ಪೋಸ್ಟ್‌ಗಳು

ಜೂನ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪುಸ್ತಕ ಪ್ರಾಧಿಕಾರದಲ್ಲಿ ಪಾರದರ್ಶಕತೆಯಿಲ್ಲ

ಇಮೇಜ್
        ಕನ್ನಡ ಪುಸ್ತಕ ಪ್ರಾಧಿಕಾರವು ಇತ್ತೀಚೆಗೆ ತಾನೇ ೨೦೧೦ರ ಸಗಟು ಖರೀದಿ ಪ್ರಕ್ರಿಯೆಯನ್ನು ಮುಗಿಸಿದೆ. ಆದರೆ, ಆಯ್ಕೆಯಾದ ಮತ್ತು ತಿರಸ್ಕೃತಗೊಂಡ ಪುಸ್ತಕಗಳ ಪಟ್ಟಿಯನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿಲ್ಲ. ಬಹುತೇಕ ಎಲ್ಲಾ ವಿಷಯಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವ ಪ್ರಾಧಿಕಾರವು ಈ ವಿಷಯದಲ್ಲಿ ಮೌನವಾಗಿರುವುದು ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ೨೦೧೦ರಲ್ಲಿ ಮೊದಲ ಮುದ್ರಣವಾಗಿ ನನ್ನ ‘ ಮಳೆಯಾಗು ನೀ... ’ ಎಂಬ ಕವನವನ್ನು ಪ್ರಕಟಿಸುವುದರ ಮೂಲಕ ನಮ್ಮ ಗೋಮಿನಿ ಪ್ರಕಾಶನವನ್ನು ಪ್ರಾರಂಭಿಸಿ ಇದುವರೆವಿಗೂ ಹನ್ನೆರಡು ಪುಸ್ತಕಗಳನ್ನು ಪ್ರಕಟಿಸಿದ್ದೇವೆ.  ನಮ್ಮ ಪ್ರಕಾಶನದ ಮೊದಲ ಪುಸ್ತಕವು ತಿರಸ್ಕೃತಗೊಂಡಿದೆ ಎಂಬ ವಿಚಾರ ಪ್ರಾಧಿಕಾರವನ್ನು ಸಂಪರ್ಕಿಸಿದಾಗ ತಿಳಿದುಬಂತು. ಆದರೆ, ಪುಸ್ತಕ ತಿರಸ್ಕೃತಗೊಂಡದಕ್ಕೆ ಸೂಕ್ತ ಕಾರಣ ಅಧ್ಯಕ್ಷರಾದ ಡಾ|| ಬಂಜಗೆರೆ ಜಯಪ್ರಕಾಶ್‌ರವರನ್ನು ಮತ್ತು ಕಛೇರಿಯನ್ನು ಫೋನಿನ ಮೂಲಕ ಸಂಪರ್ಕಿಸಿ ಎರಡು ವಾರಗಳ ಮೇಲಾದರೂ ತಿಳಿದು ಬರುತ್ತಿಲ್ಲ. ಪ್ರಾಧಿಕಾರದ ಈ ಹಿಂದಿನ ಬೆಂಗಳೂರಿನ ಪುಸ್ತಕ ಮೇಳದ ಮಳಿಗೆಯ ವಿಚಾರದಲ್ಲೂ ಈಗಾಗಲೇ ನಮ್ಮ ಪ್ರಕಾಶನಕ್ಕೆ ಅನ್ಯಾಯವಾಗಿದ್ದು ಪುಸ್ತಕ ಪ್ರಕಾಶನ ಕುರಿತು ಜಿಗುಪ್ಸೆ ತಳೆಯುವಂತಾಗಿದೆ.                                                         -       ಗುಬ್ಬಚ್ಚಿ ಸತೀಶ್,