ಪೋಸ್ಟ್‌ಗಳು

ಫೆಬ್ರವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರುತಿ ಪುಸ್ತಕದ ಮುನ್ನುಡಿ ಮತ್ತು ಬೆನ್ನುಡಿ

ಇಮೇಜ್
 ಸಾವು ಗೆದ್ದವಳಿಗೊಂದು ಸಲಾಮ್ ‘ ವಿಷ್ಣುಪ್ರಿಯ ’ ಎಂಬ ಕಾವ್ಯನಾಮದಲ್ಲಿ ನಾನು ಬರೆಯುತ್ತಿದ್ದ ವೈ e ನಿಕ ಲೇಖನಗಳನ್ನು ವಿಜ್ಞಾನಗಂಗೆ ಬ್ಲಾಗ್ ‌ ನಲ್ಲಿ ( vi jnanagange.blogspot.com ) ಅಪ್ ‌ ಡೇಟ್ ಮಾಡುತ್ತಿದ್ದೆ . ಲೇಖನಗಳಿಗೆ ಪ್ರತಿಕ್ರಿಯೆ ಕೊಟ್ಟವರು ಬ್ಲಾಗಿಗರಾಗಿದ್ದರೆ , ಅವರ ಬ್ಲಾಗುಗಳನ್ನೂ ಓದುವ ಅಭ್ಯಾಸ ಬೆಳೆಸಿಕೊಂಡಿದ್ದರ ಪರಿಣಾಮ ಶೃತಿಯ ಶ್ರೀವಿರಾಮ ( shreevirama.blogspot.in ) ಬ್ಲಾಗ್ ಕಣ್ಣಿಗೆ ಬಿತ್ತು . ಸುಮ್ಮನೆ ಕಣ್ಣಾಡಿಸಿದಾಗ , ಓದಬೇಕೆನಿಸಿತು . ಓದುತ್ತಾ ಹೋದಂತೆ , ಆ ಬರಹಗಳಲ್ಲೊಂದು ಪ್ರತಿಭೆಯಿದೆ ಎನಿಸಿ , ಬ್ಲಾಗಿಗರ ಪ್ರೊಫೈಲ್ ನೋಡಿದೆ . ‘ ಆಸ್ಟಿಯೋ ಸರ್ಕೋಮಾ ಎಂಬ ಮಾಹಾಮಾರಿಯನ್ನು ಗೆದ್ದಿ z ನೆ ’ ಎಂಬ ದಿಟ್ಟೆದೆಯ ಸಂದೇಶ ರಾರಾಜಿಸುತ್ತಿತ್ತು . ಬೆಚ್ಚಿಬಿದ್ದೆ , ಅರೆ P ಣ ಅಷ್ಟೇ ! ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಎಂಥಾ ದೃಢ ಮನೋಭಾವ ! ಒಮ್ಮೆ ಮಾತಾಡಿಸಬೇಕು ಎನಿಸಿತು . ಅಳುಕಿನಿಂದಲೇ ಮಾತನಾಡಿಸಿದಾಗ ಉತ್ತರಿಸಿದ್ದು ಧೈರ್ಯದ ಶರಧಿ ! ಸ್ವಾನುಭವದ ಬುತ್ತಿಯನ್ನು ‘ ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ ’ ಕೃತಿಯ ಮೂಲಕ ಬಿಚ್ಚಿಡುತ್ತಿರುವ ಶೃತಿಯ ಧೈರ್ಯದ ಬಗ್ಗೆ ಇಷ್ಟು ಹೇಳಲೇಬೇಕಾದದ್ದು ಅನಿವಾರ್ಯ . ಒಂದು ಸಮಸ್ಯೆ ಅಥವಾ ರೋಗವನ್ನು ಎದುರಿಸುವಲ್ಲಿ ಎಷ್ಟರಮಟ್ಟಿಗಿನ ಧೈರ್ಯ ಪ್ರ