ಪೋಸ್ಟ್‌ಗಳು

ಆಗಸ್ಟ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

೨೦೦೮ರ ಆಗಸ್ಟ್ ೧೫, ೧೬ ಮತ್ತು ೧೭ರಲ್ಲಿ ನಾಗತಿಹಳ್ಳಿಯಲ್ಲಿ ನಡೆದ ಚಿತ್ರಕಥಾ ಶಿಬಿರದ ಅನುಭವಗಳು.

ಇಮೇಜ್
‘ಸಾಕ್ಷಾತ್ಕಾರ’ ನನ್ನ ಗಮನವನ್ನು ಸೆಳೆದ ಮೊದಲ ಚಲನಚಿತ್ರ. ಆ ಚಿತ್ರದ ’ಒಲವೇ ಜೀವನ ಸಾಕ್ಷಾತ್ಕಾರ’ ಎಂಬ ಹಾಡಂತೂ ನನ್ನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದಾದ ಮೇಲೆ ಸಾಕಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದರೂ ಇಷ್ಟವಾಗುತಿದ್ದದು ಡಾ//ರಾಜ್ ಅಭಿನಯದ ಚಿತ್ರಗಳು, ಪುಟ್ಟಣ್ಣ ಕಣಗಾಲರ ಚಿತ್ರಗಳು, ಶಂಕರ್‌ನಾಗ್ ಚಿತ್ರಗಳು ಮತ್ತು ಆಗೊಮ್ಮೆ ಈಗೊಮ್ಮೆ ವಿಷ್ಣುವರ್ಧನ್, ರವಿಚಂದ್ರನ್, ಜಗ್ಗೇಶ್, ಶಿವರಾಜ್‌ಕುಮಾರ್ ಚಿತ್ರಗಳು ಮತ್ತು ಮಕ್ಕಳ ಚಿತ್ರಗಳು. ಅಪರೂಪಕೊಮ್ಮೆ, ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿದ್ದರೂ ಅವುಗಳನ್ನು ನೋಡುವುದು ಸ್ವಲ್ಪ ಕಷ್ಟವಾಗುತ್ತಿತ್ತು, ಸಿನಿಮಾಗಿಂತ ಓದುವುದೇ ಮೇಲು ಎಂದು ಪುಸ್ತಕ ಪ್ರಪಂಚದಲ್ಲೇ ಮುಳುಗಿಬಿಟ್ಟಿದ್ದೆ. ‘ಅಮೆರಿಕಾ ಅಮೆರಿಕಾ’ ಚಿತ್ರ ಬಿಡುಗಡೆಯಾದಾಗ ಬಹಳ ಇಷ್ಟ ಪಟ್ಟು ನೋಡಿ, ‘ನೂರು ಜನ್ಮಕೂ, ನೂರಾರು ಜನ್ಮಕೂ’ ಎಂದೂ ಹಾಡಿದ್ದು ಬಿಟ್ಟರೆ ಸೀರಿಯಸ್ಸಾಗಿ ಚಿತ್ರಗಳನ್ನು ನೋಡಿದ್ದು ಕಮ್ಮಿ. ಆಗ ಬಂತು ನೋಡಿ ’ಮುಂಗಾರು ಮಳೆ’ ಯೆಂಬ ಕುಂಭದ್ರೋಣ ಮಳೆ. ಊರವರೆಲ್ಲಾ ಮುಂಗಾರುಮಳೆಯಲ್ಲಿ ತೋಯ್ದು ತೆಪ್ಪೆಯಾದರೂ ನನಗೇಕೋ ಮಳೆಯಲಿ ನೆನೆಯುವ ಮನಸ್ಸಾಗಿರಲಿಲ್ಲ. ‘ನಾ ನಾಲ್ಕುಸಲ ನೋಡಿದೆ. ಹತ್ತು ಸಲ ನೋಡಿದೆ ಎಂದು ಕೆಲವರು ಅಂದರೂ, ಕೆಲವರು ಅಂಕಣಗಳಲ್ಲಿ ಚಿತ್ರದ ಬಗ್ಗೆ ಬಂದರೂ ತಲೆಕೆಡಿಸಿಕೊಳ್ಳದ ನಾನು ಮುಂಗಾರುಮಳೆ ಐವತ್ತು ದಿನಗಳನ್ನು ಪೂರೈಸಿ ಶತದಿನೋತ್ಸವದತ್ತ ದಾಪುಗಾಲಿಟ್ಟಾಗ ಇದ್ದಕ್ಕಿದ್ದಂ