ಬುಧವಾರ, ಡಿಸೆಂಬರ್ 14, 2011

ನನ್ನ ಜೀವಕೆ ಜೀವವಾದ ನೀನು ಅಮರ.


ಬಾನು ಭುವಿಗೆ ಇಳಿಸಿದ ಮೊದಲ ಮಳೆಗೆ
ಭುವಿಯು ಕೊಟ್ಟ ಹಸಿರ ಉಡುಗೊರೆಯ ಕಳೆಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ಮೊನ್ನೆತಾನೆ ನಾಡ ಗೌರಿಗೆ ಕಾಡ ಕಡವೆಯ
ಒಲಿದ ಪ್ರೀತಿಯ ಅದ್ಭುತ ಉಡುಗೊರೆ “ಚುಕ್ಕಿ”ಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ಮರಕ್ಕೊಂದು ಹಕ್ಕಿ, ಹಕ್ಕಿಗೊಂದು ಮರ
ಎಲ್ಲ ಜೀವಕೂ ದೇವರು ನೀಡಿದ ವರ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ನನ್ನ ಜೀವಕೆ ಜೀವವಾದ ನೀನು ಅಮರ.

                           - ಗುಬ್ಬಚ್ಚಿ ಸತೀಶ್.

ಶನಿವಾರ, ಡಿಸೆಂಬರ್ 3, 2011

ಸರಿಸಾಟಿ

ಆ ಚಂದ್ರನಲ್ಲದೆ
ನಿನಗ್ಯಾರು ಸಮ
ಹೇಳೆ ಹೇಳೆ
ನನ್ನೆದೆಯ ಸುಮ

ಅವನ ಬೆಳಕಿಲ್ಲದ
ರಾತ್ರಿಯೇಕೆ ಸುಮ
ಕೇಳೆ ಕೇಳೆ
ನನ್ನೆದೆಯ ಸುಮ

ಆ ಚಂದ್ರನಿಲ್ಲದ
ಬಾನು ಬಾನಲ್ಲ ಸುಮ
ನೀನಿಲ್ಲದ ಬದುಕು
ಬದುಕಲ್ಲ ಸುಮ.

           - ಗುಬ್ಬಚ್ಚಿ ಸತೀಶ್.

ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು"

ಸ್ನೇಹಿತರೇ, ನಮಸ್ಕಾರ. ಖ್ಯಾತ ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು -  ಹಣ, ಸಂಪತ್ತು ಮತ್ತು ಯಶಸ್ಸಿನ ಹಿಂದಿನ ಸರಳ ಅಭ್ಯಾ...