ದಶರಥ್ ಮಂಜಿ ಎಂಬ ಮೌಂಟೆನ್ ಮ್ಯಾನ್ ನ ಕಥೆ...
ಇವಳಿಗೆ ಲೆಫ್ಟಿನೆಂಟ್ ಬ್ಲಾಂಡ್ ಪೋರ್ಡ್‍ನ ಕಥೆಯನ್ನು ಹೇಳಿದ್ದೆ ತಪ್ಪಾಯಿತು ಎಂದೆನಿಸುತ್ತದೆ. ಮತ್ತೆ ಮತ್ತೆ ಸಿಕ್ಕಿದಾಗಲೆಲ್ಲಾ ಕಥೆ ಹೇಳಿ ಎಂದು ಕಾಡ ತೊಡಗಿದಳು. ಕಥೆ ಹೇಳಿದರೆ ಬೋನಸ್ ಹೂ ಮುತ್ತುಗಳು ಸಿಗುವುದು ಗ್ಯಾರಂಟಿಯಾದರೂ... ಇಂದಿನ ದಿನಗಳಲ್ಲಿ ಯಾವ ಕಥೆಯನ್ನು ಹೇಳುವುದು? ಅದೂ ಇವಳಿಗೆ ಎಂದ ಮೇಲೆ ಅದು ಪ್ರೀತಿಯ ಕಥೆಯೇ ಆಗಿರಬೇಕು. ಈ ಹುಡುಗಿ ಬೇರೆ ತಾನು ಹೇಳಿದ ಮೇಲೆ ಮುಗಿಯಿತು. ಅದು ಆಗಲೇ ಬೇಕು ಎಂಬ ಮನಸ್ಥಿತಿಯಲ್ಲಿದ್ದಾಳೆ. ಯಾವ ಕಥೆ ಹೇಳುವುದು ಎಂದು ಚಿಂತಿಸುತ್ತಲೇ, “ಮತ್ತೆ ಸಿಕ್ಕಾಗ ಹೇಳುತ್ತೇನೆ” ಎಂದು ಕಥೆ ಹೇಳುವ ಕ್ರಿಯೆಯಿಂದ ತಪ್ಪಿಸಿಕೊಳ್ಳತೊಡಗಿದೆ. ಆದರೂ ಹೂಮುತ್ತುಗಳು ಸಿಗುತ್ತಿದ್ದವು. ಆದರೆ ಮುನಿಸಿನಿಂದ ಮತ್ತು ಬೋನಸ್ ಇರುತ್ತಿರಲಿಲ್ಲ. ಎಷ್ಟು ದಿನ ಹೀಗೆ ತಪ್ಪಿಸಿಕೊಳ್ಳಲು ಸಾಧ್ಯ? ಅಂತೂ ಇಂತೂ ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು. ಅಂದು ನಮಗೆ ಅಂತಹ ವಿಶೇಷವೇನಿಲ್ಲದಿದ್ದರೂ, ಬದಲಾದ ಕಾಲಕ್ಕೆ ತಕ್ಕಂತೆ ನಡೆಯಬೇಕು ಮತ್ತು ಸಮಕಾಲೀನತೆಯ ಟಚ್ ಮಿಸ್ ಮಾಡಿಕೊಳ್ಳುತ್ತಿವೇನೋ ಎಂಬ ಆತಂಕದಲ್ಲೇ ಮೀಟ್ ಆದೆವು. ಭೇಟಿಯಾಗುತ್ತಿದ್ದಂತೆ “ಇಂದು ಕಥೆ ಹೇಳಲೇಬೇಕು” ಎಂದು ವರಾತ ತೆಗೆದಳು. Most expected Question ಎಂದುಕೊಂಡು “ಸರಿ” ಎಂದೆ. “ಯಾವ ಕಥೆ?” ಎಂದಳು. ಅವಳ ಕುತೂಹಲ ಕಂಡು, ಸ್ವಲ್ಪ ಆಟ ಆಡಿಸೋಣ ಎಂದುಕೊಳ್ಳುತ್ತಾ, “ವ್ಯಾಲೆಂಟೈನ್ ಸಂತನ ಕಥೆ ಬೇಡ” ಎಂದೆನು. “ನನಗೂ ಆ ಕಥೆ ಬೇಡ” ಎಂದಳು. ತಗಳಪ