ಶನಿವಾರ, ಡಿಸೆಂಬರ್ 3, 2011

ಸರಿಸಾಟಿ

ಆ ಚಂದ್ರನಲ್ಲದೆ
ನಿನಗ್ಯಾರು ಸಮ
ಹೇಳೆ ಹೇಳೆ
ನನ್ನೆದೆಯ ಸುಮ

ಅವನ ಬೆಳಕಿಲ್ಲದ
ರಾತ್ರಿಯೇಕೆ ಸುಮ
ಕೇಳೆ ಕೇಳೆ
ನನ್ನೆದೆಯ ಸುಮ

ಆ ಚಂದ್ರನಿಲ್ಲದ
ಬಾನು ಬಾನಲ್ಲ ಸುಮ
ನೀನಿಲ್ಲದ ಬದುಕು
ಬದುಕಲ್ಲ ಸುಮ.

           - ಗುಬ್ಬಚ್ಚಿ ಸತೀಶ್.

4 ಕಾಮೆಂಟ್‌ಗಳು:

  1. ಸು೦ದರವಾದ ಸಾಲುಗಳು....ನಿಮ್ಮ ಕವನಕ್ಕೆ ಸರಿಸಾಟಿ ಯಾರು...??

    ಪ್ರತ್ಯುತ್ತರಅಳಿಸಿ
  2. ನನ್ನ ಬ್ಲಾಗಿಗೆ ಬಂದು ಕವನ ಓದಿದ್ದಕ್ಕಾಗಿ ಧನ್ಯವಾದಗಳು ಸಾರ್.

    ಸರಿಸಾಟಿ,
    ಒಲುಮೆಯ ಈ ಗೀತೆಯೊಂದಿಗೆ ಬಹು ದಿನಗಳ ನಂತರ ಬ್ಲಾಗ್ ಅಪ್ ಡೇಟ್ ಮಾಡಿದ್ದೀರ. ಅರ್ಪಣಾ ಭಾವದ ಕವನವಿದು.

    ನನ್ನ 2ನೇ ಬ್ಲಾಗು:
    www.badari-notes.blogspot.com

    ಪ್ರತ್ಯುತ್ತರಅಳಿಸಿ
  3. ನಿಮ್ಮ ಪುಟ್ಟ ಪುಟ್ಟ ಸುಂದರ ಸಾಲುಗಳಿಗೆ ಆ ಸುಮವೇ ಸರಿಸಮ..... ಚನ್ನಾಗಿದೆ ಸರ್

    ಪ್ರತ್ಯುತ್ತರಅಳಿಸಿ

ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...