ಮಂಗಳವಾರ, ಏಪ್ರಿಲ್ 30, 2024

ಹತ್ತು ಅತ್ಯುತ್ತಮ ಕವನ ಸಂಕಲನಗಳಿಗೆ ಸುವರ್ಣಾವಕಾಶ...

ಸುವರ್ಣ ಕರ್ನಾಟಕ ಕಾವ್ಯ ಪುರಸ್ಕಾರಕ್ಕಾಗಿ ಕವನ ಸಂಕಲನಗಳ ಅಹ್ವಾನ...


ರಾಜ್ಯಮಟ್ಟದ ಸಾಹಿತ್ಯಾತ್ಮಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ  ಕರ್ನಾಟಕ ರಾಜೋತ್ಸವದ  ಸುವರ್ಣ ಮಹೋತ್ಸವದ ಅಂಗವಾಗಿ  ಮುಂಬರುವ ಜೂನ್ ತಿಂಗಳಿನಲ್ಲಿ  ರಾಜ್ಯ ಮಟ್ಟದ ಕನ್ನಡ ಹಬ್ಬ ನಡೆಸಲು ಯೋಜಿಸಲಾಗಿದೆ.


ಇದರ ಅಂಗವಾಗಿ ರಾಜ್ಯ ಮಟ್ಟದ  ಕವನ ಸಂಕಲನ ಸ್ಪರ್ಧೆ ಏರ್ಪಡಿಸಲಾಗಿದೆ. 2023 ಹಾಗೂ 24 ನೇ  ಸಾಲಿನಲ್ಲಿ ಪ್ರಕಟಗೊಂಡಿರುವ ಕವನ ಸಂಕಲನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು. ಆಯ್ಕೆಯಾದ ಹತ್ತು ಅತ್ಯುತ್ತಮ ಕವನ ಸಂಕಲನಗಳಿಗೆ ರಾಜ್ಯ ಮಟ್ಟದ ಸುವರ್ಣ ಕರ್ನಾಟಕ ಕಾವ್ಯ ಪುರಸ್ಕಾರ  ನೀಡಿ  ಸನ್ಮಾನಿಸಲಾಗುವುದು. 

ಇದೇ ಸಂದರ್ಭದಲ್ಲಿ ಕೆ.ಎಸ್.ನ.  ಕೃತಿ, ಉದಯೋನ್ಮುಖ ಕವಿಗಳ ಕೃತಿಗಳ ಲೋಕಾರ್ಪಣೆ, ಕೆ.ಎಸ್.ನ. ಕಾವ್ಯ ಪುರಸ್ಕಾರ ಪ್ರಧಾನ,ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮಗಳು ಜರುಗಲಿವೆ.


ಆಸಕ್ತಿಯುಳ್ಳ  ಕವಿಗಳು ಹಾಗೂ ಕವಯತ್ರಿಯರು ತಾವು 2023 ಅಥವಾ 2024ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಕವನಸಂಕಲನದ  ಮೂರು ಪ್ರತಿಗಳನ್ನು ತಮ್ಮ ಸ್ವವಿವರ ಹಾಗೂ ಭಾವಚಿತ್ರದೊಂದಿಗೆ  ಮೇ ತಿಂಗಳ 20ರ ಒಳಗಾಗಿ ತಲುಪುವಂತೆ ಡಾ.  ಭೇರ್ಯರಾಮಕುಮಾರ್, ಅಧ್ಯಕ್ಷರು, ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ, ಅರ್ಕೇಶ್ವರ ನಗರ ಬಡಾವಣೆ,ವಾರ್ಡ್ ನಂಬರ್ 6, ಕೆ.ಆರ್.ನಗರ ಟೌನ್, ಮೈಸೂರು ಜಿಲ್ಲೆ, ಕರ್ನಾಟಕ, ಪಿನ್ -571602 ಈ ವಿಳಾಸಕ್ಕೆ ಕಳಿಸುವುದು.

ಹೆಚ್ಚಿನ ವಿವರಗಳಿಗೆ 6363172368 ಡಾ. ಭೇರ್ಯ ರಾಮಕುಮಾರ್ ಇವರನ್ನು ಸಂಪರ್ಕಿಸುವುದು.


2 ಕಾಮೆಂಟ್‌ಗಳು:

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...