ಬ್ಲಾಗ್ ಆರ್ಕೈವ್

ಶುಕ್ರವಾರ, ಜೂನ್ 3, 2011

ಬೇಕಾಗಿದ್ದಾರೆ.

ಅವಡುಗಚ್ಚಿ ಮೂಟೆಹೋರುವವರು
ಒಳಗೇನಿದೆ ಎಂದು ಕೇಳದವರು

ಅಂಟುಕೂತು ಕೀಬೋರ್ಡ್ ಕುಟ್ಟುವವರು
ದಣಿಯದ ಕಂಪ್ಯೂಟರ್‍ಗೆ ದಣಿಯದವರು

ಮಾತಿಗೆ ಮಾತು ಕೊಡದವರು
ಮಾತು ಬಂದರೂ ಮೂಕವಾದವರು

ಕಟ್ಟಿದ ಕೈ ಬಿಚ್ಚದವರು
ಆಗಾಗ ತಲೆ ಬಾಗುವವರು

ಕಿವಿಗಳಿಲ್ಲದೆ ಕವಿಗಳಾದವರು
ಮಾತಿನಲ್ಲೇ ಕಥೆ ಕಟ್ಟುವವರು

ಬಾಡಿಗೆಗೆ ಮಗುವ ಹೆರುವವರು
ಸಂಬಂಧಗಳ ಹಂಗಿಲ್ಲದೆ ಬದುಕುವವರು

ಸ್ವಾಭಿಮಾನದ ಹೆಸರು ಕೇಳದವರು
ಪ್ರಜಾಪ್ರಭುತ್ವ ಮರೆತಂತೆ ನಟಿಸುವವರು

ಅಘೋಷಿತ ದೊರೆಗಳಿಗೆ ಜೈ ಜೈ ಎನ್ನುವವರು
ಸಾಧಕರಲ್ಲದಿದ್ದರೂ ಥೈ ಥೈ ಕುಣಿಯುವವರು

ಮೇಲಿನ ಒಂದು ಅರ್ಹತೆ ನಿಮ್ಮದಾಗಿದ್ದರೆ
ಕ್ಷಮಿಸಿ, ಅರ್ಜಿ ಹಾಕುವ ಅವಶ್ಯಕತೆಯಿಲ್ಲ.

                                  - ಗುಬ್ಬಚ್ಚಿ ಸತೀಶ್.

11 ಕಾಮೆಂಟ್‌ಗಳು:

 1. ಸತೀಶ್ ಅವರೇ ಹೊಸ ಭಾಷೆ ರೀ.....
  ಚನ್ನಾಗಿದೆ......

  ಪ್ರತ್ಯುತ್ತರಅಳಿಸಿ
 2. ಕವನದ ಸಾಲುಗಳಲ್ಲಿರುವ ವ್ಯ೦ಗ್ಯದ ಮೊನಚು ಚೆನ್ನಾಗಿದೆ ಸತೀಶ್ ರವರೆ, ಅಭಿನ೦ದನೆಗಳು.

  ಪ್ರತ್ಯುತ್ತರಅಳಿಸಿ
 3. wow!
  ತುಂಬ ಇಷ್ಟವಾಯ್ತು.
  ಮೊನಚು ಮಾತಿನ ಬೀಜವೊಂದು
  ಅದು ಹೇಗೋ ಏನೋ
  ಇದರೊಳಗೆ ಅದ್ಭುತವಾಗಿ ಮೇಳೈಸಿಬಿಟ್ಟಿದೆ..

  ಪ್ರತ್ಯುತ್ತರಅಳಿಸಿ