ಮದುವೆಯೆಂಬುದು ಒಂದು ಖಾಸಗಿ ವಿಷಯ
"Happy marriages begin when we marry the ones we love, and they blossom when we love the ones we marry." ನಮ್ಮಿಬ್ಬರ ಭೇಟಿಗಳು ಕಥೆಗಳ ಸುತ್ತಾ ಸುತ್ತ ತೊಡಗಿದವು. ಈ ಬಾರಿಯ ಭೇಟಿಯಲ್ಲಿ ನಮ್ಮ ಮದುವೆಯ ಬಗ್ಗೆ ಮಾತನಾಡೋಣ ಎಂದುಕೊಂಡು, ಅರ್ಧಗಂಟೆಯಿಂದ ತನ್ಮಯಳಾಗಿ ನನ್ನನ್ನೇ ನೋಡುತ್ತಿದ್ದ ಲಕ್ಷ್ಮೀಗೆ, “ ನಮ್ಮ ಮದುವೆ ಯಾವಾಗ? ” ಎಂದು ಥಟ್ಟನೆ ಕೇಳಿದೆ. “ ಮದುವೆ!? ” ಅವಳ ಒಂದೇ ಮಾತಿನ ಪದದಲ್ಲಿ ಬೆಚ್ಚಿದ ಭಾವವಿತ್ತು. “ ಹೌದು. ಮದುವೆ! ” ತಣ್ಣಗೆ ನಾ ಮತ್ತೆ ನುಡಿದೆ. “ ಪ್ರೀತಿಸಿದವರು ಮದುವೆಯಾಗಲೇಬೇಕಾ? ” “ ಮತ್ತೆ, ಪ್ರೀತಿ ಸಾರ್ಥಕವಾಗುವುದು ಆವಾಗಲೇ ಅಲ್ಲವೇ? ನಿನಗೇನು ನನ್ನ ಮದುವೆಯಾಗಲು ಯಾವುದಾದರೂ ಅಡ್ಡಿ, ಆತಂಕ? ” “ ಹಾಗೇನಿಲ್ಲ, ಹೇಗಿದ್ದರೂ ಮದುವೆಯೆಂಬುದು ಒಂದು ಖಾಸಗಿ ವಿಷಯವಲ್ಲವೇ? ” “ ಖಾಸಗಿ ವಿಷಯವೇ? ಆಗಿದ್ದರೆ ನೀನು ಯಾರನ್ನೂ ಕೇಳುವುದಿಲ್ಲವಾ? ” “ ಕೇಳಬೇಕೆಂದೆನೋ ಇದ್ದೇನೆ. ಆದರೆ, ಅವರು ಒಪ್ಪಲಿಲ್ಲವೆಂದರೆ, ನಿಮ್ಮನ್ನು ಮದುವೆಯಾಗದೇ ಉಳಿಯಲಾಗುತ್ತದೆಯೇ? ” “ ಮತ್ತೆ? ” “ ನಿಮ್ಮ ಸಹವಾಸ ದೋಷದಿಂದ ನಾನೂ ಇತ್ತೀಚೆಗೆ ಬಿಡುವುದಾಗಲೆಲ್ಲಾ ಓದುವುದನ್ನು ರೂಢಿಸಿಕೊಂಡಿದ್ದೇನೆ. ಅದಕ್ಕೆ ಇವತ್ತು ನಾ ಒಂದು ಕಥೆ ಹೇಳಿಬಿಡುತ್ತೇನೆ, ಕೇಳಿಬಿಡಿರಿ. ” “ ಕಥೆಯಾ!? ಓ ಗ್ರೇಟ್. ಹೇಳು, ಹೇಳು ನನ್ನ ಜೀವನವೆಲ್ಲಾ ಬರಿ ಕಥೆ ಹೇಳಿದ್ದೇ ಆಯ್ತು