“ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ”
ಗೆಳೆತನ ಕುರಿತ ಕನ್ನಡದ ಕೆಲವು ಸಾಲುಗಳು : “ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ” - ಗೆಳೆಯನೊಬ್ಬನ ಡೈರಿಯ ಮೊದಲ ಪುಟದಿಂದ. (ನನ್ನ ಜೀವನಕ್ಕೆ ಹೆಚ್ಚು ಅನ್ವಯ) “ನೀ ಹುಟ್ಟಿದಾಗ ಧಾರಾಕಾರ ಮಳೆ ಬೀಳುತ್ತಿತ್ತು. ಯಾಕಂತ ಗೊತ್ತಾ? ನಕ್ಷತ್ರವೊಂದನ್ನು ಕಳಿಸಿಕೊಡುವಾಗ ಬಾನು ಅಳುತ್ತಿತ್ತು. ಸುಂದರ ನಕ್ಷತ್ರವೊಂದರ ಸ್ನೇಹ ಪಡೆದ ನಾನು ಅದೃಷ್ಟಶಾಲಿ.” - ಬರೆದವರು ಗೊತ್ತಿಲ್ಲ. “ಗೆಳೆತನವೆಂಬುದು ಆಶ್ರಯ ನೀಡುವ ಒಂದು ಬೃಹತ್ ವೃಕ್ಷ” - ಸ್ಯಾಮ್ಯುಯಲ್ ಟೇಲರ್ ಕೋಲರಿಜ್. “ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದುವಚನ ಮೂರ್ಲೋಕ ಗೆಲ್ಲುವುದು ತಿಳಿಯಾ, ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ. ಮೂರು ದಿನಗಳ ಬಾಳು ಘಮಘಮಿಸುತಿರಲಿ” - ಚೆನ್ನವೀರ ಕಣವಿ. ನನ್ನವೆರಡು : “ನನಗೆ ದೇವರ ಮೇಲೆ ನಂಬಿಕೆಯಿದೆ. ಏಕೆಂದರೆ? ನಾನು ದೇವರನ್ನು ಗೆಳೆಯರ ರೂಪದಲ್ಲಿ ನೋಡಿದ್ದೇನೆ” - ಗುಬ್ಬಚ್ಚಿ ಸತೀಶ್. “ನನ್ನೆಲ್ಲಾ ನೋವುಗಳನ್ನು ನೆನೆದು ಇನ್ನೇನು ಅಳಬೇಕು, ಅಷ್ಟರಲ್ಲಿ ಅದ್ಯಾವ ಮಾಯೆಯಲ್ಲಿ ಬಂದರೋ ಗೆಳೆಯರು! ಕಚಗುಳಿಯಿಟ್ಟು ನನ್ನನ್ನು ಮನ ತುಂಬಾ ನಗಿಸಿದರು. ಬಂದ ದಾರಿಗೆ ಸುಂಕವಿಲ್ಲವೆಂದು ಅಳುವು ಕೊರಗಿ ಸತ್ತಿತು”. - ಗುಬ್ಬಚ್ಚಿ ಸತೀಶ್