ಪೋಸ್ಟ್‌ಗಳು

ಮೇ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಲ್ಲನಲ್ಲೆಯರ ಮೊದಲ ಅಕ್ಷರ ಜಾತ್ರೆ

ಇಮೇಜ್
        ಮೊದಲಿಗೆ ನಾನು ಹತ್ತಿರದಿಂದ ನೋಡಿದ ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ತುಮಕೂರಿನಲ್ಲಿ ಜರುಗಿದ್ದು. ಆಗ ನಾನು ಗೆಳೆಯ ವಿಶುವಿನ ಜೊತೆ ತುಮಕೂರಿಗೆ ಬಂದಿದ್ದೆ. ಅಂದು ಚುಟುಕು ಕವಿಗೋಷ್ಠಿಯಿತ್ತು. ನಾವು ಬರುವ ಹೊತ್ತಿಗೆ ಸರಿಯಾಗಿ ಡುಂಢಿರಾಜರು “ ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕಗಳನ್ನು ಕೊಂಡೋದಿರಿ ” ಎಂದು ತಮ್ಮ ಚುಟುಕವನ್ನು ವಾಚಿಸಿದ ಕೂಡಲೇ ಕಿವಿಗಡಚಿಕ್ಕುವಂತೆ ಚಪ್ಪಾಳೆಯ ಸುರಿಮಳೆಯಾಯಿತು. ನಂತರ ಬಹಳ ಜನವಿದ್ದುದರಿಂದಲೋ ಏನೋ ನಮಗಲ್ಲಿ ಬಹಳ ಹೊತ್ತು ನಿಲ್ಲಲಾಗದೆ ನಾವು ಬೇಗ ಹೊರಬಂದೆವು ಎಂಬುದು ನೆನಪು. ಊಟಕ್ಕೆ ತುಂಬಾ ಗಜಿಬಿಜಿಯಿತ್ತು ಮತ್ತು ಪುಸ್ತಕ ಮಾರಾಟ ಮಳಿಗೆಗಳ ಬಳಿ ಬಹಳ ಧೂಳಿತ್ತು ಎಂಬ ಅಸ್ಪಷ್ಟ ನೆನಪು. ಆ ಸಮಯದಲ್ಲಿ ಗುಬ್ಬಿಯ ನಮ್ಮ ರಾಮನ್ ಇನ್‌ಫೋಟೆಕ್ ಕಂಪ್ಯೂಟರ್ ತರಬೇತಿ ಸಂಸ್ಥೆಯಿಂದ ಜ್ಞಾನಪೀಠ ಪ್ರಶಸ್ತಿ ವೀಜೆತ ಕನ್ನಡ ಸಾಹಿತಿಗಳ ಬದುಕು ಬರಹದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಏರ್ಪಡಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಶೋ ನೀಡಿದ್ದೆವು. ಅದೆಲ್ಲವನ್ನು ವಿದ್ಯಾರ್ಥಿಯಾಗಿದ್ದ ಕೇಶವಮೂರ್ತಿ ಎಂಬುವವರು   ಅಚ್ಚುಕಟ್ಟಾಗಿ ನಿಭಾಯಿಸಿದ್ದರು.   ಅವರೀಗ ಶಿಕ್ಷಕರಾಗಿದ್ದಾರೆ.           ಸುಮಾರು ದಶಕದ ನಂತರ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಮಯಕ್ಕೆ ನನ್ನ ಮೊದಲ ಪುಸ್ತಕ “ ಮಳೆಯಾಗು ನೀ... ” ಪ್ರಕಟವಾಗಿತ್ತು. ಒಂದೇ ಪುಸ್ತಕ ವಿದ್ದದರಿಂದ ಪುಸ್ತಕ ಮಾರಾಟ ಮಳಿಗೆ ಹಾಕುವ ಗೋಜಿಗೆ ಹೋ