ಪೋಸ್ಟ್‌ಗಳು

ನವೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಮೊದಲ ಪ್ರೇಮ ಪತ್ರ... ಲಕ್ಷ್ಮಿ... ನಾ ನಿನ್ನನ್ನು ಡಿಯರ್ ಲಕ್ಷ್ಮಿ... ಎಂದೇ ಸಂಬೋಧಿಸಬಹುದಿತ್ತು. ನನ್ನ ಪ್ರಕಾರ ನೀನು ನನಗೆ ಡಿಯರ್ ಆಗಿದ್ದೀಯಾ ಮತ್ತು ನಾ ನಿನ್ನನ್ನು ಡಿಯರ್ ಎಂದುಕೊಂಡು ಮನದಲ್ಲೇ ಸಂಬೋಧಿಸಿಕೊಂಡದ್ದಾಗಿದೆ. ಆದರೆ, ನಿನಗೆ ನಾ ಇನ್ನೂ ಡಿಯರ್ ಆಗಿಲ್ಲ ಮತ್ತು ನನ್ನ ಪ್ರೀತಿಯ ಬಗ್ಗೆ ನಿನಗಿನ್ನೂ ಅರಿವಿಲ್ಲ ಎಂದುಕೊಂಡಿದ್ದೇನೆ. ಅದಕ್ಕೋಸ್ಕರ ಡಿಯರ್ ಎಂದು ಸಂಬೋದಿಸಿಲ್ಲ. ತಪ್ಪಾಗಿದ್ದರೆ ಕ್ಷಮಿಸು. ನೀ ನನ್ನ ಒಪ್ಪುತ್ತೀಯಾ ಮತ್ತು ಪ್ರೀತಿಸುತ್ತೀಯಾ ಎನ್ನುವ ಭರವಸೆಯಲ್ಲೇ, ನನ್ನ ಪ್ರೀತಿಯನ್ನು ಈ ಪತ್ರದಲ್ಲಿ ನಿವೇದಿಸಿಕೊಂಡಿದ್ದೇನೆ. ದಯಮಾಡಿ ಕೋಪಗೊಳ್ಳದೆ ಪೂರ್ತಿ ಪತ್ರವನ್ನು ಓದಿ, ನಿನ್ನ ನಿರ್ಧಾರವನ್ನು ಆದಷ್ಟು ಬೇಗ ತಿಳಿಸು. ಆ ನಿನ್ನ ನಿರ್ಧಾರವು ನನ್ನ ಪ್ರೀತಿಯನ್ನು ಹುಸಿಗೊಳಿಸುವುದಿಲ್ಲವೆಂದುಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಒಲವಿನ ಓಲೆಯನ್ನು ಹರಿಯದಿರು ಅಥವಾ ಸುಡದಿರು. ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ ಒಡೆಯಬೇಡ ಒಲವಿಲ್ಲದೇ ನೋಯುತ್ತಿರುವ ಎದೆಯ ಲಕ್ಷ್ಮಿ, ನಾ ಹುಟ್ಟಿದಾಗ ಬಹುಶಃ ನೀ ಇನ್ನೂ ಜನ್ಮವೆತ್ತಿರಲಿಲ್ಲವೇನೋ? ಅದ್ಯಾಕೋ ನೀ ನನಗಿನ್ನು ಸ್ವಲ್ಪ ಚಿಕ್ಕವಳಿರಬೇಕು ಎಂದೆನಿಸುತ್ತದೆ. ಈಗ ಆ ವಿಷಯವೇಕೆಂದರೇ ನಮ್ಮಿಬ್ಬರ ಹುಟ್ಟಿಗೂ ಮುನ್ನ ಪ್ರೀತಿಯಿತ್ತು! ಹುಟ್ಟಿನಿಂದಲೇ ನಾವು ಪ್ರೀತಿಸಲು ತೊಡಗುತ್ತೇವೆ. ನಮ್ಮನ್ನೂ ಕೆಲವರು ಪ್ರೀತಿಸತೊಡಗುತ್ತಾರೆ. ಹೆತ್ತ ಅಮ್ಮನ

ನಿನ್ನದೇ ಧ್ಯಾನದಲ್ಲಿ... ಪರೀಕ್ಷೆ ಕನವರಿಸುತ್ತಾ...

(ನಿನ್ನ ಮನೆಯ, ನನ್ನ ಮನದ ಲಕ್ಷ್ಮಿಯು ನೀನು... (ಮುಂದುವರಿದದ್ದು) ಅಂದು ರೈಲು ಮುಂದೆ ಮುಂದೆ ಹೋಗಿ ಬಹಳ ಹೊತ್ತಾದರೂ, ನಾನು ನಿಂತಲ್ಲೇ ನಿಂತಿದ್ದೇ ಕಣೇ ಹುಡುಗಿ. ನಿನ್ನ ದರ್ಶನವಾದ ಕ್ಷಣಗಳು ಮತ್ತೆ ಮರುಕಳಿಸಲಿ ಎನ್ನುವ ಹಾರೈಕೆ ಮನದಲ್ಲಿ. ನಿನ್ನನ್ನು ನೋಡಿದಕ್ಕೆ ಒಳಗೊಳಗೇ ತುಂಬಾ ಖುಷಿ. ಯಾರಾದರೂ ನೋಡಿದರೂ ಪರವಾಗಿಲ್ಲ, ತಿಕ್ಕಲ ಎಂದುಕೊಂಡರೂ ಸರಿಯೇ ಎಂದು, ಒಮ್ಮೆ ನನ್ನ ಬಲಗೈಯ ಮುಷ್ಟಿಯನ್ನಿಡಿದು ಮೇಲಕ್ಕೆತ್ತಿ, ಹಿಂದಕ್ಕೆ ಎಳೆಯುತ್ತಾ “yeh! yeh! I got it” ಎಂದು ಉದ್ಗರಿಸಿದೆ. ಒಲಿವೆನೇಕೆ? ನಲಿವೆನೇಕೆ? ನಿನ್ನನಂದು ಕಂಡೆನೇಕೆ? ನನ್ನ ಕೈಯ ಹಿಡಿವೆಯೇಕೆ? ಇಚ್ಚೆಲಭಿಸಿತೆಂದೆನೇಕೆ? ಹುಚ್ಚನಂತೆ ಕುಣಿವೆನೇಕೆ? (ತೀನಂಶ್ರೀ) ನನ್ನ ಖುಷಿಯನ್ನು ನೋಡಿ ನನಗೇ ನಾಚಿಕೆಯಾಯಿತು. ಮತ್ತೊಮ್ಮೆ ರೈಲು ಹೋದ ಕಡೆ ನೋಡಿ, ನಿನ್ನನ್ನು ಹೇಗಾದರೂ ಮಾಡಿ ಒಲೈಸಬೇಕೆಂಬ ಧೃಡವಾದ ನಿಶ್ಚಯದೊಂದಿಗೆ ಮನೆಯ ಕಡೆಗೆ ಹೆಜ್ಜೆ ಹಾಕಿದೆ. ಮನೆ ಹೊಕ್ಕವನೇ ಜರ್ಕಿನ್ ಕಿತ್ತೊಗೆದು, ಸೀದಾ ಬಚ್ಚಲು ಮನೆಗೆ ಹೋದೆ. ಹಂಡೆಯಲ್ಲಿ ನೀರು ಹಬೆಯಾಡುತಿತ್ತು. ದಿನಾಲು ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುತಿದ್ದವನು, ಅವತ್ತು ಅದ್ಯಾವ ದೆವ್ವ ನನ್ನಲ್ಲಿ ಹೊಕ್ಕಿತ್ತೋ ಕಾಣೆ, ಬಟ್ಟೆ ಬಿಚ್ಚಿದವನೇ ಸುಡುವ ನೀರನ್ನೇ ಭರಭರನೆ ಸುರಿದುಕೊಂಡೆ. ಜನ್ಮಕ್ಕಂಟಿದ ಸೋಂಬೇರಿಯೆಂಬ ಶಾಪ ವಿಮುಕ್ತಿಯಾಗಲಿ ಎಂದಿರಬೇಕು. ತುಂಬಿದ್ದ ಹಂಡೆ ಖಾಲಿಯಾಯಿತು. ಮೈ ಒರೆಸ