ಪೋಸ್ಟ್‌ಗಳು

ನವೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೈಕುಗಳು ಮತ್ತು ಮನೋಜ

        ನನಗೆ ಮೊದಲಿಗೆ ಹೈಕುಗಳು ಪರಿಚಯವಾಗಿದ್ದು ತುಮಕೂರಿನ ಗ್ರಂಥಾಲಯದಲ್ಲಿ ದೊರೆತ ಅಂಕುರ್ ಬೆಟಗೆರಿಯವರ ‘ ಹಳದಿ ಪುಸ್ತಕ ’ ದ ಮೂಲಕ. ಆ ಪುಸ್ತಕದ ಮೂಲಕ ನನಗೆ ಹೈಕುಗಳ ಪ್ರಾಥಮಿಕ ಮಾಹಿತಿ ದೊರೆಯಿತಾದರೂ ನನಗೆ ಹೈಕುಗಳನ್ನು ಬರೆಯಬೇಕು ಎಂದೆನಿಸಲಿಲ್ಲ. ಆದರೆ, ಸುಮಾರು ಅದೇ ಸಮಯದಲ್ಲಿ ಒಂದು ದಿನ ನಾನು ವೃತ್ತಿಯಲ್ಲಿ ವೈದ್ಯರಾದ ನನ್ನ ಹಿರಿಯ ಮಿತ್ರರಾದ ಡಾ|| ಕೆ.ಬಿ. ರಂಗಸ್ವಾಮಿಯವರ ಕ್ಲಿನಿಕ್ಕಿಗೆ ಹೋಗಿದ್ದೆ. ಅವರ ‘ ಗರಿಕೆ ’ ಪುಸ್ತಕದ ಹನಿಗವಿತೆಗಳನ್ನು ಬಹಳವಾಗಿ ಮೆಚ್ಚಿದ್ದ ನಾನು ಅವರ ಪುಸ್ತಕವೊಂದನ್ನು ಪ್ರಕಟಿಸುವ ಆಸೆ ವ್ಯಕ್ತಪಡಸಿದೆ. ಆಗ ಅವರು ಬೆಳದಿಂಗಳ ಹೈಕುಗಳನ್ನು ಕುರಿತು ಹೇಳಿದರು. ಅಲ್ಲಿಯೇ ಕೆಲವನ್ನು ಓದಿದ ನಾನು ಮತ್ತು ನನ್ನ ಶ್ರೀಮತಿ ಆಶ್ಚರ್ಯಚಕಿತರಾದೆವು. ನಾನು ಅದೇ ಪುಸ್ತಕವನ್ನು ಪ್ರಕಟಿಸುವುದಾಗಿ ಅವರಿಂದ ಅನುಮತಿ ಪಡೆದೆ. ಅವರು ಅದರ ಜೊತೆಜೊತೆಯೇ ಅವರದೇ ಸಮೃದ್ಧ ಪ್ರಕಾಶನದ ಮೂಲಕ ‘ ಗರಿಕೆ ’ ಯ ಮುಂದುವರೆದ ಭಾಗದಂತಿರುವ ‘ ಕವಿತೆಗಷ್ಟೇ ಸಾಧ್ಯ ’ ಪುಸ್ತಕವನ್ನು ಪ್ರಕಟಿಸುವುದಾಗಿ ಹೇಳಿದರು. ಈ ಬೆಳದಿಂಗಳ ಹೈಕುಗಳನ್ನು ನಾನು ನನ್ನ ಸಹೋದ್ಯೋಗಿ ಕವಿಮಿತ್ರ ಮನೋಜನಲ್ಲಿ ಹಂಚಿಕೊಂಡಾಗ ಅಂದೇ ಅವನ ಕಣ್ಣುಗಳಲ್ಲಿ ಕುತೂಹಲಭರಿತ ಮಿಂಚೊಂದು ಹರಿದಿತ್ತು.         ಅಂದಿನಿಂದ ಆತ ನಮ್ಮ ಗೋಮಿನಿ ಪ್ರಕಾಶನದಲ್ಲಿ ‘ ಬೆಳದಿಂಗಳ ಹೈಕುಗಳು ’ ಪುಸ್ತಕ ಪ್ರಕಟವಾಗಿ ಬಿಡುಗಡೆಯಾಗುವ ಕ್ಷಣವನ್ನು ಕಣ್ಣಲ್ಲಿ ಎಣ

“ಬೆಳದಿಂಗಳು ಮತ್ತು ಮಳೆ” ಮತ್ತು ಒಂದು ಕಿವಿಮಾತು

ಇಮೇಜ್
ಪ್ರೀತಿಯ ಗೆಳೆಯರೇ,           ಇಂದು ಸಂಜೆ ಪ್ರೀತಿಯ ಗೆಳೆಯರೊಬ್ಬರು, ಸರ್ ನೀವು ಬನ್ನಿ ನಮ್ಮ ಅತಿ ಸಣ್ಣಕತೆಗಳ ಫೇಸ್ ಬುಕ್ ಗುಂಪಿಗೆ ಎಂದು ಆಹ್ವಾನಿಸಿದರು. ಪರಸ್ಪರ ಅಭಿಪ್ರಾಯಗಳನ್ನು ಗೇಮ್ ಮಾಡುವ ಆಲೋಚನೆ ಅವರಿಗಿತ್ತು. ನಾನು “ ಬೆಳದಿಂಗಳು ಮತ್ತು ಮಳೆ ” ಪುಸ್ತಕವನ್ನು ಓದಿರುವಿರಾ ಎಂದು ಕೇಳಿ, ಆ ಪುಸ್ತಕ ಕುರಿತು ಹೇಳಿದೆ. ಅವರು ಇಲ್ಲವೆಂದರು. ಆಗಿದ್ದರೆ ಮೊದಲು ಆ ಪುಸ್ತಕವನ್ನು ಓದಿ, ಆ ರೀತಿಯಾಗಿ ನಿಮ್ಮದೇ ಒಂದಷ್ಟು ಕತೆಗಳನ್ನು ಬರೆದುಕೊಡಿ ನಾನೇ ಪ್ರಕಟಿಸುತ್ತೇನೆ ಎಂದೆ. ಅವರು ಸದ್ಯಕ್ಕೆ ಆಯ್ತು ಎಂದರು. ಅವರ ಆಹ್ವಾನವನ್ನು ನಾನು ತಿರಸ್ಕರಿಸುವುದಕ್ಕೆ ನನ್ನ ಮೇಲೆ ಸಿಟ್ಟು ಅಥವಾ ಬೇಜಾರು ಮಾಡಿಕೊಂಡಿರಬಹುದು. ನಾನು ಓದುವುದು ಮತ್ತು ಬರೆಯುವದನ್ನು ಬಿಟ್ಟು ಉಳಿದಿದ್ದೇಲ್ಲಾ ಟೈಮ್ ವೇಸ್ಟ್ ಎಂದು ಭಾವಿಸಿರುವವನು. ಅವರ ಒಳ್ಳೆಯದಕ್ಕೇ ಹೇಳಿದ್ದೇನೆ ಎಂದೂ ಹೇಳಿದ್ದೇನೆ. ಮಿಕ್ಕಿದ್ದು ಅವರಿಗೆ ಬಿಟ್ಟದ್ದು.           ನಿಮಗೆ ನಮ್ಮ ಪ್ರಕಾಶನದಿಂದ ಪ್ರಕಟಗೊಂಡಿರುವ ವಿ.ಗೋಪಕುಮಾರ್ ರವರ “ ಬೆಳದಿಂಗಳು ಮತ್ತು ಮಳೆ ” ನ್ಯಾನೋಕತೆಗಳ ಸಂಕಲನ ಗೊತ್ತಿರಬಹುದು. ಈ ಪುಸ್ತಕವನ್ನು ಓದಿ, ತಮ್ಮ ಅನಿಸಿಕೆಯನ್ನು ಕನ್ನಡ ಸಿನಿಮಾರಂಗದಲ್ಲಿ ಸಹ ನಿರ್ದೇಶಕನಾಗಿರುವ ಪ್ರವೀಣ್ ಕುಮಾರ್ ಜಿ. ಯವರು ಪ್ರೀತಿಯಿಂದ ಹಂಚಿಕೊಂಡಿದ್ದಾರೆ.             ನೀವು ಈ ಪುಸ್ತಕವನ್ನು ಇನ್ನೂ ಓದಿಲ್ಲವಾದರೆ ಮರೆಯದೆ ಓದಿ ನಿಮ್ಮ ಅಭಿಪ್ರಾಯವನ್