ಪೋಸ್ಟ್‌ಗಳು

ಅಕ್ಟೋಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮದುವೆಯೆಂಬುದು ಒಂದು ಖಾಸಗಿ ವಿಷಯ

ಇಮೇಜ್
"Happy marriages begin when we marry the ones we love,  and they blossom when we love the ones we marry." ನಮ್ಮಿಬ್ಬರ ಭೇಟಿಗಳು ಕಥೆಗಳ ಸುತ್ತಾ ಸುತ್ತ ತೊಡಗಿದವು. ಈ ಬಾರಿಯ ಭೇಟಿಯಲ್ಲಿ ನಮ್ಮ ಮದುವೆಯ ಬಗ್ಗೆ ಮಾತನಾಡೋಣ ಎಂದುಕೊಂಡು, ಅರ್ಧಗಂಟೆಯಿಂದ ತನ್ಮಯಳಾಗಿ ನನ್ನನ್ನೇ ನೋಡುತ್ತಿದ್ದ ಲಕ್ಷ್ಮೀಗೆ, “ ನಮ್ಮ ಮದುವೆ ಯಾವಾಗ? ” ಎಂದು ಥಟ್ಟನೆ ಕೇಳಿದೆ. “ ಮದುವೆ!? ” ಅವಳ ಒಂದೇ ಮಾತಿನ ಪದದಲ್ಲಿ ಬೆಚ್ಚಿದ ಭಾವವಿತ್ತು. “ ಹೌದು. ಮದುವೆ! ” ತಣ್ಣಗೆ ನಾ ಮತ್ತೆ ನುಡಿದೆ. “ ಪ್ರೀತಿಸಿದವರು ಮದುವೆಯಾಗಲೇಬೇಕಾ? ” “ ಮತ್ತೆ, ಪ್ರೀತಿ ಸಾರ್ಥಕವಾಗುವುದು ಆವಾಗಲೇ ಅಲ್ಲವೇ? ನಿನಗೇನು ನನ್ನ ಮದುವೆಯಾಗಲು ಯಾವುದಾದರೂ ಅಡ್ಡಿ, ಆತಂಕ? ” “ ಹಾಗೇನಿಲ್ಲ, ಹೇಗಿದ್ದರೂ ಮದುವೆಯೆಂಬುದು ಒಂದು ಖಾಸಗಿ ವಿಷಯವಲ್ಲವೇ? ” “ ಖಾಸಗಿ ವಿಷಯವೇ? ಆಗಿದ್ದರೆ ನೀನು ಯಾರನ್ನೂ ಕೇಳುವುದಿಲ್ಲವಾ? ” “ ಕೇಳಬೇಕೆಂದೆನೋ ಇದ್ದೇನೆ. ಆದರೆ, ಅವರು ಒಪ್ಪಲಿಲ್ಲವೆಂದರೆ, ನಿಮ್ಮನ್ನು ಮದುವೆಯಾಗದೇ ಉಳಿಯಲಾಗುತ್ತದೆಯೇ? ” “ ಮತ್ತೆ? ” “ ನಿಮ್ಮ ಸಹವಾಸ ದೋಷದಿಂದ ನಾನೂ ಇತ್ತೀಚೆಗೆ ಬಿಡುವುದಾಗಲೆಲ್ಲಾ ಓದುವುದನ್ನು ರೂಢಿಸಿಕೊಂಡಿದ್ದೇನೆ. ಅದಕ್ಕೆ ಇವತ್ತು ನಾ ಒಂದು ಕಥೆ ಹೇಳಿಬಿಡುತ್ತೇನೆ, ಕೇಳಿಬಿಡಿರಿ. ” “ ಕಥೆಯಾ!? ಓ ಗ್ರೇಟ್. ಹೇಳು, ಹೇಳು ನನ್ನ ಜೀವನವೆಲ್ಲಾ ಬರಿ ಕಥೆ ಹೇಳಿದ್ದೇ ಆಯ್ತು