ಸಮಕಾಲೀನ ಕಾಲಘಟ್ಟದಲ್ಲಿ ಪತ್ರಿಕೆಗಳಿಗೆ ಬರೆದರೂ ಸಂಭಾವನೆ ಸಿಗದು ಎಂಬ ಮಾತಿದೆ. ಪ್ರಕಟವಾಗುತ್ತಿದ್ದ ಸಾಪ್ತಾಹಿಕ ಪುರವಣಿಗಳು ಕಾಣೆಯಾಗಿವೆ. ಕೆಲವು ಪುರವಣಿಗಳು ಪ್ರಕಟವಾಗುತ್ತಿದ್ದರೂ ಪುಟಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮೊದಲಿನಷ್ಟು ವಾರಪತ್ರಿಕೆಗಳು, ಮಾಸ ಪತ್ರಿಕೆಗಳು ಕೂಡ ಪ್ರಕಟವಾಗುತ್ತಿಲ್ಲ. ಪ್ರಕಟವಾಗುವ ಕೆಲವೇ ಪತ್ರಿಕೆಗಳಲ್ಲಿ ಅವಕಾಶ ಸಿಗುವುದು ಅಲ್ಪವೇ ಎಂದು ಹೇಳಬೇಕು. ವೃತ್ತಿಯಿಂದ ಬರೆದು ಬದುಕಬಹುದಾದ ಅವಕಾಶಗಳು ಇಂದು ಇಲ್ಲವೇ ಇಲ್ಲ ಎಂದೇ ಹೇಳಬಹುದು. ಪ್ರವೃತ್ತಿಯಿಂದ ಬರೆಯುವವರು ಕೂಡ ನಮ್ಮ ಹೆಸರು ಬಂದರೆ ಸಾಕು ಎಂಬಂತೇ ಬರೆಯಬೇಕಾಗಿದೆ.
ಆದರೆ, ಬರೆಯುವುದು ನಿಮ್ಮ ಹವ್ಯಾಸವಾಗಿದ್ದು ನೀವು ಬರೆದದ್ದು ಪ್ರಕಟವೂ ಆಗಿ ಸ್ವಲ್ಪ ಸಂಭಾವನೆಯೂ ದೊರೆತರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ ಹೇಳಿ. ಈ ನಿಟ್ಟಿನಲ್ಲಿ ಇತ್ತೀಚಿನ ಕೆಲವು ವರುಷಗಳಿಂದ ನಿಯಮಿತವಾಗಿ ಮಾಸ ಪತ್ರಿಕೆಯಾಗಿ ಪ್ರಕಟವಾಗುತ್ತಿರುವ ವೀರಲೋಕದ "ಕನ್ನಡ ಮಾಣಿಕ್ಯ" ಆಗಾಗ ಬರಹಗಾರರಿಂದ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಲೇಖನಗಳನ್ನು ಆಹ್ವಾನಿಸುತ್ತಲೇ ಇರುತ್ತದೆ. ನೀವು ಬರೆದದ್ದು ಪ್ರಕಟವಾದರೆ ಸಂಭಾವನೆ ಇದೆ ಎಂದು ಹೇಳುತ್ತಲೇ ಇರುತ್ತಾರೆ.
ಇಂತಹದೊಂದು ಅವಕಾಶ ಮತ್ತೆ ಬಂದಿದೆ. ವಿವರಗಳಿಗೆ ಕೆಳಗಿನ ವಿವರಗಳನ್ನು ನೋಡಬಹುದು. ಶುಭವಾಗಲಿ...
ನಾನೊಬ್ಬ ಬರಹಗಾರ
ಪ್ರತ್ಯುತ್ತರಅಳಿಸಿ__________________
ಹೌದು ಕಣ್ರೀ
ನಾನೊಬ್ಬ ಬರಹಗಾರ
ನಿಜ ಅಲ್ವೇ ಹೇಳ್ ರಿ
ಮಜಾ ಹೇಳ್ತೀವಿ ಕೇಳ ರಿ
ಇ4 ಮೇಲ್ ಗಿ ಮೇಲ್
ಇಲ್ ರಿ