ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಾಗಿ ಅಭಿನಯಿಸಿರುವ "ಡೆವಿಲ್" ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಹತ್ತು ಗಂಟೆಗಳ ಅವಧಿಯಲ್ಲಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದಿರುವ ಟೀಸರ್ ಇದೊಂದು ಪಕ್ಕ ಸಾಹಸಪ್ರಧಾನ ಚಿತ್ರ ಎಂದು ಒತ್ತಿ ಹೇಳುತ್ತಿದೆ. ನಿರ್ದೇಶಕ ವೀರ್ ಪ್ರಕಾಶ್ ನಿರ್ದೇಶನದ ಈ ಚಿತ್ರವನ್ನು ಶ್ರೀ ಜೈ ಮಾತಾ ಕಂಬೈನ್ಸ್ ನಿರ್ಮಿಸುತ್ತಿದೆ. ಸಂಗೀತ ನಿರ್ದೇಶನ ಬಿ.ಅಜನೀಶ್ ಲೋಕನಾಥ್ ಅವರದ್ದಾದರೆ, ಸಾಹಸ ನಿರ್ದೇಶನ ರಾಮ್ ಲಕ್ಷ್ಮಣ್ ಅವರದ್ದು. ಸುಧಾಕರ್ ಎಸ್ ರಾಜ್ ಅವರ ಛಾಯಗ್ರಹಣ ಈ ಚಿತ್ರಕ್ಕಿದೆ. ಈ ಬಹು ನಿರೀಕ್ಷಿತ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ