ಪೋಸ್ಟ್‌ಗಳು

ಸೆಪ್ಟೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

“ನಲ್ಲನಲ್ಲೆ” ಗೆ ಒಂದು ವರ್ಷ.

“ಅವುಗಳು ಎಷ್ಟಾದರೂ ಉಸಿರಾಡುವ ಶಬ್ಧಗಳು ನನ್ನ ಅಣತಿಯಂತೆ ಆದರೂ ಅವು ಶಾಶ್ವತ”          - ಶ್ರೀಮತಿ ವಿಜಯಲಕ್ಷ್ಮೀ (ದಿ.ಕಿ.ರಂ.ನಾಗರಾಜರ ಪತ್ನಿ) ಪ್ರೀತಿ ನಮ್ಮ ಹೃದಯದಲ್ಲಿರುತ್ತದೆ. ಆದರೆ, ಅದು ಗೊತ್ತಾಗುವುದು ನಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಮತ್ತೊಂದು ಪ್ರೀತಿಯ ಹೃದಯ ಸಿಕ್ಕಾಗ ಮಾತ್ರ. ಪ್ರೀತಿ ಸಾರ್ಥಕವಾಗುವುದೂ ಆವಾಗಲೇ. ಇಲ್ಲವಾದರೆ ಪ್ರೀತಿ ವ್ಯರ್ಥವಾಗುತ್ತದೆ ಮತ್ತು ತನ್ನಲ್ಲೆ ಸೊರಗುತ್ತದೆ. ಅದೃಷ್ಟಕ್ಕೆ, ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ನಾನು ಕಾದಂತೆ, ತಾನೂ ಕಾಯುತ್ತಿದ್ದ, ನನ್ನ ನಲ್ಲೆಯ ಪ್ರೀತಿಯ ಹೃದಯ ಪ್ರೀತಿಯನ್ನು ನಿವೇದಿಸಿಕೊಂಡಾಗ, ಪ್ರೀತಿಗಾಗಿ ಪರಿತಪಿಸುತ್ತಿದ್ದ ನನ್ನ ಹೃದಯ ಹಾಲೆರೆಯಿತು. ಮರೆಯಲಾಗದ ಅಮೃತಘಳಿಗೆಯಲ್ಲಿ ಟಿಸಿಲೊಡೆದ ನಲ್ಲೆನಲ್ಲೆಯರ ಪ್ರೀತಿ ಮೊಗ್ಗಾಗಿ, ಹೂವಾಗಿ, ಬೀಜವಾಗಿ ಮತ್ತೊಂದು ಪುಟ್ಟ ಹೃದಯವನ್ನು ಕಾಣಿಕೆಯಾಗಿ ಪಡೆಯಿತು. ಈ ಮೇಲಿನ ಸಾಲುಗಳು ನನ್ನ ಅಕ್ಷರ ಪ್ರೀತಿಗೂ ಒಪ್ಪುತ್ತವೆ. ಚಿಕ್ಕಂದಿನಲ್ಲೆಯೇ ಓದುವುದನ್ನು ರೂಢಿಸಿಕೊಂಡ ನನಗೆ, ಎಂಟನೇ ತರಗತಿಯಲ್ಲೇ ಬರೆಯುವ ಗೀಳು ಹತ್ತಿತು. ಆದರೆ, ಭಯ! ಮತ್ತು ಬರೆಯುವವರು ಸಾಮಾನ್ಯರಲ್ಲ, ದೇವಲೋಕ ಅಥವಾ ಇನ್ಯಾವುದೋ ಲೋಕದಿಂದ ಬಂದವರೆಂಬ ನನ್ನದೇ ಆದ ಭಾವನೆ! ಅದಕ್ಕೋ, ಏನೋ ಎಂಟನೇ ತರಗತಿಯಲ್ಲಿ ಎಲ್ಲಾ ಭಯವನ್ನು ಕಿತ್ತೊಗೆದು ಬರೆದ “ತ್ಯಾಗ” ವೆಂಬ ಕಥೆಯ ಅರ್ಧ ಪುಟ ಚೂರು ಚೂರಾಗಿ ನೀರಿನ ಒಲೆ ಸೇರಿ ಅಮರವಾಯಿತು! ನೀವು ನಂಬಲೇಬೇಕು ಈ