ಪೋಸ್ಟ್‌ಗಳು

ಡಿಸೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೀವ ಚೇತನ

ಜೀವ ಚೇತನದ ಆದ್ಯಂತ ಪಯಣಕೆ

ಹೆಜ್ಜೆಗೊಂದು ಸಡ್ಡು ಹೊಡೆದ ಸವಾಲು

ಬಿರುಗಾಳಿಗೆ ಸಿಲುಕಿದ ಗಾಳಿಪಟ ಮನ

ಯಾವ ಹಾದಿ, ಪರಿಹಾರಗಳೇ ವಿರಳ


ನಿರ್ಭಯತೆಯಿಂದ ಮುನ್ನುಗುತ್ತಿರು

ಹೊಸ ಅರುಣೋದಯವು ಗೋಚರಿಸಲಿ

ಕಟ್ಟು ಕಷ್ಟಗಳ ಮೂಟೆ, ಹೆಜ್ಜೆ ಮುಂದಿಡು

ಬದಲಾವಣೆ ಬಲುಕಷ್ಟ, ಅಚ್ಚರಿಯು ಕಾದಿದೆ


ನಿನೆಂದೂ ಗ್ರಹಿಸದ ತಿರುವಿದೆ ಮುಂದೆ

ಕಲ್ಪನೆಗೂ ನಿಲುಕದ ಕನಸು ನನಸಾಗಲಿದೆ

ಬಹುಶಃ ನಿನ್ನದೇ ಹೊಸಲೋಕ, ಅದ್ಬುತ!

ಬಹುದೂರವಾದರು ರಮಣೀಯ ದೃಶ್ಯಗಳು


ಒಲುಮೆಯ ಜನ, ಹಾರ್ದಿಕ ಶುಭಾಷಯಗಳು

ನಿನ್ನ ಕಥೆಗೆ, ಭಾವನೆಗಳಿಗೆ ಕಿವಿಗೊಡುವವರು

ನೀನಿಟ್ಟ ಹೆಜ್ಜೆಯ ಹಾದಿಗೆ ಹೂವಾದವರು

ಅಶ್ವಿನಿ ದೇವಂತೆಗಳಾದ ಜೀವದ ಗೆಳೆಯರು


ಇನ್ನೇಕೆ ಭಯ? ಒಂದೆಜ್ಜೆ ಮುಂದಿರಲಿ ಎಲ್ಲರಿಗಿಂತ

ಜೀವನದ ಅನುಕ್ಷಣವನ್ನು ಪ್ರೀತಿಸು

ಮುಂದಿನ ಹಾದಿಯಲ್ಲಿ ಎಲ್ಲ ಮರೆಸುವ ಮುಂಬೆಳಕಿದೆ

ಹಿಂತಿರುಗಿ ನೋಡದಿರು ನಿನ್ನ ದಾರಿ ಅದಲ್ಲ

ಮಳೆಯಾಗು ನೀ... (ನಮ್ಮ ಮಗುವೆ)

ಮಿಂಚದಿರು ನೀನು

ಮಿಂಚಿದರೆ ಚೆಂದ

ಮಳೆಗೆ ಮುನ್ಸೂಚನೆ!

ಆದರೆ, ಆ ಬೆಳಕು

ಕ್ಷಣಿಕ ಸುಖ

ಮಿಂಚದಿರು ನೀನುಎಂದಿಗೂ ಗುಡುಗದಿರು

ಗುಡುಗೆಂದರೆ ಭಯ

ಮಳೆ ಶುರುವಾಗಬಹುದ?

ಆದರೆ, ಆ ಶಬ್ಧ

ಕ್ಷಣಿಕ ದುಃಖ

ಎಂದಿಗೂ ಗುಡುಗದಿರುಮಳೆ, ಮಳೆಯಾಗು ನೀ

ಮಳೆಯೆಂದರೆ ಬೆಳೆ

ಬದುಕು ಚಿಗುರುತ್ತದೆ!

ಆದರೆ, ಆ ಹಸಿರು

ಸುಃಖ ದುಃಖಗಳ ಬಸಿದು

ಹೆತ್ತವರ ಮನಕೆ ತಂಪೆರೆಯಲಿ

ಅತಿವೃಷ್ಠಿ-ಅನಾವೃಷ್ಠಿಯಾಗದ

ಮಳೆ, ಮಳೆಯಾಗು ನೀ...

---