನ್ನು ತಮ್ಮ ಸ್ವವಿವರ ಹಾಗೂ ಭಾವಚಿತ್ರದೊಂದಿಗೆ  ಮೇ ತಿಂಗಳ 20ರ ಒಳಗಾಗಿ ತಲುಪುವಂತೆ ಡಾ.  ಭೇರ್ಯರಾಮಕುಮಾರ್, ಅಧ್ಯಕ್ಷರು, ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ, ಅರ್ಕೇಶ್ವರ ನಗರ ಬಡಾವಣೆ,ವಾರ್ಡ್ ನಂಬರ್ 6, ಕೆ.ಆರ್.ನಗರ ಟೌನ್, ಮೈಸೂರು ಜಿಲ್ಲೆ, ಕರ್ನಾಟಕ, ಪಿನ್ -571602 ಈ ವಿಳಾಸಕ್ಕೆ ಕಳಿಸುವುದು.

ಹೆಚ್ಚಿನ ವಿವರಗಳಿಗೆ 6363172368 ಡಾ. ಭೇರ್ಯ ರಾಮಕುಮಾರ್ ಇವರನ್ನು ಸಂಪರ್ಕಿಸುವುದು.


ಸೋಮವಾರ, ಏಪ್ರಿಲ್ 29, 2024

ವಿವಿಧ ದತ್ತಿ ಪುಸ್ತಕ ಪುರಸ್ಕಾರಗಳು...

ವಿವಿಧ ದತ್ತಿ ಪುಸ್ತಕ ಪುರಸ್ಕಾರಗಳು...

ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕೃತಿಗಳನ್ನು ಆಹ್ವಾನಿಸಿದೆ.



2023 ಜನವರಿ 1 ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾಮಹೇಶ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2023ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು 53 ವಿವಿಧ ಪುಸ್ತಕಗಳಿಗೆ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ. ಅದಕ್ಕಾಗಿ ಅನೇಕ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು ಒಟ್ಟಾರೆ 57ವಿವಿಧ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.



ಪ್ರತಿ ದತ್ತಿ ಪ್ರಶಸ್ತಿಯ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು, ಯಾವ ದತ್ತಿಗಾಗಿ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದುಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-560 018’ ಅವರಿಗೆ ಕಳುಹಿಸಲು ಪ್ರಕಟಣೆಯಲ್ಲಿ ಕೋರಿದೆ.



ಸ್ಪರ್ಧೆಗೆ ಅನ್ವಯಿಸುವ ನಿಯಮಗಳು:
1) ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು- 560 018. ದಿನಾಂಕ: 31-05-2024 ಒಳಗೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ
2) ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ
3) ಬಹುಮಾನದ ಬಗ್ಗೆ ಪರಿಷತ್ತು ತಾನು ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತದೆ.
4) ಯಾವುದೇ ಪುಸ್ತಕ ಪ್ರಶಸ್ತಿ ಪುರಸ್ಕೃತರು ತಾವು ಪ್ರಶಸ್ತಿ ಪಡೆದ ವಿಭಾಗಕ್ಕೆ 3 ವರ್ಷ ಅರ್ಜಿ ಸಲ್ಲಿಸುವಂತಿಲ್ಲ.
5) ಯಾವುದೇ ಪುಸ್ತಕ ದತ್ತಿ ಪುರಸ್ಕಾರ ಬರಹಗಾರರಿಗೆ ಯಾವುದೇ ಪ್ರಕಾರದಲ್ಲಾಗಲಿ ಮೂರು ಸಲ ಪ್ರಶಸ್ತಿ ಬಂದಿದ್ದೇ ಆದರೆ, ಜೀವಮಾನ ಪೂರ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ದತ್ತಿ ಪುರಸ್ಕಾರಕ್ಕೆ ಅವರು ಅರ್ಜಿ ಸಲ್ಲಿಸುವಂತಿಲ್ಲ.
6) ಯಾವುದೇ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್ತಿಗೆ ಇರುತ್ತದೆ.
7) ಒಂದಕ್ಕಿತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ.
8) ಪಿಎಚ್.ಡಿ. ಗ್ರಂಥಗಳು ಹಾಗೂ ನಿಘಂಟುಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ
9) ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸತಕ್ಕದ್ದು.
10) ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು. ಹಿಂದೆ ದತ್ತಿ ಪ್ರಶಸ್ತಿ ಬಂದಿದ್ದರೆ ಅದರ ವಿವರಗಳನ್ನೂ ಸ್ಪಷ್ಟವಾಗಿ ದಾಖಲಿಸ ಬೇಕು.
11) ಪ್ರತಿ ಪುಸ್ತಕ ದತ್ತಿ ಪ್ರಶಸ್ತಿಗಳಿಗೂ ತಲಾ ಮೂರು ಪ್ರತಿಗಳನ್ನು ಕಳುಹಿಸಬೇಕು.
12) ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕಗಳನ್ನು ಕಳುಹಿಸುವವರು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಹೊಂದಿರಬೇಕು. ಪುಸ್ತಕ ಕಳುಹಿಸುವಾಗ ತಮ್ಮ ಸದಸ್ಯತ್ವ ಸಂಖ್ಯೆಯನ್ನು ನಮೂದಿಸಿ ಕಳುಹಿಸಬೇಕು. ಒಂದು ವೇಳೆ ಇನ್ನೂ ಸದಸ್ಯರಾಗಿರದಿದ್ದಲ್ಲಿ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಪಡೆದುಕೊಂಡು ವಿವರಗಳೊಂದಿಗೆ ಅರ್ಜಿ ಸಲ್ಲಿಸ ಬಹುದು.


13) ದತ್ತಿಯ ವಿವರಗಳಿಗಾಗಿ ಐದು ರೂಪಾಯಿಯ ಅಂಚೆಚೀಟಿಯನ್ನು ಲಗತ್ತಿಸಿದ ಕವರ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಿ ವಿವರಗಳನ್ನು ಪಡೆಯ ಬಹುದು ಇಲ್ಲದಿದ್ದರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣಗಳಾದ
ಫೇಸ್ ಬುಕ್ : https://www.facebook.com/kasapaofficial,
https://www.facebook.com/KannadaSahityaParishattu
ಟ್ವಿಟರ್ : https://twitter.com/kannadaparishat
ಕೂ ಆಪ್ : https://www.kooapp.com/profile/kasapa
ಇನ್ ಸ್ಟಾಗ್ರಾಮ್ : https://www.instagram.com/kannadasahityaparishattu
ವೆಬ್ ಸೈಟ್ : https://kannadasahithyaparishattu.in

www.kasapa.in ಅಥವಾ ದೂರವಾಣಿ ಸಂಖ್ಯೆ 080-26612991/26623584 ಇವುಗಳ ಮೂಲಕವೂ ಮಾಹಿತಿಯನ್ನು ಪಡೆಯ ಬಹುದಾಗಿದೆ.

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...