ಪೋಸ್ಟ್‌ಗಳು

ಡಿಸೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನವೀನ್ ಮಧುಗಿರಿಯವರ ‘ನವಿಗವನ’ : ಆಯುವ ಕವಿ ನವೀನ್.

ಇಮೇಜ್
ರಸ್ತೆ ಬದಿಯಲ್ಲಿ ಹಾಡಿ ಅನ್ನ ಉಣ್ಣುವ ಟೋನಿ ಪ್ರತೀದಿನ ತನ್ನ ಕರುಳು ಹಿಂಡುವಷ್ಟು ಬಾರಿ ಗಿಟಾರಿನ ತಂತಿ ಮೀಟುವನು         * ರಸ್ತೆ ಬದಿಯಲ್ಲಿ ತರಕಾರಿ ಮಾರಲು ಬಂದವನು ತನ್ನಸಿವ ತಕ್ಕಡಿಯಲ್ಲಿ ತೂಗಿದ         * ತುಂಬಾ ಹೊತ್ತಿದ್ದರೆ ವಾಸನೆ ಬರುವುದೆಂದು ಅತ್ತರನ್ನ ಬಳಿದರು ಬದುಕಿಡೀ ಮೋರಿ ಬಳಿದೆ ಬದುಕಿದವನು ಶವವಾಗಿ ಮಲಗಿದ್ದ         * ಬಣ್ಣ ಮಾಸಿದ ಗೋಡೆಯ ತುಂಬಾ ಬಡತನದ ಚಿತ್ರ         * ಅಕ್ಷರದಿಂದ ದೇಶವನ್ನು ಬದಲಿಸಬಹುದು! ನಿಜಾ, ಆದರೆ ಹಸಿವಿಗೆ ಅನ್ನವೇ ಬೇಕು.         * ರೈತ ದೇಶದ ಬೆನ್ನೆಲುಬು ಬಡತನ ರೈತನ ನೆರಳು         * ನಮ್ಮ ಮನೆಗೆ ಬಾಗಿಲಿಡುತ್ತೇವೆ ಹಕ್ಕಿಗಳ ಮನೆ ಕಿತ್ತು         * ಊರ ತುಂಬಾ ಬೆದೆಗೆ ಬಂದ ನಾಯಿಗಳೆ, ಉಚ್ಚೋ... ಎಂದೋಡಿಸಲು ಎಳೆಯ ಹೆಣ್ಣು ಕೂಸಿನ್ನು ಮಾತು ಕಲಿತಿಲ್ಲ         * ಬಳೆಗಳ ಸದಿಲ್ಲದೇ ಇಲ್ಲಿ ಏನೂ ಆಗುವುದಿಲ್ಲ ಎರಡು ರೀತಿಯ ಹಸಿವಿನಲ್ಲೂ, ಅವುಗಳ ಮಹತ್ವ ದೊಡ್ಡದು.         *          ಈ ಮೇಲಿನ ಹನಿಗವಿತೆಗಳನ್ನು ಹತ್ತನೇ ತರಗತಿಗೆ ವಿದ್ಯಾಭ್ಯಾಸವನ್ನು ಬಿಟ್ಟ ಯುವಕನೊಬ್ಬ ಬರೆದಿದ್ದಾನೆಂದರೆ ನಂಬಲೇಬೇಕು. ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ವೀರಾಪುರ ಗ್ರಾಮದ ರಘುನಂದನ್ ವಿ.ಆರ್. ಎಂಬ ಯುವಕ ‘ ನವೀನ್ ಮಧುಗಿರಿ ’ ಎಂಬ ಕಾವ